ಉಕ್ಕಿ ಹರಿಯುತ್ತಿರುವ ಭೀಮಾ ನದಿ

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಭೀಮಾ ನದಿಗೆ ಮಣ್ಣೂರ ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಸೋಮವಾರ ಭಾಗಶಃ ಮುಳುಗಡೆಯಾಗಿರುವುದು.
ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಭೀಮಾ ನದಿಗೆ ಮಣ್ಣೂರ ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಸೋಮವಾರ ಭಾಗಶಃ ಮುಳುಗಡೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಭುಯ್ಯಾರ ಸೇತುವೆ ಮುಳುಗಡೆ, ಸಂಪರ್ಕ ಕಡಿತ
  • ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ
ಕರಜಗಿ: ಮಹಾರಾಷ್ಟ್ರದ ಉಜನಿ, ವೀರ ಸೇರಿ ಇನ್ನಿತರ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಭೀಮಾ ನದಿಗೆ ಹರಿಸಿದ್ದರಿಂದ ಅಫಜಲಪುರ ತಾಲೂಕಿನಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ತೀರದಲ್ಲಿ ಆತಂಕದ ಸ್ಥಿತಿ ಸೃಷ್ಟಿಯಾಗಿದೆ.
ಮಣ್ಣೂರ ಗ್ರಾಮದಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ನದಿ ಮಧ್ಯದಲ್ಲಿ ದೇಗುಲವಿದ್ದು, ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ದೇವಸ್ಥಾನ ಟ್ರಸ್ಟ್​ ಕಮಿಟಿಯೂ ಭಕ್ತರ ಪ್ರವೇಶ ನಿಷೇಧಿಸಿದೆ.
ನೆರೆ ತಗ್ಗುವವರೆಗೂ ನಿತ್ಯ ಭೀಮಾ ದಡದಿಂದಲೇ ದೇವಿಗೆ ಪೂಜೆ ಸಲ್ಲಿಸಬೇಕು. ಅಲ್ಲದೆ ಭಕ್ತರಾರು ಸೇತುವೆ ಮೇಲಿಂದ ದೇವಸ್ಥಾನಕ್ಕೆ ತೆರಳಬಾರದು ಎಂದು ಸೂಚನೆ ನೀಡಿದೆ.
ಮಣ್ಣೂರ ಗ್ರಾಮದಿಂದ ಭುಯ್ಯಾರ ಮೂಲಕ ಭುಯ್ಯಾರ, ಇಂಡಿ, ರೋಡಗಿ, ಖೇಡಗಿ, ಆಲಮೇಲ ಸೇರಿ ಇಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಭುಯ್ಯಾರ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೋಮವಾರ ಸಂಜೆ ವೇಳೆಗೆ ಸೇತುವೆ ಬಹುತೇಕ ಮುಳುಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ಬಂದ್​ ಮಾಡಲಾಗಿದೆ.
ಸೊನ್ನ ಬ್ಯಾರೇಜ್​ನ 21 ಗೇಟ್​ಗಳ ಮೂಲಕ 1 ಲಕ್ಷ ಕ್ಯೂಸೆಕ್​ ನೀರು ಹೊರ ಬಿಡಲಾಗುತ್ತಿದ್ದು, ಇದರಿಂದ ಬ್ಯಾರೇಜ್​ ಕೆಳಗಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಸಾಕಷ್ಟು ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net