ಸೇವಾ ಮನೋಭಾವದ ಸಂಸ್ಥೆಗಳಿಂದಲೇ ಮೌಲ್ಯಗಳ ಉಳಿವು organizations
ಕೊರಟಗೆರೆಯ ಹೊಳವನಹಳ್ಳಿ ಹೋಬಳಿಯorganizations ಅಕ್ಕಿರಾಂಪುರ ಗ್ರಾಮದ ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಲಕ್ಷಿ$್ಮ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಿದ್ಧರಬೆಟ್ಟ ಶ್ರೀವಿರಭದ್ರ ಶಿವಾಚಾರ್ಯ ಸ್ವಾಮೀಜಿ, ಎಸ್ಕೆಡಿಆರ್ಡಿಪಿ ಜಿಲ್ಲಾ ನಿರ್ದೇಶಕ ಪ್ರವಿಣ್ ಕುಮಾರ್, ತುಮಕೂರು ಡೇರಿ ನಿರ್ದೇಶಕ ವಿ.ಸಿದ್ದಗಂಗಯ್ಯ ಇತರರಿದ್ದರು.
Published on:
Copied
Follow Us
ಕೊರಟಗೆರೆ :ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡವರ ಬದುಕಿಗೆ ಆಸರೆಯಾಗುವ ಜತೆಗೆ ದೇವಾಲಯಗಳ ಜೀಣೋರ್ದ್ಧಾರ, ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಿದ್ಧರಬೆಟ್ಟ ಶ್ರೀವಿರಭದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. organizations
ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿ (ಕರಿ ತಿಮ್ಮಪ್ಪ) ದೇವಸ್ಥಾನದಲ್ಲಿ ಶುಕ್ರವಾರ ಎಸ್ಕೆಡಿಆರ್ಡಿಪಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಲಕ್ಷಿ$್ಮ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಆಸರೆಯಾಗಿದೆ.
ಇಂತಹ ಸೇವಾ ಮನೋಭಾವದ ಸಂಸ್ಥೆಗಳಿಂದಲೇ ಗ್ರಾಮಗಳು, ದೇವಾಲಯಗಳು ಹಾಗೂ ಸಾಮಾಜಿಕ ಮೌಲ್ಯಗಳು ಉಳಿದು ಬೆಳೆಯುತ್ತಿವೆ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವಿಣ್ ಕುಮಾರ್ ಮಾತನಾಡಿ, ಸಂಸ್ಥೆಯು 6 ರಾಷ್ಟ್ರೀಕೃತ ಬ್ಯಾಂಕ್ಗಳ ಸೇವಾ ಪ್ರತಿನಿಧಿಯಾಗಿ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದೆ. ಜತೆಗೆ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ 650ಕ್ಕೂ ಹೆಚ್ಚು ನಿರ್ಗತಿಕರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಿದೆ ಎಂದು ತಿಳಿಸಿದರು.
ತುಮಕೂರು ಹಾಲು ಒಕ್ಕೂಟ (ತುಮುಲ್) ನಿರ್ದೇಶಕ ವಿ.ಸಿದ್ದಗಂಗಯ್ಯ ಮಾತನಾಡಿ, ಯೋಜನೆಯು ರೈತರು, ಹಾಲು ಉತ್ಪಾದಕರು ಹಾಗೂ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಬಲ ತುಂಬಿದೆ. ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸಾರ್ವಜನಿಕರು ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಾಲೂಕು ಯೋಜನಾಧಿಕಾರಿ ಅನಿತಾ, ವಲಯಅಧಿಕಾರಿ ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷೆ ಅಂಜನಮ್ಮ ನಾಗರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಈಶಪ್ರಸಾದ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ರಮೇಶ್, ಒಕ್ಕೂಟ ಅಧ್ಯಕ್ಷ ಪಾಂಡಣ್ಣ, ಮುಖಂಡರಾದ ನಯಾಜ್, ರಂಜಿತ್, ಕೃಷಿ ಮೇಲ್ವಿಚಾರಕ ಮಹೇಂದ್ರ ಇತರರಿದ್ದರು.