ಸ್ವಯಂ ಸೇವಾ ಸಂಸ್ಥೆ ಪಾತ್ರ ಅನನ್ಯ

ಕಲಬುರಗಿ ಕನ್ನಡ ಭವನದಲ್ಲಿ ಗುರುವಾರ ನಡೆದ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಬೆಳ್ಳಿ ಹಬ್ಬ ಮಹೋತ್ಸವದಲ್ಲಿ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುರೇಶ ಬಡಿಗೇರ್​, ಧೂಳಪ್ಪ ದ್ಯಾಮನಕರ್​, ಅಭಿಷೇಕ ಅಲ್ಲಮಪ್ರಭು ಪಾಟೀಲ, ಪವನಕುಮಾರ ವಳಕೇರಿ, ಎಸ್​.ವಿ.ಪಸಾರ, ರವಿಚಂದ್ರ ಗುತ್ತೇದಾರ, ಜೈಭೀಮ ದೊಡ್ಡಮನಿ, ಮಾಲಾ ಕಣ್ಣಿ ಇತರರಿದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಗುರುವಾರ ನಡೆದ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಬೆಳ್ಳಿ ಹಬ್ಬ ಮಹೋತ್ಸವದಲ್ಲಿ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುರೇಶ ಬಡಿಗೇರ್​, ಧೂಳಪ್ಪ ದ್ಯಾಮನಕರ್​, ಅಭಿಷೇಕ ಅಲ್ಲಮಪ್ರಭು ಪಾಟೀಲ, ಪವನಕುಮಾರ ವಳಕೇರಿ, ಎಸ್​.ವಿ.ಪಸಾರ, ರವಿಚಂದ್ರ ಗುತ್ತೇದಾರ, ಜೈಭೀಮ ದೊಡ್ಡಮನಿ, ಮಾಲಾ ಕಣ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಸುರೇಶ ಬಡಿಗೇರ್​ ಹೇಳಿಕೆ
  • ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಬೆಳ್ಳಿ ಮಹೋತ್ಸವ
ಕಲಬುರಗಿ: ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಮಹತ್ತರ ಸೇವೆ ಸಲ್ಲಿಸುತ್ತಿದ್ದು, ಸದೃಢ ಭಾರತ ನಿರ್ಮಾಣ ಮತ್ತು ಸಮಾಜದ ಹಿತಾಸಕ್ತಿ ಕಾಪಾಡುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅನನ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು.
ನಗರದ ಕನ್ನಡ ಭವನದಲ್ಲಿ ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಬೆಳ್ಳಿ ಹಬ್ಬ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಡ ಕಲಾವಿದರ ನೆರವಿಗೆ ಬರಬೇಕೇ ಹೊರತು, ಕಲಾವಿದರ ಹೆಸರಿನಲ್ಲಿ ಸರ್ಕಾರದ ಅನುದಾನ ದುರುಪಯೋಗಪಡಿಸಿಕೊಳ್ಳುವ ಸಂಘ-ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯ ಕಾರ್ಯದರ್ಶಿ ಧೂಳಪ್ಪ ದ್ಯಾಮನಕರ್​ ಪ್ರಾಸ್ತಾವಿಕ ಮಾತನಾಡಿದರು. ಶ್ರೀಶೈಲಂ ಸಾರಂಗ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್​ ಮುಖಂಡ ಅಭಿಷೇಕ ಅಲ್ಲಮಪ್ರಭು ಪಾಟೀಲ, ಪವನಕುಮಾರ ವಳಕೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್​.ವಿ.ಪಸಾರ, ನ್ಯಾಯವಾದಿಗಳಾದ ರವಿಚಂದ್ರ ಗುತ್ತೇದಾರ, ಜೈಭೀಮ ದೊಡ್ಡಮನಿ, ನಾಲ್ಕುಚಕ್ರ ಚಾರಿಟೇಬಲ್​ ಟ್ರಸ್ಟ್​ ಮುಖ್ಯಸ್ಥೆ ಮಾಲಾ ಕಣ್ಣಿ, ಕನ್ನಡಪರ ಹೋರಾಟಗಾರ ಮಂಜುನಾಥ ನಾಲವಾರಕರ್​, ಡಾ.ಲಕ್ಷ$್ಮಣ ಭೋಸಲೆ, ಡಾ.ರಾಜಶೇಖರ ಮಾಂಗ, ಮಸ್ತಾನ ಬಿರಾದಾರ ಇತರರಿದ್ದರು.
ಎಚ್​.ಬಿ. ಪಾಟೀಲ, ಉಮಾದೇವಿ ಗುರೋಡೆ, ಬಾಬುರಾವ ಕೋಬಾಳ, ವೈಜನಾಥ ಝಳಕಿ, ರಾಜಶೇಖರ ಮಾನೆ, ಪ್ರಿಯಾ ಗಡಾಳೆ, ಶ್ರೀದೇವಿ ಜಮಗಾ, ಬಸಮ್ಮ ರೆಡ್ಡಿ, ಜಗದೀಶ ಮಾನು ರಂಗಪೇಟ್​, ಆರತಿ ರಾಠೋಡ, ಲಿಂಗರಾಜ ಅರಸ್​, ಚಂದ್ರಕಾಂತ ಬಬಲಾದಕರ್​, ಜೀತೆಂದ್ರ ಧನ್ನಿಯವರಿಗೆ ರಾಜ್ಯ ಮಟ್ಟದ ನಿಸರ್ಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾವಿದೆ ಪ್ರಿಯಾ ಗಡಾಳೆ ಪ್ರಾರ್ಥನಾ ಗೀತೆ ಹಾಡಿದರು. ಯುವ ಸಾಹಿತಿ ಶಿವಾನಂದ ಅಣಜಿಗೆ ನಿರೂಪಿಸಿದರು. ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಕೀಲರು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
"

ಕಳೆದ 25 ವರ್ಷಗಳಿಂದ ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯ ಕೈಗೊಂಡಿದ್ದು, ವಿಶೇಷವಾಗಿ ಅಸ್ಪೃಶ್ಯತೆ ನಿವಾರಣೆಗೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಸುತ್ತಿದೆ.

— ಧೂಳಪ್ಪ ದ್ಯಾಮನಕರ್​, ಕಾರ್ಯದರ್ಶಿ, ನಿಸರ್ಗ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net