ಶಿಕ್ಷಣದ ಉದ್ದೇಶ ವ್ಯಕ್ತಿತ್ವದ ಸಮಗ್ರ ಬೆಳವಣಿಗೆ

ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ನಡೆದ ಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರಚಂದ್​ ಗೆಹೆಲೋತ್​, ಡಾ.ಎಂ.ಸಿ.ಸುಧಾಕರ, ಪ್ರೊ.ಎಲ್​.ಎಂ.ಪಟ್ನಾಯಕ್​, ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​ ಇತರರಿದ್ದರು.
ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ನಡೆದ ಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರಚಂದ್​ ಗೆಹೆಲೋತ್​, ಡಾ.ಎಂ.ಸಿ.ಸುಧಾಕರ, ಪ್ರೊ.ಎಲ್​.ಎಂ.ಪಟ್ನಾಯಕ್​, ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಪಾಲ ಥಾವರಚಂದ್​ ಗೆಹೆಲೋತ್​ ಹೇಳಿಕೆ
  • ಗುಲ್ಬರ್ಗ ವಿಶ್ವವಿದ್ಯಾಲಯದ 43ನೇ ಟಿಕೋತ್ಸವ
ಕಲಬುರಗಿ: ಶಿಕ್ಷಣದ ಉದ್ದೇಶ ಕೇವಲ ಜ್ಞಾನ ಸಂಪಾದನೆಯಲ್ಲ, ಬದಲಾಗಿ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗಿದೆ ಎಂದು ರಾಜ್ಯಪಾಲರೂ ಆದ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್​ಚಂದ್​ ಗೆಹೆಲೋತ್​ ಹೇಳಿದರು.
ಶಿಣವು ನಮ್ಮಲ್ಲಿ ವಿವೇಕ, ಸೂಕ್ಷ್ಮತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರೆ ತುಂಬುತ್ತದೆ. ಇಂದಿನ ಯುಗದಲ್ಲಿ, ಕೌಶಲ, ನಾವೀನ್ಯತೆ ಮತ್ತು ತಂತ್ರಾನದ ತಿಳಿವಳಿಕೆಯೊಂದಿಗೆ ಾನವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ಶಿಣ, ಸಂಶೋಧನೆ ಮತ್ತು ನಾವೀನ್ಯತೆ ೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವುದು ಸಂತಸದ ಸಂಗತಿ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಾನಗಂಗಾ ಆವರಣದಲ್ಲಿನ ಡಾ.ಅಂಬೇಡ್ಕರ್​ ಭವನದಲ್ಲಿ ಮಂಗಳವಾರ ನಡೆದ ವಿಶ್ವವಿದ್ಯಾಲಯದ 43ನೇ ಟಿಕೋತ್ಸವದಲ್ಲಿ ಸಾಧಕರಿಗೆ ಗೌರವ ಡಾಕ್ಟರೇಟ್​ ಮತ್ತು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಜೀವನದಲ್ಲಿ ಯಶಸ್ಸಿನ ಹಾದಿ ಯಾವಾಗಲೂ ಸುಲಭವಲ್ಲ. ಸವಾಲುಗಳು ಎದುರಾಗುತ್ತವೆ, ಸಂದರ್ಭಗಳು ಬದಲಾಗುತ್ತವೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸ, ನೈತಿಕ ಮೌಲ್ಯ ಮತ್ತು ಕಠಿಣ ಪರಿಶ್ರಮದ ಮನೋಭಾವವಿದ್ದರೆ, ಪ್ರತಿಯೊಂದು ಅಡೆತಡೆ ನಿವಾರಿಸಿ ಜೀವನದಲ್ಲಿ ಗೆಲುವು ಸಾಧ್ಯ. ನೀವು ಪಡೆಯುವ ಶಿಣ ನಿಮ್ಮ ವೃತ್ತೀಜಿವನ ಯಶಸ್ವಿಯಾಗಿ ಸಾಧಿಸಲು ನೆರವಾಗುವುದರ ಜತೆಗೆ ನಿಮ್ಮ ಜೀವನ ಅರ್ಥಪೂರ್ಣವಾಗಿಸುತ್ತದೆ. ಜೀವನದ ಯಶಸ್ಸಿನಲ್ಲಿ ಶಿಣ ಪ್ರಮುಖ ಪಾತ್ರ ವಹಿಸುತ್ತದೆ. ಕಲಿತ ಶಿಣ ವ್ಯರ್ಥವಾಗುವುದಿಲ್ಲ ಎಂದರು.
ದೇಶವು ತನ್ನ ನಾವೀನ್ಯತೆ, ಉದ್ಯಮಶೀಲತೆ, ಸಂಶೋಧನೆ ಮತ್ತು ಸಾಮಾಜಿಕ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ಯುವ ಸಮೂಹ ಕೊಡುಗೆ ನೀಡಬೇಕೆಂದು ನಿರೀಸುತ್ತದೆ. ಸಮಾಜದ ದುರ್ಬಲ ವರ್ಗಗಳ ಬಗ್ಗೆ ಸಂವೇದನಾಶೀಲರಾಗಿರಿ, ಪರಿಸರ ಸಂರಣೆಯ ಬಗ್ಗೆ ಜಾಗೃತರಾಗಿರಿ ಮತ್ತು ನಿಮ್ಮ ಾನವನ್ನು ಮಾನವೀಯತೆ ಸೇವೆಯಲ್ಲಿ ಬಳಸುವ ಮೂಲಕ ರಾಜ್ಯ ಮತ್ತು ರಾಷ್ಟ್ರದ ಕೀರ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಕಲ್ಯಾಣದಲ್ಲಿ ಶಿಕ್ಷಣಕ್ಕೆ ಒತ್ತು

