ಚಿಕಿತ್ಸೆ ಫಲಿಸದೆ ಗಾಯಾಳು ಸಾವು / NELAMANGAL

ನೆಲಮಂಗಲದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಬ್ರೇಜ್​ ಮೃತಪಟ್ಟ ಹಿನ್ನೆಲೆ ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​ ಸ್ಥಳಕ್ಕೆ ಭೇಟಿ ನೀಡಿದರು.
ನೆಲಮಂಗಲದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಬ್ರೇಜ್​ ಮೃತಪಟ್ಟ ಹಿನ್ನೆಲೆ ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​ ಸ್ಥಳಕ್ಕೆ ಭೇಟಿ ನೀಡಿದರು.
Published on
ನೆಲಮಂಗಲ : ಪೈಪ್​ಲೈನ್​ ಅಳವಡಿಸಲು ಅಗೆದ ರಸ್ತೆ ಗುಂಡಿಯಿಂದಾಗಿ ಬೈಕ್​ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ತಾಲೂಕಿನ ಇಸ್ಲಾಂಪುರ ನಿವಾಸಿ ತಬ್ರೇಜ್​ (32) ಮೃತ. ಡಿ.17ರಂದು ನಿಯಂತ್ರಣ ತಪ್ಪಿ ಬಿದ್ದಿದ್ದ ತಬ್ರೇಜ್​ ಅವರನ್ನು ನಿಮ್ಹಾನ್ಸ್​ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿ.19ರಂದು ರಾತ್ರಿ 9ರಲ್ಲಿ ಮೃತಪಟ್ಟಿದ್ದಾರೆ. ನಗರ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮೃತನ ಕುಟುಂಬಸ್ಥರಿಗೆ 2.5ಲಕ್ಷ ರೂ.ಪರಿಹಾರ ನೀಡುವುದಾಗಿ ತಿಳಿಸಿದರು. ಡಿವೈಎಸ್​ಪಿ ಜಗದೀಶ್​, ಆರಕ್ಷಕ ನಿರೀಕ್ಷಕ ಭರತ್​ಗೌಡ, ನರೇಂದ್ರಬಾಬು, ರವಿ, ಮುರಳೀಧರ್​ ಇತರರು ಇದ್ದರು.
ಕುಟುಂಬಸ್ಥರ ಆಕ್ರೋಶ : ತಬ್ರೇಜ್​ ಮೃತಪಟ್ಟ ಹಿನ್ನೆಲೆಯಲ್ಲಿ ಮೃತದೇಹವನ್ನು ಮನೆ ಬಳಿ ಇಟ್ಟುಕೊಂಡು ಕುಟುಂಬಸ್ಥರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಡಿಸಿ ಸ್ಥಳಕ್ಕೆ ಬರುವವರೆಗೂ ಮರಣೋತ್ತರ ಪರೀಕ್ಷೆಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ, ತಹಸೀಲ್ದಾರ್​ ಮಧ್ಯಪ್ರವೇಶದಿಂದ ಕುಟುಂಬಸ್ಥರು ಮೃತದೇಹವನ್ನು ಮರಣೋತ್ತರ ಪರೀೆ ನಡೆಸಲು ಸಮ್ಮತಿ ಸೂಚಿಸಿದರು. ಈ ನಡುವೆ ತಬ್ರೇಜ್​ ಕುಟುಂಬಸ್ಥರು ನೆಲಮಂಗಲ ಠಾಣೆಯಲ್ಲಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.
ಪೊಲೀಸರ ಕಸರತ್ತು : ಶುಕ್ರವಾರ ತಡರಾತ್ರಿಯಿಂದಲೂ ಮರಣೋತ್ತರ ಪರೀಕ್ಷೆಗೆ ಮೃತದೇಹ ನೀಡುವಂತೆ ಕುಟುಂಬಸ್ಥರನ್ನು ಮನವೊಲಿಸಲು ಪೊಲೀಸರು ಹರಸಾಹಸ ಪಟ್ಟರು. ಬೆಳಗ್ಗೆಯಿಂದ ಮನೆಯ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೆಲಮಂಗಲ ನಗರ ಪೊಲೀಸರು ಹೆಚ್ಚುವರಿ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ದಲಿತ ಮುಖಂಡ ಭಾಸ್ಕರ್​ ಪ್ರಸಾದ್​ ಭೇಟಿ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net