ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದು

ಭಾಲ್ಕಿ ತಾಲೂಕಿನ ಲಾಧಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಂದ ಶನಿವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸತಿ ಇಲಾಖೆಯ ಜಂಟಿ ನಿದೇರ್ಶಕ ಬಲವಂತರಾವ ಪಾಟೀಲ ಉದ್ಘಾಟಿಸಿದರು. ನಿವೃತ್ತ ಶಿಕ್ಷಕರಾದ ತಾತೆರಾವ ಭಾಟಸಾಂಗವಿ, ಸಂಪತರಾವ, ಸಂಗಣ್ಣ ರೆಡ್ಡಿ, ಎಸ್​.ಕೆ.ನಾಲವಾರ, ಅಶೋಕ ದಂಡೆ, ಶಾಂತಲಿಂಗ, ಶೀವಶಂಕರ, ವೆಂಕಟರಾವ, ರಾಧಾಕಿಶನ, ಬಿ.ಎಸ್​.ನೇಳಗೆ, ಮಹೇಂದ್ರ, ಮುದಕಪ್ಪಾ, ಮಲ್ಲಿಕಾರ್ಜು, ರಮೇಶ ಬರ್ಮಾ, ರಮೇಶ ಕಾನೆಕರ, ನಾಗಶೆಟ್ಟಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಲವಂತರಾವ ಪಾಟೀಲ ಅನಿಸಿ
  • ಲಾಧಾದಲ್ಲಿ ಗುರುವಂದನೆ ಕಾರ್ಯಕ್ರಮ
ಭಾಲ್ಕಿ: ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿರುವ ಶಿಕ್ಷಕರ ಪಾತ್ರ ಮಹತ್ವದಾಗಿರುತ್ತದೆ ಎಂದು ಕನ್ನಡ ಮತ್ತು ಸಂಸತಿ ಇಲಾಖೆಯ ಜಂಟಿ ನಿದೇರ್ಶಕ ಬಲವಂತರಾವ ಪಾಟೀಲ ಹೇಳಿದರು.
ತಾಲೂಕಿನ ಲಾಧಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1997&98 ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಹಾಗು 2000&2001ನೇ ಸಾಲಿನ 10ನೇ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುಗಳ ಸದಾಶಯವೇ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಾಗಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ನೀಡಿದ ಸಂಸ್ಕಾರಯುತ ಶಿಕ್ಷಣದಿಂದಲೇ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಸುಮಾರು 30 ವರ್ಷಗಳ ಹಿಂದೆ ಅವರಿಗೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುಗಳ ಸ್ಮರಣೆ ಮಾಡುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ. ಗುರುಗಳ ಸದಾಶಯವು ವಿದ್ಯಾರ್ಥಿಗಳ ಪಾಲಿನ ಸುವರ್ಣಾವಕಾಶ ವಾಗಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬಸವರಾಜ ನೇಳಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ಬಾಲಾಜಿ ರಾಜುರೆ ಪ್ರಾಸ್ತಾವಿಕ ಮಾತನಾಡಿದರು.
ನಿವೃತ್ತ ಶಿಕ್ಷಕ ಶಂಭುಲಿಂಗ ವಾಲದೊಡ್ಡಿ ಬಸವ ವಚನ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ತಾತೆರಾವ ಭಾಟಸಾಂಗವಿ, ಸಂಪತರಾವ, ಸಂಗಣ್ಣ ರೆಡ್ಡಿ, ಎಸ್​.ಕೆ.ನಾಲವಾರ, ಅಶೋಕ ದಂಡೆ, ಶಾಂತಲಿಂಗ, ಶೀವಶಂಕರ, ವೆಂಕಟರಾವ, ರಾಧಾಕಿಶನ, ಬಿ.ಎಸ್​.ನೇಳಗೆ, ಮಹೇಂದ್ರ, ಮುದಕಪ್ಪಾ, ಮಲ್ಲಿಕಾರ್ಜು, ರಮೇಶ ಬರ್ಮಾ, ರಮೇಶ ಕಾನೆಕರ, ನಾಗಶೆಟ್ಟಿ ಉಪಸ್ಥಿತರಿದ್ದರು. ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರು ಹಾಗು ನಿವೃತ್ತ ಶಿಕ್ಷಕರನ್ನುನ ಗ್ರಾಮದ ಲದ್ದಿ ಸೋಮಣ್ಣ ದೇವಸ್ಥಾನದಿಂದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಿ ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net