ಉನ್ನತ ಶಿಣ ಸಚಿವರೂ ಆದ ವಿವಿ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಣ ಸುಧಾರಣೆಗೆ ನಮ್ಮ ಸರ್ಕಾರ ಕಟಿಬದ್ದವಾಗಿದ್ದು, ಕೆಕೆಆರ್​ಡಿಬಿ ಅನುದಾನದಿಂದ ಗ್ರಾಮೀಣ ಭಾಗದಲ್ಲಿ ಕರ್ನಾಟಕ ಪಬ್ಲಿಕ್​ ಶಾಲೆ ತೆರೆಯಲಾಗುತ್ತಿದೆ ಎಂದರು.
ಕಲ್ಯಾಣ ಪ್ರದೇಶದಲ್ಲಿ ಅನೇಕ ವಿವಿಗಳಿವೆ. ಸರ್ಕಾರವೇ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುತ್ತಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಸುಧಾರಣೆಗೆ ಕೆಕೆಆರ್​ಡಿಬಿ ಮೂಲಕ ಸಾಕಷ್ಟು ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೂ ಶಿಕ್ಷಣಕ್ಕೆ ಆದ್ಯತೆ, ಸುಧಾರಣೆಯತ್ತ ಒಲವು ಕಾಣುತ್ತಿಲ್ಲ. ಪಬ್ಲಿಕ್​ ಶಾಲೆ ಸೇರಿ ಸರ್ಕಾರ ಒದಗಿಸುವ ಸೌಲಭ್ಯದ ಸದುಪಯೋಗವಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ತಂತ್ರಜ್ಞಾನದ ಸಮರ್ಥ ಬಳಕೆ
ಪುಣೆಯ ಉನ್ನತ ರಣಾ ತಂತ್ರಾನ ಸಂಸ್ಥೆ (ಡೀಮ್ಡ್​ ವಿಶ್ವವಿದ್ಯಾಲಯ)ಯ ವಿಶ್ರಾಂತ ಕುಲಪತಿ ಪ್ರೊ.ಎಲ್​.ಎಂ.ಪಟ್ನಾಯಕ್​ ಟಿಕೋತ್ಸವ ಭಾಷಣ ಮಾಡಿ, ಶಿಣ, ವಿಾನ, ತಂತ್ರಾನ ಮತ್ತು ಕೌಶಲಾಭಿವೃದ್ಧಿಯ ಮೂಲಕ ಸಮ ಸಮಾಜದ ಪರಿವರ್ತನೆ ಸಾಧ್ಯ. ಎ.ಐ. ತಂತ್ರಾನ ಎಲ್ಲೆಡೆ ವ್ಯಾಪಿಸುತ್ತಿದೆ. ಇದನ್ನು ಸಮರ್ಥವಾಗಿ ಬಳಕೆ ಮಾಡಬೇಕಿದ್ದು, ಹೀಗಾಗಿ ಪಥ ಇರುವ ಕಡೆ ಹೋಗದೆ ಪಥ ಇಲ್ಲದೆ ಕಡೆ ಹೋಗಿ ಹೊಸ ಹಾದಿ ನಿರ್ಮಿಸಬೇಕು ಎಂದರು.
