ಮೈಸೂರು: ವಯೋಸಹಜ ಖಾಯಿಲೆಗಳಿಂದ ಶನಿವಾರ ಸಂಜೆ ವಿಧಿವಶರಾಗಿದ್ದ ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿ ಎಸ್.ಜಾನಕಿ(S Janaki) ಅವರ ಅಂತ್ಯಕ್ರಿಯೆ ಮೈಸೂರಿನ ಅವರ ನೆಚ್ಚಿನ ತೋಟದಲ್ಲಿ ನೇರವೇರಿದೆ.
ಎಸ್.ಜಾನಕಿಯವರ ಕೊನೆ ಆಸೆಯಂತೆ ಮೈಸೂರು ಜಿಲ್ಲೆಯಲ್ಲೇ ಅವರು ಅಂತ್ಯಕ್ರಿಯೆ ನೆರವೇರಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿಯ ತೋಟದಲ್ಲಿ ಸರ್ಕಾರಿ ಸಕಲ ಗೌರವಗಳೊಂದಿಗೂ ಅಂತ್ಯಕ್ರಿಯೆ ನಡೆದಿದ್ದು, ಮೊಮ್ಮಗಳು ಅಪ್ಸರಾ ವಿಧಿವಿದಾನ ನೆರವೇರಿಸಿ ಅಗ್ನಿ ಸ್ಪರ್ಷ ಮಾಡಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿ ಬೇರೆ ರಾಜ್ಯದ ಸಂಗೀತ ಲೋಕದ ದಿಗ್ಗಜರು, ರಾಜಕೀಯ ಗಣ್ಯರು, ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳ ಸಮೂಹದಲ್ಲಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.