ಜೀವವೈವಿಧ್ಯತೆ ಕಾಪಾಡುವಲ್ಲಿ ಆನೆಗಳ ಪಾತ್ರ ಅನನ್ಯ

The role of elephants in preserving biodiversity is unique.
The role of elephants in preserving biodiversity is unique.
Published on

ರಾಮನಗರ:

ಅರಣ್ಯ ಮತ್ತು ಆನೆಗಳು ಸುರತವಾಗಿದ್ದರೆ ಮಾತ್ರ ನಮಗೆ ಅಗತ್ಯವಿರುವ ನೀರು ಉತ್ತಮ ವಾತಾವರಣ ಸಿಗುತ್ತದೆ. ಜೀವವೈವಿಧ್ಯತೆ ಕಾಪಾಡುವಲ್ಲಿ ಆನೆಗಳ ಪಾತ್ರ ಅನನ್ಯ ಎಂದು ರಾಮನಗರ ಪ್ರಾದೇಶಿಕ ವಿಭಾಗದ ಮುಖ್ಯಸ್ಥ ಎಂ. ರಾಮಕೃಷ್ಣಪ್ಪ ತಿಳಿಸಿದರು.

ವಿಶ್ವ ಆನೆ ದಿನದ ಅಂಗವಾಗಿ ರಾಮನಗರ ಪ್ರಾದೇಶಿಕ ವಿಭಾಗದ ವತಿಯಿಂದ ಸಾಲು ಮರದ ತಿಮ್ಮಕ್ಕ ಸಭಾಂಗಣದ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಬುಧವಾರ ಆನೆಗಳ ಮಹತ್ವ, ಆನೆಗಳ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆನೆಗಳ ರಕ್ಷಣೆ ಹಾಗೂ ಜಾಗೃತಿಗಾಗಿ ವಿಶ್ವ ಆನೆ ದಿನ ಆಚರಿಸಲಾಗುತ್ತಿದೆ. ದೇಶದಲ್ಲೇ ಅತ್ಯಂತ ಹೆಚ್ಚು ಆನೆಗಳನ್ನು ಹೊಂದಿರುವ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಆದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ಆನೆ&ಮಾನವ ಸಂರ್ಷ ಇದ್ದು, ಗಜಪಡೆ ಉಳಿವು ಮತ್ತು ಜನರ ಜೀವ&ಜೀವನೋಪಾಯದ ನಡುವೆ ಅರಣ್ಯ ಇಲಾಖೆಗೆ ಸವಾಲು ಎದುರಾಗಿದೆ.

— ಎಂ. ರಾಮಕೃಷ್ಣಪ್ಪ, ರಾಮನಗರ ಪ್ರಾದೇಶಿಕ ವಿಭಾಗದ ಮುಖ್ಯಸ್ಥ

ಕಾಡಿನ ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾಡಿನ ಇಂಜಿನಿಯರ್​ಗಳು ಆನೆಗಳಾಗಿವೆ. ಆನೆಗಳು ಸೇವಿಸುವ ಹಣ್ಣು&ಸಸ್ಯಗಳ ಮೂಲಕ ಮರಗಳ ಬೀಜ ಪ್ರಸಾರವಾಗುತ್ತದೆ. ಬೇಸಿಗೆಯಲ್ಲಿ ನೀರಿಗಾಗಿ ಆನೆಗಳು ತೋಡುವ ಹಳ್ಳಗಳು ಕಾಡಿನ ಇತರ ಸಣ್ಣ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುತ್ತವೆ. ಅವುಗಳು ಸಂಚರಿಸುವ ಹಾದಿಗಳು ಕಾಡಿನ ಇತರ ಪ್ರಾಣಿಗಳಿಗೆ ಹಾದಿ ಮಾಡಿಕೊಡುತ್ತವೆ. ಆನೆಗಳನ್ನು ಉಪದ್ರವಿ ಪ್ರಾಣಿ ಎಂದು ನೋಡದೆ, ಪರಿಸರದ ರಕ್ಷಕನೆಂದು ಭಾವಿಸಿ ಅವುಗಳೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದೆ ಇನ್ನೊಂದು ಖುಷಿ ವಿಚಾರವೆಂದರೆ ರೈಲ್ವೆ ಬ್ಯಾರಿಕೇಡ್​ ಮಾಡಲು ಕನಕಪುರ&ರಾಮನಗರ ವನ್ಯಜಿವಿ ವಿಭಾಗಕ್ಕೆ ಸುಮಾರು 261 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನಿಗದಿಪಡಿಸಿರುತ್ತಾರೆ ಇದು ಖುಷಿ ವಿಚಾರವಾಗಿದೆ ಎಂದರು.

