ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಪ್ರಮುಖ

ಭಾರತಿ ಪ್ರಥಮ ದರ್ಜೆಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಪತ್ರಿಕಾ ಮಾಧ್ಯಮ ಕುರಿತು ಸಂಪನ್ಮೂಲ ವ್ಯಕ್ತಿ ಸಿ.ಕೆ.ಸುರೇಶ್ ಮಾತನಾಡಿದರು.
ಭಾರತಿ ಪ್ರಥಮ ದರ್ಜೆಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಪತ್ರಿಕಾ ಮಾಧ್ಯಮ ಕುರಿತು ಸಂಪನ್ಮೂಲ ವ್ಯಕ್ತಿ ಸಿ.ಕೆ.ಸುರೇಶ್ ಮಾತನಾಡಿದರು.
Published on
ಶನಿವಾರಸಂತೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಪ್ರಸ್ತುತ ಸಮಾಜ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಸುರೇಶ್ ಚೆರಿಯಮನೆ ಅಭಿಪ್ರಾಯಪಟ್ಟರು.
ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ವಾರ್ಷಿಕ ಶಿಬಿರದಲ್ಲಿ ‘ಪ್ರಸ್ತುತ ಸಮಾಜದಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಹಸ್ತಾಕ್ಷರದ ಪತ್ರಿಕೆ ಪ್ರಾರಂಭಗೊಳ್ಳಲು ನಾಂದಿಯಾಯ್ತು. ಸಮಾಜ ಬದಲಾದಂತೆ ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಇಂದು ಸಾಮಾಜಿಕ ಜಾಲತಾಣಗಳು ಎಐನಂತಹ ತಂತ್ರಜ್ಞಾನದ ಮೂಲಕ ಕೃತಕ ದೃಶ್ಯಗಳನ್ನು ಸೃಷ್ಟಿಸುತ್ತಿರುವುದು ಮಾಧ್ಯಮ ಕ್ಷೇತ್ರಕ್ಕೆ ಮಾರಕವಾಗಿದೆ. ಇವುಗಳಿಂದ ಸಮಾಜದಲ್ಲಿ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಕ್ಷರ ಮಾಧ್ಯಮ ಶಕ್ತಿಯುತ ಮಾಧ್ಯಮವಾಗಿದ್ದರೂ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಜನರು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಜೆ.ಪಿ.ಕವಿತಾ ಮಾತನಾಡಿದರು. ಶಿಬಿರಾರ್ಥಿ ಹರೀಶ್ ಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷ ಮದನ್, ಸದಸ್ಯೆ ಶಶಿಕಲಾ, ಉಪನ್ಯಾಸಕ ಡಿ .ಇ. ಸುರೇಂದ್ರ ಮಾತನಾಡಿದರು. ಎಸ್‌ಡಿಎಂಸಿ ಸದಸ್ಯೆ ಅಶ್ವಿತಾ, ಉಪನ್ಯಾಸಕ ಬಿ.ಎಂ.ಪೊನ್ನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net