ಹುಳಿಯಾರು : ಎಲ್ಲ ಕ್ಷೇತ್ರದಲ್ಲೂ ವಿಜ್ಞಾನ ಅನ್ವಯಿಸುತ್ತದೆ. ಸತ್ಯದ ಶೋಧನೆ ಮಾಡುವುದು ವಿಜ್ಞಾನದ ಗುರಿ. ಹಾಗಾಗಿ ಪ್ರಶ್ನೆ ಮಾಡದೇ ಯಾವುದನ್ನು ಒಪ್ಪಿಕೊಳ್ಳಬಾರದು. ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು ಎಂದು ಮುಖ್ಯಶಿಕ್ಷಕ ಹೇಮಂತ್ ಹೇಳಿದರು.
ಹುಳಿಯಾರಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಇನ್‌ಸ್ಟಾಗ್ರಾಮ್‌ನಲ್ಲಿ ಸಿಗುವಂತಹ ವಿಜ್ಞಾನದ ಮಹತ್ವದ ಮಾಹಿತಿಗಳನ್ನು ಬಳಸಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೌರವ್ಯೆಹ, ಭೂಮಿಯ ಪದರಗಳು, ಚಂದ್ರ ಗ್ರಹಣ, ಸೂರ್ಯಗ್ರಹಣ, ಜೀರ್ಣಾಂಗ ವ್ಯೆಹ, ಡ್ಯಾಮ್‌ಗಳ ಬಗ್ಗೆ, ಮಳೆ ನೀರು ಸಂರಕ್ಷಣೆ, ಜಲಚಕ್ರ, ಕಪ್ಪೆಯ ಜೀವನ ಚಕ್ರ ಇನ್ನು ಹಲವಾರು ವಿಷಯಗಳ ಬಗ್ಗೆ ಮಾದರಿಗಳನ್ನು ಮಾಡಿ ಅದರ ಬಗ್ಗೆ ಮಾಹಿತಿ ನೀಡಿದರು.