ಆನೆಗಳಿಗೆ ಇಲಾಖೆ ಬ್ರೇಕ್​

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ ಮಾತನಾಡಿ, ಆನೆ ಮಾನವ ಸಂರ್ಷ ಕಡಿಮೆ ಮಾಡಲು ಅರಣ್ಯ ಇಲಾಖೆ ಜಿಲ್ಲೆಯ ಅರಣ್ಯ ವಲಯಗಳಲ್ಲಿ ರೈಲ್ವೇ ಬ್ಯಾರಿಕೇಡ್​ಗಳು, ಆನೆ ನಿರೋಧಕ ಕಂದಕಗಳು ಮತ್ತು ಸೌರಶಕ್ತಿ ಬೇಲಿಗಳನ್ನು ನಿರ್ಮಿಸಲಾಗಿದೆ. ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಡ್ರೋನ್​ ಕ್ಯಾಮರಾಗಳನ್ನು ಬಳಸಿ ಆನೆಗಳು ನಾಡಿಗೆ ಬರುವುದನ್ನು ಮುಂಚಿತವಾಗಿ ಪತ್ತೆ ಹಚ್ಚಿ ಅರಣ್ಯದಂಚಿನ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುವುದು. ಆನೆಗಳನ್ನು ಮತ್ತೆ ಸ್ವಸ್ಥಾನ ಸೇರಿಸುವ ಕೆಲಸ ಇಲಾಖೆ ಮಾಡುತ್ತಿದೆ. ನಿರಂತರವಾಗಿ ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬರುತ್ತಿದ್ದ ಹಿಂಡು ಹಿಂಡು ಆನೆಗಳಿಗೆ ಇಲಾಖೆ ಬ್ರೇಕ್​ ನೀಡಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್​, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್​, ಸಾಮಾಜಿಕ ಅರಣ್ಯ ವಿಭಾಗ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಮಾ ಮಾತನಾಡಿದರು. ಹೊಂಬೇಗೌಡ ಸಂಸ್ಥೆ, ಐಟಿಐ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ವಿಶ್ವ ಆನೆ ದಿನದ ಅಂಗವಾಗಿ ವಿವಿಧ ಶಾಲೆಗಳಲ್ಲಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಚಿತ್ರಕಲಾ ಸ್ಪರ್ಧೆ ಬಹುಮಾನಿತರು : ರಾಮನಗರದ ಕೂಟಗಲ್​ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಯಶಸ್​ ಪ್ರಥಮ, ಕೇಂದ್ರಿಯ ವಿದ್ಯಾಲಯದ ರಿತ್ವಿಕ ದ್ವೀತಿಯ, ಮನಸು ತೃತೀಯ ಬಹುಮಾನ. ಚನ್ನಪಟ್ಟಣ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾ ಎಂ.ಆರ್​. ಬಾಳೇನಹಳ್ಳಿ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ, ಮಾಗಡಿ, ಪ್ರಥಮ ಬಹುಮಾನ, ತಸ್ಕಿನ್​ ಇರಾಮ್​, ಸರ್ಕಾರಿ ಬಾಲಕಿಯರ ಜೂನಿಯರ್​ ಕಾಲೇಜು, ಚನ್ನಪಟ್ಟಣ ದ್ವೀತಿಯ ಬಹುಮಾನ, ಕೆ.ಎಸ್​. ಸಾ, ಸರ್ಕಾರಿ ಪ್ರೌಢಶಾಲೆ, ರಾಮನಗರ, ತೃತೀಯ ಬಹುಮಾನವನ್ನು ನೀಡಲಾಯಿತು.
ಮಾನವ&ಆನೆ ಸಂರ್ಷ ನಿರ್ವಹಣೆ ಕಾರ್ಯದಲ್ಲಿ ಅತ್ಯುತ್ತಮ ಸೇವೆ, ಸಮರ್ಪಣೆ, ಧೈರ್ಯ ಹಾಗೂ ನಿಸ್ವಾರ್ಥ ಬದ್ಧತೆಗಾಗಿ ಎಸ್​. ದಿಲೀಪ್​ ಕುಮಾರ್​, ಗಸ್ತು ಅರಣ್ಯ ಪಾಲಕ, ಪವನ್​ಕುಮಾರ್​, ಎ.ಪಿ.ಸಿ ಹೊರಗುತ್ತಿಗೆ ನೌಕರ, ಜಯಲಿಂಗ, ಜವಾಬ್ದಾರಿಯುತ ಸಾರ್ವಜನಿಕರು ಇವರ ಇಲಾಖಾ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net