ಹೋರಾಟಗಾರರ ತ್ಯಾಗ ಇಂದಿನ ಪೀಳಿಗೆಗೆ ಮಾದರಿ Introduction Program

ಕೊರಟಗೆರೆಯ ಚಾಣಕ್ಯ Introduction Program ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಹಾಗೂ ಪರಿಚಯ ಕಾರ್ಯಕ್ರಮವನ್ನು ತುರುವೇಕೆರೆ ರಾಷ್ಟ್ರೀಯ ಸಂರಕ್ಷಣಾ ಪರಿಷತ್​ನ ನಿರ್ದೇಶಕ ಟಿ.ರಾಮಚಂದ್ರ ಉದ್ಘಾಟಿಸಿದರು. ಚಾಣಕ್ಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವಿಜಯ್​ ಕುಮಾರ್​, ಕಾರ್ಯದರ್ಶಿ ನರಸಿಂಹಲು ಬಾಬು ಇದ್ದರು.
ಕೊರಟಗೆರೆಯ ಚಾಣಕ್ಯ Introduction Program ಪಬ್ಲಿಕ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಹಾಗೂ ಪರಿಚಯ ಕಾರ್ಯಕ್ರಮವನ್ನು ತುರುವೇಕೆರೆ ರಾಷ್ಟ್ರೀಯ ಸಂರಕ್ಷಣಾ ಪರಿಷತ್​ನ ನಿರ್ದೇಶಕ ಟಿ.ರಾಮಚಂದ್ರ ಉದ್ಘಾಟಿಸಿದರು. ಚಾಣಕ್ಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವಿಜಯ್​ ಕುಮಾರ್​, ಕಾರ್ಯದರ್ಶಿ ನರಸಿಂಹಲು ಬಾಬು ಇದ್ದರು.
Published on
ಕೊರಟಗೆರೆ: ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ್ದಾರೆ. ಅವರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದ್ದು, ಅದರ ಮಹತ್ವವನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕು ಎಂದು ತುರುವೇಕೆರೆ ರಾಷ್ಟ್ರೀಯ ಸಂರಕ್ಷಣಾ ಪರಿಷತ್​ನ ನಿರ್ದೇಶಕ ಟಿ.ರಾಮಚಂದ್ರ ಹೇಳಿದರು.
ಪಟ್ಟಣದ ಚಾಣಕ್ಯ ಪಬ್ಲಿಕ್​ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಸಂರಕ್ಷಣಾ ಪರಿಷತ್​ನಿಂದ ಆಯೋಜಿಸಿದ್ದ ಸ್ವಾತಂತ್ರ$್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ ಮತ್ತು ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ವಿರುದ್ಧ ಜನಾಂದೋಲನ ರೂಪಿಸಿದರು. ಸುಭಾಷ್​ ಚಂದ್ರ ಬೋಸ್​ ಅವರು ಆಜಾದ್​ ಹಿಂದ್​ ಫೌಜ್​ ಕಟ್ಟಿಕೊಂಡು ಸಶಸ್ತ್ರ ಹೋರಾಟಕ್ಕೆ ಮುನ್ನಡೆ ನೀಡಿದರು. ಭಗತ್​ ಸಿಂಗ್​, ರಾಜಗುರು ಮತ್ತು ಸುಖದೇವ್​ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು ಎಂದರು. Introduction Program
ಸ್ವಾತಂತ್ರ$್ಯ ಹೋರಾಟಗಾರರ ಜೀವನ, ಹೋರಾಟ ಮತ್ತು ದೇಶಪ್ರೇಮದ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನಮ್ಮ ನಾಡು ಮತ್ತು ದೇಶದ ಇತಿಹಾಸ ಅರಿತುಕೊಳ್ಳುವುದರಿಂದ ದೇಶದ ಬಗ್ಗೆ ಹೆಮ್ಮೆ ಹಾಗೂ ಜವಾಬ್ದಾರಿಯ ಭಾವನೆ ಮೂಡುತ್ತದೆ. ಸ್ವಾತಂತ್ರ$್ಯವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೇಶದ ಅಭಿವೃದ್ಧಿ ಮತ್ತು ಏಕತೆಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಭಾವಚಿತ್ರ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಸ್ವಾತಂತ್ರ$್ಯ ಹೋರಾಟಗಾರರ ಜೀವನ ಮತ್ತು ಕೊಡುಗೆಗಳ ಪರಿಚಯ ಮಾಡಿಕೊಡಲಾಯಿತು. ಪದಾಧಿಕಾರಿಗಳಾದ ಸಿ.ಎಸ್​. ಹನುಮಂತರಾಜು, ಆರ್​.ಪಿ.ರವಿಶಂಕರ್​, ಮುಖ್ಯ ಶಿಕ್ಷಕಿ ಭಾಗ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net