ರೈತ ಸಂಘದ ರಾಜ್ಯ ಮುಖಂಡ ಸಿದ್ದನಗೌಡ ಪಾಟೀಲ ಹಾಗೂ ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಶಿವಶರಣ ರಡ್ಡಿ ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ವೃತ್ತಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಶಿರಸ್ತೇದಾರ ಸುರೇಶ ಮ್ಯಾಗೇರಿ, ಮುಖಂಡ ಭೀಮನಗೌಡ ಹರನಾಳ, ಸುರೇಶ ಕೊಣ್ಣೂರ, ಸಂಪತ ಜಮಾದಾರ, ರಮಾನಾಥ ಚಕ್ಕಡಿ, ಚನ್ನಬಸು ಹೊಸಮನಿ, ಸಂತೋಷ ತಳವಾರ, ಶ್ರೀಶೈಲ ಜಮಾದಾರ, ಸುರೇಶ ಮಣ್ಣೂರ ಸೇರಿ ರಡ್ಡಿ ಸಮಾಜದ ಪ್ರಮುಖರು ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು.