ದೇವನಹಳ್ಳಿ ದಿವ್ಯಜ್ಯೋತಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತ್ಯತ್ಸವದಲ್ಲಿ ರೈತ ಸಂಘ ಯುವ ಘಟಕದ ಅಧ್ಯಕ್ಷ ವಿನೋದ್ಕುಮಾರ್ ಗೌಡ , ಒಕ್ಕಲಿಗ ಮಹಾಸಭಾದ ಉಪಾಧ್ಯಕ್ಷ ಎಂ,ಮುನಿರಾಜು ಅಪ್ಪಯ್ಯ, ಸೊಸೈಟಿ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್ ಇತರರು ಇದ್ದರು.
Published on:
Copied
Follow Us
ದೇವನಹಳ್ಳಿ : ದೂರದೃಷ್ಟಿ ಹಾಗೂ ಜನಪರ ಆಡಳಿತದ ಮೂಲಕ ಜಾಗತಿಕ ಹೆಮ್ಮೆಯ ಬೆಂಗಳೂರು ಮಹಾನಗರಕ್ಕೆ ಶತಮಾನಗಳ ಹಿಂದೆಯೇ ಸುಭದ್ರ ಅಡಿಪಾಯ ಹಾಕಿದ ಧೀಮಂತ ಆಡಳಿತಗಾರ ಎಂದು ದಿವ್ಯಜ್ಯೋತಿ ಕ್ರೆಡಿಟ್ ಕೋ&ಆಪರೇಟಿವ್ ಅಧ್ಯಕ್ಷ ಡಾ.ಎನ್.ಚಂದ್ರಶೇಖರ್ ಬಣ್ಣಿಸಿದರು.
ಪಟ್ಟಣದ ಮರಳುಬಾಗಿಲಿನ ಶ್ರೀ ಕೃಷ್ಣಪಾಂಡವ ಪತ್ತಿನ ಸಹಕಾರ ಸಂಘದಲ್ಲಿ ಕನ್ನಡ ರಕ್ಷಣಾ ವೇದಿಕೆ ಮತ್ತು ದಿವ್ಯಜ್ಯೋತಿ ಕ್ರೆಡಿಟ್ ಕೋ&ಆಪರೇಟಿವ್ ಸೊಸೈಟಿ ಆವರಣದಲ್ಲಿ ಆಯೋಜಿಸಿದ್ದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ನೂರಾರು ಕೆರೆಗಳನ್ನು ನಿರ್ಮಿಸಿ, ಪರಿಸರ ಸಮತೋಲನದೊಂದಿಗೆ ವಾಣಿಜ್ಯ ಮತ್ತು ಸಂಸತಿಗೆ ಭದ್ರ ಬುನಾದಿ ಹಾಕಿಕೊಟ್ಟ ಅವರ ದೂರದರ್ಶಿತ್ವ ಇಂದಿಗೂ ಆದರ್ಶನೀಯ ಎಂದರು.
ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ವಿನೋದ್ಕುಮಾರ್ ಗೌಡ ಮಾತನಾಡಿ, ಕೆಂಪೇಗೌಡರ ನಿಷ್ಕಲ್ಮಶ ರಾಜಕೀಯ ಮತ್ತು ನಿಸ್ವಾರ್ಥ ಜನಸೇವೆಯೇ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಅವರು ಹಿಂದೆ ಕಾಡು ಪ್ರದೇಶವನ್ನು ನಗರವಾಗಿ ನಿರ್ಮಿಸಿದ್ದೇ ಇಂದು ವಿಶ್ವದ ಮಂಚೂಣಿ ನಗರವಾಗಿ ಬೆಳೆಯುತ್ತಿದೆ. ಇದನ್ನಾದರೂ ಜನಪ್ರತಿನಿಧಿಗಳು ರೈತರು, ಬಡವರು, ಜನಸಾಮಾನ್ಯರು ಬದುಕು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ರೈತರ ಭೂಮಿ ಸ್ವಾಧಿನ ಮಾಡಿಕೊಳ್ಳುವುದನ್ನು ಕೈಬಿಡಲಿ. ಹೀಗೆ ಮುಂದುವರೆದರೆ ಜನಕ್ರಾಂತಿ, ರೈತಕ್ರಾಂತಿ ಆಗುವುದರಲ್ಲಿ ಸಂದೇಹವಿಲ್ಲ ಎಂದು ಎಚ್ಚರಿಸಿದರು.
ಒಕ್ಕಲಿಗ ಮಹಾಸಭಾದ ಉಪಾಧ್ಯಕ್ಷ ಎಂ,ಮುನಿರಾಜು ಅಪ್ಪಯ್ಯ, ದಿವ್ಯಜ್ಯೋತಿ ಸೊಸೈಟಿ ಪದಾಧಿಕಾರಿಗಳಾದ ಡಾ.ಆರ್.ವೆಂಕಟರಾಜು, ಗೋಕರೆ ಗೇಟ್ ಮಂಜಣ್ಣ, ಶಾಂತಲಾ, ಪೂಜಾರಿ ನಾಗರಾಜ್, ಮುನಿಶಾಮಪ್ಪ, ಕೃಷ್ಣಪ್ಪ, ಮುನಿಯಪ್ಪ, ನಂಜುಂಡ, ನಿಲೇರಿ ರಮೇಶ್ ರಂಜನ್, ನಂದಿನಿ, ಸಂಗೀತಾ ಇತರರು ಇದ್ದರು.