ತಾಲೂಕಿನ ಕಸಬಾ, ಬೆಳ್ಳೂರು, ಹೊಣಕೆರೆ, ದೇವಲಾಪುರ, ಬಿಂಡಿಗನವಿಲೆ ಸೇರಿದಂತೆ 5 ಹೋಬಳಿ ಕೇಂದ್ರವಿದ್ದು, ಎಲ್ಲ ಪ್ರದೇಶಗಳು ಕೂಡ ಮಳೆಯನ್ನೇ ಆಶ್ರಯಿಸಿವೆ. ಇದರ ಜತೆಗೆ ತರಕಾರಿ, ತೆಂಗು ಇತರ ಬೆಳೆ ಬೆಳೆಯುವ ರೈತರು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಅಲ್ಲದೆ ಜನ-ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಈ ಪ್ರದೇಶಗಳು ವರುಣನ ಅವಕೃಪೆಗೆ ಒಳಗಾಗಿದ್ದು, ಕಳೆದ ಜೂನ್‌ನಿಂದ ಯಾವುದೇ ಮಳೆ ಬೀಳದ ಕಾರಣ ಬೆಳೆಗಳು ಒಣಗುತ್ತಿವೆ.