ಕಕ್ಕೇರಾ: ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಪೀರಗಾರದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಹಾರಿಸಿದ್ದ ರಾಷ್ಟçಧ್ವಜ ಸಂಜೆ ಕೆಳಗಿಳಿಸದೆ ಪ್ರಮಾದ ಎಸಗಲಾಗಿದೆ. ಮುಖ್ಯ ಶಿಕ್ಷಕಿ ಶಿಲ್ಪಾ ಗುರಾಣಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸೋಮನಿಂಗಪ್ಪ ಕುರಿ ಗುರುವಾರ ಬೆಳಗ್ಗೆ ೮.೩೦ಕ್ಕೆ ಧ್ವಜಾರೋಹಣ ನೆರವೇರಿಸಿದ್ದರು. ಸಂಜೆ ಧ್ಜಜ ಅವಹೋರಣ ಮಾಡದೆ ಸಿಬ್ಬಂದಿ ಬೇಜವಾಬ್ದಾರಿ ತೋರಿದ್ದರಿಂದ ರಾತ್ರಿಯಿಡೀ ಹಾರಾಡಿದೆ. ಈ ಕುರಿತು ಜಿಪಿಎಸ್‌ಸಹಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ವಿಷಯ ಗೊತ್ತಾಗುತ್ತಿದ್ದಂತೆ ಮುಖ್ಯಶಿಕ್ಷಕಿ ಸೂಚನೆ ಮೇರೆಗೆ ಗುಮಾಸ್ತ ಧ್ವಜ ಅವರೋಹಣ ಮಾಡಿದ್ದಾನೆ. ಮುಖ್ಯಶಿಕ್ಷಕಿ ನಿರ್ಲಕ್ಷ್ಯಕ್ಕೆ ಇಲಾಖೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಸೋಮನಿಂಗಪ್ಪ ಕುರಿ, ಪುರಸಭೆ ಸದಸ್ಯೆ ದುರಗಮ್ಮ ಜುಮ್ಮಾರ, ಹಣಮಂತರಾಯ ಜುಮ್ಮಾರ್ ಆಗ್ರಹಿಸಿದ್ದಾರೆ.