ಎಲ್ಲ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರ

 ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ತೋಟಗಾರಿಕೆ ಇಲಾಖೆ ಎಡಿಎಚ್​ ತ್ರಿವೇಣಿ ಮಾತನಾಡಿದರು. ಡಾ.ಎಂ .ಜಿ. ಪಾಟೀಲ, ಡಾ.ವಿಜಯಕುಮಾರ ಇತರರಿದ್ದರು.
ಬಸವಕಲ್ಯಾಣದ ಎಸ್​ಎಸ್​ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ತೋಟಗಾರಿಕೆ ಇಲಾಖೆ ಎಡಿಎಚ್​ ತ್ರಿವೇಣಿ ಮಾತನಾಡಿದರು. ಡಾ.ಎಂ .ಜಿ. ಪಾಟೀಲ, ಡಾ.ವಿಜಯಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೋಟಗಾರಿಕೆ ಇಲಾಖೆ ಎಡಿಎಚ್​ ತ್ರಿವೇಣಿ ಅನಿಸಿಕೆ
  • ಬಸವಕಲ್ಯಾಣದಲ್ಲಿ ದಿನಾಚರಣೆ
ಬಸವಕಲ್ಯಾಣ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಿಸಿಕೊಂಡು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಹಾಯಕಿ ನಿರ್ದೇಶಕಿ ತ್ರಿವೇಣಿ ಹೇಳಿದರು.
ನಗರದ ಎಸ್​ಎಸ್​ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಸಮಯ ಮತ್ತು ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವೈಜಂತಾ ಕದಮ್​ ಮಾತನಾಡಿ, ಮಹಿಳೆಯರು ಇಂದು ಎಲ್ಲ ೇತ್ರದಲ್ಲಿಯೂ ತೊಡಗಿಸಿಕೊಂಡು ತಾವು ಸ್ವಾವಲಂಬಿ ಆಗುವದರ ಜತೆಗೆ ಆರ್ಥಿಕ ೇತ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಂಗ್ಲ ವಿಭಾಗದ ಮುಖ್ಯಸ್ಥ ಡಾ.ಎಂ .ಜಿ.ಪಾಟೀಲ್​ ಮಾತನಾಡಿ, ಮಹಿಳೆಯರು ಇಂದು ಶಿಕ್ಷಣ ೇತ್ರದಲ್ಲಿ ಆಗಾದ ಪ್ರಮಾಣದಲ್ಲಿ ಸಾಧನೆ ಮಾಡಿದ್ದು, ವಿಜ್ಞಾನ, ವಾಣಿಜ್ಯ, ಅರ್ಥ ವ್ಯವಸ್ಥೆಗೆ ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.
ಪ್ರೊ.ವಿಠೋಬಾ ಡೊಣ್ಣೆಗೌಡರ. ಐಕ್ಯೂಎಸಿ ಸಂಯೋಜಕ ಡಾ.ವಿಜಯಕುಮಾರ, ಡಾ. ಸುರೇಶ ಎಚ್​.ಆರ್​., ಉಪನ್ಯಾಸಕರಾದ ವೈಶಾಲಿ, ಜ್ಯೋತಿ ಪಾಟೀಲ್​, ಶಿಲ್ಪ ಬಿರಾದರ, ವಾಣಿಶ್ರೀ, ಆರತಿ, ಸೌಮ್ಯ ಜೋಶಿ, ಸುಮನ ರೆಡ್ಡಿ, ಭಾರತಿ, ಭಾಗ್ಯಶ್ರೀ, ಪೂಜಾ ಇದ್ದರು. ಅರ್ಪಿತಾ ನಿರೂಪಣೆ ಮಾಡಿದರು. ಕುಮಾರಿ ಕೀರ್ತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net