ಇಂದು ಜಗತ್ತು ಸಂರ್ಷ, ಅಸಹಿಷ್ಣುತೆ ಮತ್ತು ಆರ್ಥಿಕ ಸವಾಲು ಎದುರಿಸುತ್ತಿದೆ. ಯುವಜನರ ಅಪಾರ ಶಕ್ತಿಯಿಂದ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸಂಶೋಧನೆ, ಬೋಧನೆ ಮತ್ತು ಕೌಶಲಾಭಿವೃದ್ಧಿಯ ಗುಣಮಟ್ಟ ಹೆಚ್ಚಿಸಿ ಭಾರತವನ್ನು ಾನ ಮಹಾಶಕ್ತಿಯನ್ನಾಗಿ ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ವಿವಿ ನತ್ನೆ ವಿಶ್ವದೊಳಗೆ ಹರಡುವ ಜ್ಯೋತಿಗಳಾಗಿ ಮತ್ತು ಬ್ರಾ$್ಯಂಡ್​ ರಾಯಭಾರಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಸ್ವತಂತ್ರ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದೀರಿ. ನಿಮ್ಮ ಜೀವನವೇ ನಿಮಗೆ ಮೊದಲು ಪರೀೆ ಮಾಡಿ ಪಾಠ ಕಲಿಸುತ್ತದೆ. ಯಶಸ್ಸು&ವೈಫಲ್ಯ ಸಮಚಿತ್ತದಿಂದ ಸ್ವೀಕರಿಸಿ. ವಿಫಲತೆ ಮನಸ್ಸಿಗೆ ತಾಕದಿರಲಿ, ಯಶಸ್ಸು ತಲೆಗೆ ಏರದಿರಲಿ. ಇತರರೊಂದಿಗೆ ಹೋಲಿಕೆ ಮಾಡದೆ, ನಿಮ್ಮ ಹಿಂದಿನ ಸಾಧನೆ ಮೀರಿಸುವುದೇ ನಿಮ್ಮ ಗುರಿಯಾಗಲಿ. ನಿರಂತರ ಪರಿಶ್ರಮ ಯಶಸ್ಸು ತಂದು ಕೊಡಲಿದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಾಗತೀಕರಣದ ಯುಗದಲ್ಲಿ ಕೌಶಲಾಭಿವೃದ್ಧಿ ಅತ್ಯಂತ ಅಗತ್ಯ. ನಾವಿನ್ಯತೆ, ಸ್ಟಾರ್ಟ್​ ಅಪ್​, ಉದ್ಯಮಶೀಲತೆ, ಬಂಡವಾಳ ಹೂಡಿಕೆ, ಬೌದ್ಧಿಕ ಸ್ವತ್ತು ದಿನನಿತ್ಯದ ಬದುಕಿನ ಭಾಗವಾಗಿದೆ. ಇಂದು ಭಾರತವು ವಿಶ್ವದ ಯುವ ರಾಷ್ಟ್ರಗಳಲ್ಲಿ ಒಂದಾಗಿದೆ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.54 ಮತ್ತು 15&59 ವರ್ಷದೊಳಗಿನವರ ಜನಸಂಖ್ಯೆ ಶೇ.62ರಷ್ಟಿದೆ. ಈ ಶಕ್ತಿಯನ್ನು ಸಬಲೀಕರಿಸುವ ಸಾಧನವೇ ಕೌಶಲಾಭಿವೃದ್ಧಿಯಾಗಿದೆ. ಾನವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸುವ ಪರಿಸರ ನಿರ್ಮಿಸನಬೇಕಿದೆ ಎಂದರು.

ಮೂವರು ಸಾಧಕರಿಗೆ ಗೌಡಾ ಪ್ರದಾನ

ಸಾಮಾಜಿಕ ಮತ್ತು ರಾಜಕೀಯ ೇತ್ರದಲ್ಲಿನ ಸಾಧನೆಗೆ ಮಾಜಿ ಸಚಿವ ಪಿ.ಜಿ.ಆರ್​.ಸಿಂಧ್ಯಾ, ಸಾಮಾಜಿಕ ಸೇವೆ ಪರಿಗಣಿಸಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ರಾಜ್ಯಪಾಲ ಥಾವರಚೆಂದ್​ ಗೆಹೆಲೋತ್​ ಸೇರಿ ಗಣ್ಯರು ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಿ ಗೌರವಿಸಿದರು. ಸಾಧಕರ ಜೀವನ ಪರಿಚಯದ ಮಾಹಿತಿ ನೀಡಲಾಯಿತು.

ಚಿನ್ನದ ಚೆನ್ನಮ್ಮಗೆ 11 ಪದಕ

ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಚನ್ನಮ್ಮ ಅತಿ ಹೆಚ್ಚು 11 ಚಿನ್ನದ ಪದಕ ಪಡೆದು ಸೈ ಎನ್ನಿಸಿಕೊಂಡಿದ್ದಾರೆ. ಪ್ರಾಣಿಶಾಸ ವಿಭಾಗದ ರಾಹುಲ್​ 9, ಎಂಬಿಎ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಸುರೇಖಾ 8, ರಾಜ್ಯಶಾಸ ವಿಷಯದಲ್ಲಿ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶಮೀಮ ರಫತ್​ 6, ಸಮಾಜ ಕಾರ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ದೀಪಾ 6, ಗಣಕ ವಿಾನ ವಿಭಾಗದ ವಿದ್ಯಾರ್ಥಿನಿ ಸುಬೀಯಾ ನೂರೈನ್​ 5, ರಸಾಯನಶಾಸ ವಿಭಾಗದ ವಿದ್ಯಾರ್ಥಿನಿ ಪ್ರಿಯಾಂಕಾ ರಾಠೋಡ್​ 5, ಜೀವ ರಸಾಯನಶಾಸ ವಿಭಾಗದ ವಿದ್ಯಾರ್ಥಿ ಶಶಿಕುಮಾರ್​ 5 ಹಾಗೂ ಕಲಬುರಗಿ ನಗರದ ಗುರುಕುಲ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರೀತಿ ಜಿ. ಖೇಮ್ಕರ್​ ಅವರು ಬಿಕಾಂ ಕೋರ್ಸಿನಲ್ಲಿ 5 ಚಿನ್ನದ ಪದಕ ಪಡೆದ ಪ್ರಮುಖರಾದ್ದಾರೆ.
ವಿವಿ ಕುಲಪತಿ ಪ್ರೊ.ಶಶಿಕಾಂತ್​ ಉಡಿಕೇರಿ ಪ್ರಾಸ್ತಾವಿಕ ಮಾತನಾಡಿ, ಗುಲ್ಬರ್ಗ ವಿವಿ ಕಳೆದ 4 ದಶಕದಿಂದ ಪ್ರದೇಶದ ಉನ್ನತ ಶಿಣ ವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ಪಿಎಚ್​ಡಿ ಪದವಿಯ ಮೌಲ್ಯ ಕಾಪಾಡಲು ಕಳೆದ ಒಂದು ದಶಕದಿಂದ ಪ್ರವೇಶ ಪರೀೆ ನಡೆಸಿ ಅರ್ಹರಿಗೆ ಅವಕಾಶ ನೀಡಲಾಗುತ್ತಿದೆ. ಪ್ರಸರಾಂಗದ ಮೂಲಕ ಪುಸ್ತಕ ಪ್ರಕಟಿಸಲಾಗುತ್ತಿದೆ. ಅಧ್ಯಯನ ಪೀಠಗಳು ಸಕ್ರಿಯವಾಗಿದ್ದು, ಇಲ್ಲಿನ ಡಿಜಿಟಲ್​ ಗ್ರಂಥಾಲಯ ಏಷಿಯಾದ ಪ್ರಮುಖ ಗ್ರಂಥಾಲಯಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು.
ಕುಲಸಚಿವ ಪ್ರೊ.ರಮೇಶ ಲಂಡನಕರ್​, ಮೌಲ್ಯಮಾಪನ ಕುಲಸಚಿವ ಡಾ.ಎನ್​.ಜಿ.ಕಣ್ಣೂರು, ವಿತ್ತಾಧಿಕಾರಿ ಜಯಾಂಬಿಕ ಸೇರಿ ವಿದ್ಯಾವಿಷಯಕ, ಸಿಂಡಿಕೇಟ್​ ಸಮಿತಿ ಸದಸ್ಯರು, ಬೋಧಕ&ಬೋಧಕೇತರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
"

