

ಪ್ರಮುಖ ಮುಖ್ಯಾಂಶಗಳು
ಭಗವಂತನ ದರ್ಶನವಾದರೆ ಮೋಕ್ಷ ಸಿಗುವುದು ನಿಶ್ಚಿತ. ಕೇವಲ ಮೋಕ್ಷಕ್ಕೆ ಅಲ್ಲ, ಎಲ್ಲಾ ಸಾಧನೆಗೂ ಇದು ಮೂಲಮಂತ್ರ ಹೌದು. ಜಗತ್ತಿಗೆ ಮೂಲನಾದ ರಾಮನ ಮಂತ್ರ ಜಪಿಸುವುದರಿಂದ ಮೋಕ್ಷ ಮಾರ್ಗ ಕಂಡುಕೊಳ್ಳಬಹುದು.
ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರು,
ಮಠಾಧೀಶರು, ಉತ್ತರಾದಿ ಮಠ.
ವೇದಿಕೆ ವತಿಯಿಂದ ಪ್ರತಿ ವರ್ಷವೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಆದರೆ ಈ ಬಾರಿ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಪುರಸತರ ಸುದೈವ. ದಾಸರ ಸಂದೇಶ ಮನೆ ಮನಗಳಿಗೆ ತಲುಪಿಸುವ ಕಾರ್ಯ ವಾಹಿನಿ ನಿರಂತರ ಮಾಡುತ್ತಿದೆ. ಶ್ರೀಗಳ ಅನುಗ್ರಹದಿಂದ ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಕಾರ್ಯ ಮುಂದುವರಿಸಲಾಗುವುದು.
ಪಂ.ಗೋಪಾಲಾಚಾರ್ಯ ಅಕಮಂಚಿ,
ಅಧ್ಯಕ್ಷ, ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ.