ಕೊತ್ತಂಬರಿ ಬೆಳೆದ ರೈತರ ಬದುಕಲ್ಲಿ ಕತ್ತಲು! farmers

ಕೊತ್ತಂಬರಿ ಬೆಳೆದ ರೈತರ ಬದುಕಲ್ಲಿ ಕತ್ತಲು! farmers
ಕೊತ್ತಂಬರಿ ಬೆಳೆದ ರೈತರ ಬದುಕಲ್ಲಿ ಕತ್ತಲು! farmers
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆಯಲ್ಲಿ ಕಂತೆ 2 ರೂ. ಗೆ ಮಾರಾಟ
  • ಹಸುಗಳಿಗೆ ಮೇಯಲು ಬಿಟ್ಟ ರೈತ
ಬೂದಿಕೋಟೆ; ಮಾರುಕಟ್ಟೆಯಲ್ಲಿ ದರ ಕುಸಿದು ತರಕಾರಿ ಬೆಳೆದ ರೈತರು ಸಂಕಷ್ಟ ಅನುಭವಿಸಿದ್ದ ಬೆನ್ನಲ್ಲೇ ಈಗ ಕೊತ್ತಂಬರಿ ಬೆಳೆದವರಿಗೆ ಬೆಲೆ ಕುಸಿದು ಪೇಚಿಗೆ ಸಿಲುಕಿದ್ದಾರೆ. farmers
ಹೋಬಳಿಯ ಗುಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ರೈತರು ಕೊತ್ತಂಬರಿ ಸೊಪು$್ಪ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಕಟಾವು ಮಾಡದೆ ದನಗಳನ್ನು ಬಿಟ್ಟು ಮೇಯಿಸಲಾಗುತ್ತಿದೆ.
ಒಂದು ಎಕರೆಯಲ್ಲಿ ಕೊತ್ತಂಬರಿ ಬೆಳೆಯಲು ಸುಮಾರು ಸುಮಾರು 25 ಸಾವಿರ ರೂ. ಖರ್ಚು ಮಾಡಬೇಕಿದೆ.
ಆದರೆ, ಕಟಾವು ವೇಳೆಗೆ ಮಾರುಕಟ್ಟೆಯಲ್ಲಿ ಒಂದು ಕಟ್ಟು ಕೇವಲ 2 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಕಟಾವು ಮಾಡಿದ ಕೂಲಿಯೂ ಸಿಗುವುದಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಾರೆ.
ಒಂದು ಕಟ್ಟು ಕನಿಷ್ಠ 10 ರಿಂದ 15 ರೂ.ಗೆ ಮಾರಾಟವಾಗಿದ್ದರೆ ಆದಾಯ ಬರುತ್ತಿತ್ತು. ಆದರೆ, ಮಾರುಕಟ್ಟೆಯವರು 2 ರೂ. ಕೇಳುತ್ತಿದ್ದು, ಸೊಪು$್ಪ ಕೀಳುವ ದುಡ್ಡು ಕೂಡ ಬರುವುದಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ಕಿತ್ತುಕೊಂಡು ಹೋಗಲು ಬಿಟ್ಟು, ಉಳಿದದ್ದನ್ನು ಹಸುಗಳಿಗೆ ಮೇಯಲು ಬೀಡಲಾಗಿದೆ. ಬೆಳೆ ನಷ್ಟವಾಗಿದ್ದರೂ, ಹಸಿದ ಪ್ರಾಣಿಗಳಿಗೆ ಮತ್ತು ಬಡವರಿಗೆ ಆಹಾರವಾಗುತ್ತಿರುವುದು ಸಮಾಧಾನದ ಸಂಗತಿ ಎಂದು ರೈತ ಮಲ್ಲಪ್ಪ ಭಾವುಕರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net