ಇತ್ತೀಚಿನ ಅಪರೂಪದ ಹವಾಮಾನ ಟನೆಗಳು ಭವಿಷ್ಯದ ಭಯಾನಕ ಚಿತ್ರ ಎಳೆದು ತೋರಿಸುತ್ತಿವೆ. ಹವಾಮಾನ ಬದಲಾವಣೆ ಅನೇಕ ಪರಿಣಾಮಗಳು ಆರ್ಥಿಕ ವೃದ್ಧಿಯನ್ನೇ ಅಡ್ಡಿಪಡಿಸಬಹುದು. ಇಂದಿನ ಕೋಟ್ಯಂತರ ಜನರಿಗಿಂತಲೂ ಭವಿಷ್ಯದಲ್ಲಿ ಹುಟ್ಟಲಿರುವ ಲಾಂತರ ಕೋಟಿ ಜನರ ಮೇಲಿನ ನಮ್ಮ ನೈತಿಕ ಹೊಣೆಗಾರಿಕೆ ಇನ್ನಷ್ಟು ದೊಡ್ಡದಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.

ಪ್ರೊ.ಎಲ್​.ಎಂ.ಪಟ್ನಾಯಕ್​,

ವಿಶ್ರಾಂತ ಕುಲಪತಿ, ಉನ್ನತ ರಣಾ ತಂತ್ರಾನ ಸಂಸ್ಥೆ, ಪುಣೆ.

"

ಬುನಾದಿ ಭದ್ರವಾದರೆ ಮಾತ್ರ ಬೆಳೆಯಲು ಸಾಧ್ಯ. ಹೀಗಾಗಿ ನರ್ಸರಿಯಿಂದ ಪಿಯುಸಿವರೆಗೆ ಗುಣಮಟ್ಟದ ಶಿಣ ನೀಡಲು ಕನ್ನಡ&ಆಂಗ್ಲ ಬೋಧನೆಯ ಪಬ್ಲಿಕ್​ ಶಾಲೆ ಪ್ರಾರಂಭಿಸಲಾಗುತ್ತಿದೆ. ಅಂಗನವಾಡಿ ಶಿಣದಲ್ಲೂ ಗಮನಾರ್ಹ ಬದಲಾವಣೆ ತರಲಾಗುತ್ತಿದೆ. ಮಾತೃ ಭಾಷೆ ಜತೆಗೆ ಜಾಗತಿಕವಾಗಿ ಉದ್ಯೋಗ ಪಡೆಯಲು, ಉತ್ತಮ ಸಂವಹನಕ್ಕಾಗಿ ಇಂಗ್ಲೀಷ ಕಲಿಕೆ ಅಗತ್ಯ.

ಡಾ.ಎಂ.ಸಿ.ಸುಧಾಕರ,

ಉನ್ನತ ಶಿಕ್ಷಣ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net