ಡೇರಿ ಅಭಿವೃದ್ಧಿಯಲ್ಲಿ ಕಾರ್ಯದರ್ಶಿಗಳ ಪಾತ್ರ ಅನನ್ಯ Dairy

ಕೋಮುಲ್​ ಶಿಬಿರ ಕಚೇರಿಯಲ್ಲಿ Dairy ಅಭಿನಂದನಾ ಕಾರ್ಯಕ್ರಮ
ಕೋಮುಲ್​ ಶಿಬಿರ ಕಚೇರಿಯಲ್ಲಿ Dairy ಅಭಿನಂದನಾ ಕಾರ್ಯಕ್ರಮ
Published on
ಮುಳಬಾಗಿಲು: ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಡೇರಿ ಕಾರ್ಯದರ್ಶಿಗಳ ಪಾತ್ರ ಅನನ್ಯವಾಗಿದ್ದು, ಇವರ ಸೇವೆ ಇದನ್ನು ಗಮನಿಸಿ ನಿವೃತ್ತಿ ಹೊಂದುವ ಸಂದರ್ಭದಲ್ಲಿ 5 ಲಕ್ಷ ರೂ. ನೀಡಲಾಗುತ್ತದೆ ಎಂದು ಕೋಮುಲ್​ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿನ ಕೋಮುಲ್​ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಂದ ಕೋಮುಲ್​ ನಿರ್ದೇಶಕರಿಗೆ ಹಮ್ಮಿಕೊಂಡ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿವೃತ್ತಿ ವೇತನ ನೀಡುವ ಕುರಿತು ಹೋರಾಟ ಮಾಡಿದ ಕಾರಣ ಕಾರ್ಯದರ್ಶಿಗಳಿಗೆ ಈ ಸೌಲಭ್ಯ ಸಿಕ್ಕಿದೆ ಎಂದರು.
ತಾಲೂಕಿನಲ್ಲಿ ಬಹುತೇಕ ಮಂದಿ ಕಾರ್ಯದರ್ಶಿಗಳು ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರ ಮುಂದಿನ ಜೀವನೋಪಾಯಕ್ಕಾಗಿ ವೇತನ ನೀಡುವ ಕುರಿತು ಸಾಕಷ್ಟು ಬಾರಿ ಚರ್ಚೆ ಮಾಡಲಾಗಿತ್ತು.
ಕಳೆದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಸಮೇತ ಎಲ್ಲ ನಿರ್ದೇಶಕರು ಡೇರಿ ಕಾರ್ಯದರ್ಶಿಗಳಿಗೆ ನಿವೃತ್ತಿ ವೇತನ ನೀಡಲು ಸಹಮತ ವ್ಯಕ್ತಪಡಿಸಿದ ಕಾರಣ ಕಾರ್ಯದರ್ಶಿಗೆ 5 ಲಕ್ಷ ರೂ., ಹಾಲು ಪರಿವೀಕ್ಷಕರಿಗೆ 3 ಲಕ್ಷ ರೂ., ಸಹಾಯಕರಿಗೆ 2 ಲಕ್ಷ ರೂ. ನೀಡಲು ಅನುಮೋದನೆ ದೊರೆತಿದೆ. ಅಲ್ಲದೇ 10 ಪೈಸೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರಲ್ಲಿ ಕಾರ್ಯದರ್ಶಿಗೆ 5 ಪೈಸೆ, ಹಾಲು ಪರೀಕ್ಷಕರಿಗೆ 3 ಪೈಸೆ, ಸಹಾಯಕನಿಗೆ 2 ಪೈಸೆ ನೀಡಲಾಗುತ್ತದೆ ಎಂದರು.
ಕೋಮುಲ್​ ನಿರ್ದೇಶಕ ಬಿ.ವಿ.ಸಾಮೇಗೌಡ ಮಾತನಾಡಿ, ಕಾರ್ಯದರ್ಶಿಗಳು ರಾಜಕೀಯ Dairy ರಹಿತವಾಗಿ ಪ್ರಾಮಾಣಿಕವಾಗಿ ಸೇವೆ ಮಾಡಿದರೆ ಮಾತ್ರ ಅಂತಹ ಡೇರಿಗಳು ಅಭಿವೃದ್ಧಿಯಾಗುತ್ತದೆ. ಇದರಿಂದ ಹಳ್ಳಿಗಳ ಆರ್ಥಿಕ ಪ್ರಗತಿ ಹೆಚ್ಚಾಗಿ ರೈತ ಸದೃಢಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯದರ್ಶಿಗಳಾದ ರಘುರಾಮರೆಡ್ಡಿ, ರವೀಂದ್ರ, ಚೊಕ್ಕದೊಡ್ಡಿ ಸುರೇಶ್​, ಸುಬ್ರಮಣಿ, ರಾಮರೆಡ್ಡಿ, ಸೀನಪ್ಪ, ಹರೀಶ್​, ಅಪ್ಪಯ್ಯ, ಕೋಮುಲ್​ ಶಿಬಿರ ವ್ಯವಸ್ಥಾಪಕ ಡಾ.ಕೆ. ಕಿರಣ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net