ಶಿಕ್ಷಕರಿಂದಲ್ಲೇ ದೇಶದ ಪ್ರಗತಿ ಸಾಧ್ಯ

ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಸೇವಾ ನಿವೃತ್ತಿ ಹೊಂದಿದ್ದ ಡಾ.ದೇವೀಂದ್ರಪ್ಪ ಹಳಿಮನಿ ಅವರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ಡಾ.ಸುಭಾಷಚಂದ್ರ ಕೌಲಗಿ, ಡಾ.ಸಂಗಪ್ಪ ರಾಂಪುರೆ, ಡಾ.ಪದ್ಮರಾಜ ರಾಸಣಗಿ ಇತರರಿದ್ದರು.
ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಸೇವಾ ನಿವೃತ್ತಿ ಹೊಂದಿದ್ದ ಡಾ.ದೇವೀಂದ್ರಪ್ಪ ಹಳಿಮನಿ ಅವರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ಡಾ.ಸುಭಾಷಚಂದ್ರ ಕೌಲಗಿ, ಡಾ.ಸಂಗಪ್ಪ ರಾಂಪುರೆ, ಡಾ.ಪದ್ಮರಾಜ ರಾಸಣಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿಕೆ
  • ಡಾ.ಹಳಿಮನಿ ಸನ್ಮಾನ ಕಾರ್ಯಕ್ರಮ ಉದ್ಘಾಟನೆ
ಯಾದಗಿರಿ: ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅಮೂಲ್ಯವಾಗಿದ್ದು, ಶಿಕ್ಷಕರಿಂದಲ್ಲೇ ದೇಶದ ಪ್ರಗತಿ ಸಾಧ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡ ಸರ್ಕಾರಿ ಮಹಾವಿದ್ಯಾಲಯದ ರಾಜ್ಯಶಾಸ ವಿಭಾಗದ ಪ್ರಾಧ್ಯಾಪಕ ಡಾ.ದೇವೀಂದ್ರಪ್ಪ ಹಳಿಮನಿ ಅವರ ಸೇವಾ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಲ್ಪಿ ಕಲ್ಲು ಕಡಿದು ಮೂರ್ತಿ ಮಾಡುವಂತೆ ಮಕ್ಕಳನ್ನು ತಿದ್ದಿ, ತೀಡಿ ಅಕ್ಷರ ಕಲಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಶ್ರೇಷ್ಠ ಕೆಲಸ ಶಿಕ್ಷಕರ ಮೇಲಿದೆ ಎಂದರು.
ಮಕ್ಕಳು ಏನೇ ಸಾಧನೆ ಮಾಡಿದರೂ ಅದರಲ್ಲಿ ಪಾಲಕರ ಜತೆ ಶಿಕ್ಷಕರ ಪಾತ್ರ ಹೆಚ್ಚಿನದಾಗಿದೆ. ಸೇವಾ ನಿವೃತ್ತಿ ಹೊಂದಿರುವ ದೇವೀಂದ್ರಪ್ಪ ಹಳಿಮನಿ ಅವರು ಸಾವಿರಾರು ಮಕ್ಕಳಿಗೆ ಉತ್ತಮ ವಿದ್ಯೆ ನೀಡಿದ್ದಾರೆ. ಇವರಿಂದ ಶಿಕ್ಷಣ ಪಡೆದ ಅನೇಕರು ವಿವಿಧ ಉನ್ನತ ಹುದ್ದೆಗಳಲ್ಲಿ ಇರುವುದು ಕೇಳಿ ಸಂತಸವಾಯಿತು. ಎಲ್ಲ ಶಿಕ್ಷಕರು ಇದೇ ತರಹ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಗಿರಿ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಗುರು, ಹಿರಿಯರಿಗೆ ಮತ್ತು ಪಾಲಕರಿಗೆ ಗೌರವಿಸುವ ಮಕ್ಕಳು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಹಳಮನಿ ಅವರು ತಮ್ಮ ಉತ್ತಮ ಶಿಷ್ಯರ ಬಳಗವೇ ಹೊಂದಿದ್ದಾರೆ. ಸೇವಾ ಅವಧಿಯಲ್ಲಿ ಮೌಲ್ಯಯುತ ಶಿಕ್ಷಣ ನೀಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಳಿಮನಿ, ತಮ್ಮ ಸುಧೀರ್ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಸಂಗಪ್ಪ ರಾಂಪುರೆ, ಡಾ.ಪದ್ಮರಾಜ ರಾಸಣಸಗಿ, ಇಂಜಿನಿಯ ಭೀಮರೆಡ್ಡಿ ಪಾಟೀಲ್​, ಚನ್ನಾರೆಡ್ಡಿ ತಂಗಡಗಿ, ಮಲ್ಲಣ್ಣಗೌಡ ಸೇರಿದಂತೆಯೇ ಇತರರಿದ್ದರು. ಇದೇ ವೇಳೆ ಡಾ.ದೇವೀಂದ್ರಪ್ಪ ಹಳಮನಿ ದಂಪತಿಗೆ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net