ಯುವಕರಿಗೆ ದಿ.ಮುದ್ನಾಳ್​ ಮಾದರಿ

ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡ ಮಾಜಿ ಶಾಸಕ ಲಿಂ.ವೆಂಕಟರೆಡ್ಡಿಗೌಡ ಮುದ್ನಾಳ್​ ಅವರ ಜನ್ಮದಿನ ಆಚರಿಸಲಾಯಿತು. ಅಯ್ಯಣ್ಣ ಹುಂಡೇಕಾರ, ಸಿದ್ದಪ್ಪ ಹೊಟ್ಟಿ, ಹಣಮಂತರಡ್ಡಿ ಮುದ್ನಾಳ್​, ಮಹೇಶರಡ್ಡಿ ಮುದ್ನಾಳ್​ , ಮಲ್ಲಣ್ಣಗೌಡ ಪಾಟೀಲ್​ ಹತ್ತಿಕುಣಿ, ಖಂಡಪ್ಪ ದಾಸನಕೇರಿ, ಸಿದ್ದಣ್ಣಗೌಡ ಕಾಡಂನೋರ್​ ಇತರರಿದ್ದರು.
ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡ ಮಾಜಿ ಶಾಸಕ ಲಿಂ.ವೆಂಕಟರೆಡ್ಡಿಗೌಡ ಮುದ್ನಾಳ್​ ಅವರ ಜನ್ಮದಿನ ಆಚರಿಸಲಾಯಿತು. ಅಯ್ಯಣ್ಣ ಹುಂಡೇಕಾರ, ಸಿದ್ದಪ್ಪ ಹೊಟ್ಟಿ, ಹಣಮಂತರಡ್ಡಿ ಮುದ್ನಾಳ್​, ಮಹೇಶರಡ್ಡಿ ಮುದ್ನಾಳ್​ , ಮಲ್ಲಣ್ಣಗೌಡ ಪಾಟೀಲ್​ ಹತ್ತಿಕುಣಿ, ಖಂಡಪ್ಪ ದಾಸನಕೇರಿ, ಸಿದ್ದಣ್ಣಗೌಡ ಕಾಡಂನೋರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಅಯ್ಯಣ್ಣ ಹುಂಡೇಕಾರ ಹೇಳಿಕೆ
  • ಮಾಜಿ ಶಾಸಕ ದಿ.ವೆಂಕಟರಡ್ಡಿ ಜನ್ಮದಿನ ಆಚರಣೆ
ಯಾದಗಿರಿ: ನುಡಿದಂತೆ ನಡೆದ ಮಾಜಿ ಶಾಸಕ ಲಿಂ.ವೆಂಕಟರಡ್ಡಿ ಮುದ್ನಾಳ್​ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ನಿವೃತ್ತ ಶಿಕ, ಸಾಹಿತಿ ಅಯ್ಯಣ್ಣ ಹುಂಡೇಕಾರ ಹೇಳಿದರು.
ಚಿತ್ತಾಪುರ ರಸ್ತೆಯ ಮುದ್ನಾಳ್​ ಕ್ರಾಸ್​ ಹತ್ತಿರ ಶನಿವಾರ ಆಯೋಜಿಸಿದ್ದ ಲಿಂ.ವೆಂಟಕರಡ್ಡಿ ಮುದ್ನಾಳ್​ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೆಂಟಕರಡ್ಡಿ ಅವರ ಮಾತುಗಳು ಕಠೋರ ಅನಿಸಿದರೂ ತಾಯಿ ಹೃದಯ ಹೊಂದಿದ್ದರು.
ಸುಳ್ಳು, ಗೊಳ್ಳು ಹೇಳದೇ, ಇದ್ದುದ್ದನ್ನು ಇದ್ದಂತೆ ಹೇಳುವ ಮೂಲಕ ಪ್ರಾಮಾಣಿಕವಾಗಿ, ಶಾಸಕರಾಗಿ ಸಮಾಜ ಸೇವಕರಾಗಿ ಕೆಲಸ ಮಾಡುವ ಮೂಲಕ ಅಪಾರ ಜನರ ಹೃದಯದಲ್ಲಿ ಸ್ಥಾನ ಪಡೆದ ವ್ಯಕ್ತಿಯಾಗಿದ್ದರು ಎಂದರು.
ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯಲ್ಲಿ ಹಲವಾರು ಹೊಸ, ಹೊಸ ಯೋಜನೆಗಳನ್ನು ತಂದು ಕಾರ್ಯಗತ ಮಾಡುವ ಮೂಲಕ ನಗರಕ್ಕೆ ಹೊಸ ಮೆರಗು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಅನ್ಯಾಯ, ಅಕ್ರಮಗಳಿಗೆ ಕಡಿವಾಣ ಹಾಕಿ, ನ್ಯಾಯಪರ ಜೀವನ ನಡೆಸಿ ಅನೇಕರಿಗೆ ಪರೋಪಕಾರದ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯರೂ ಆದ ಅವರ ಪುತ್ರ ಮಹೇಶರಡ್ಡಿ ಮುದ್ನಾಳ್​ ಮಾತನಾಡಿ, ತಮ್ಮ ತಂದೆಯವರು ಸದಾ ಜನರ ಒಳಿಗಾಗಿ ಕೆಲಸ ಮಾಡಿದ್ದರು. ಅವರಿಗೆ ಅನ್ಯಾಯ, ಭ್ರಷ್ಟಚಾರ ಎಂದರೆ ಆಗಿ ಬರುತ್ತಿರಲಿಲ್ಲ. ನೇರ ನುಡಿಯ ವ್ಯಕ್ತಿತ್ವ ಹೊಂದಿದ್ದರು. ಹೀಗಾಗಿ ಅವರ ಬಳಿ ಬರಲು ಕೆಲವರು ಹೆದರುತ್ತಿದ್ದರು. ಆದರೆ ಅವರೆಂದು ಸುಮ್ಮನ್ನೆ ಯಾರನ್ನು ತೆಗಳುವುದು, ಹೊಗಳುವುದು ಮಾಡಿರಲಿಲ್ಲ. ಹೀಗಾಗಿಯೇ ಇಂದಿಗೂ ಅವರು, ಯಾದಗಿರಿ, ಗುರುಮಠಕಲ್​ ಮತೇತ್ರದ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಆರಂಭದಲ್ಲಿ ಅವರ ಭಾವಚಿತ್ರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಅಭಿಮಾನಿಗಳು ತಂದಿದ್ದ ಕೇಕ್​ ಕಟ್​ ಮಾಡುವ ಮೂಲಕ ಅವರ ಜನ್ಮದಿನ ಆಚರಿಸಲಾಯಿತು.
ಹಿರಿಯ ಮುಖಂಡರಾದ ಹಣಮಂತರಡ್ಡಿ ಮುದ್ನಾಳ್​, ರಮೇಶಗೌಡ ಮುದ್ನಾಳ್​, ಮಲ್ಲಣ್ಣಗೌಡ ಪಾಟೀಲ್​ ಹತ್ತಿಕುಣಿ, ಸಿದ್ದಪ್ಪ ಹೊಟ್ಟಿ, ಖಂಡಪ್ಪ ದಾಸನಕೇರಿ, ಲಿಂಗಪ್ಪ ಹತ್ತಿಮನಿ, ಸಿದ್ದಣ್ಣಗೌಡ ಕಾಡಂನೋರ್​, ಭೀಮರಾಯ ಬಂಡಿ, ಶರಣಗೌಡ ಬಾಡಿಯಾಳ, ಚನ್ನರಾಯ ಗೋಗಿ, ವಿಲಾಸ ಪಾಟೀಲ್​, ರಾಜಶೇಖರ ಸ್ವಾಮಿ, ಶಿವರೆಡ್ಡಿ ಪಾಟೀಲ್​, ಸೋಮು ಜೈನ, ಆನಂದ, ಉಮೇಶ ಸ್ವಾಮಿ, ಸಿದ್ದಲಿಂಗಪ್ಪ ನಾಯಕ, ಸುಭಾಷ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net