ವಿದ್ಯಾರ್ಥಿಗಳಲ್ಲಿ ಣಿಸಿದೆ ಓದುವ ಹವ್ಯಾಸ / DODABALLAPUR

ದೊಡ್ಡಬಳ್ಳಾಪುರದ ಶಿಕ್ಷಕ ವಿ.ಶಿವರಾಜ್​ ಬರೆದಿರುವ ಬೆಳಕಿನೆಡೆಗೆ ಪುಸ್ತಕವನ್ನು ಎಂಎಲ್ಸಿ ಪುಟ್ಟಣ್ಣ ಬಿಡುಗಡೆಗೊಳಿಸಿದರು. ನಿವೃತ್ತ ಶಿಕ್ಷಣ ಇಲಾಖಾಧಿಕಾರಿಗಳಾದ ಗಂಗಮಾರೇಗೌಡ, ರಂಗಪ್ಪ, ಚಂದ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್​.ಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್​, ಉಪಪ್ರಾಂಶುಪಾಲೆ ದಾಕ್ಷಾಯಿಣಿ, ಕನ್ನಡ ಹೋರಾಟಗಾರ ಬಿ.ಎಸ್​.ಚಂದ್ರಶೇಖರ್​, ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಮಂಜುನಾಥ್​ ಇದ್ದರು.

Published on
ದೊಡ್ಡಬಳ್ಳಾಪುರ : ಇತ್ತೀಚೆಗೆ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸ ಹೇರಳವಾಗುತ್ತಿದೆ. ಎಐ ತಂತ್ರಜ್ಞಾನದಿಂದಾಗಿ ಮಕ್ಕಳು ಅದರತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ತರಗತಿಗಳಲ್ಲಿ ಸ್ಮಾರ್ಟ್​ಕ್ಲಾಸ್​ ತಂತ್ರಜ್ಞಾನದಿಂದಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರ ಅವಶ್ಯಕತೆಯೇ ಇಲ್ಲದಂತಹ ವಾತಾವರಣ ನಿಮಾರ್ಣವಾಗುವ ಆತಂಕ ಎದುರಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ ಆತಂಕ ವ್ಯಕ್ತಪಡಿಸಿದರು.
ನಗರದ ಕನ್ನಡ ಜಾಗೃತಿ ಭವನದಲ್ಲಿ ಭಾನುವಾರ ಶಿಕ್ಷಕ ವಿ.ಶಿವರಾಜ್​ ಬರೆದಿರುವ ಬೆಳಕಿನೆಡೆಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರು, ಉಪನ್ಯಾಸಕರು ಮಕ್ಕಳ ಎದುರಿಗೆ ನಿಂತು ಪಾಠ ಮಾಡುವ ವ್ಯವಸ್ಥೆಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಇಂತಹ ಪುಸ್ತಕ ಬರೆಯುವ ಶಿಕ್ಷಕರಿಗೆ ಪ್ರೋತ್ಸಾಹ, ಬೆಂಬಲ ಅವಶ್ಯಕ. ಶಿಕ್ಷಕರು ಮತ್ತಷ್ಟು ಪುಸ್ತಕ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಶ್ರೀ ಕೊಂಗಾಡಿಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೇಜರ್​ ಎಸ್​.ಮಹಾಬಲೇಶ್ವರ್​ ಮಾತನಾಡಿ, ನಾನು ಇಲ್ಲಿಯವರೆಗೂ ಯಾವುದೇ ತಂತ್ರಜ್ಞಾನ ಬಳಸದೆ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಕಾಲೇಜಿನ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿರುವುದು ಉಪನ್ಯಾಸಕರಾದ ನಮಗೆ ಹೆಮ್ಮೆಯ ವಿಷಯ. ಇಂತಹ ಲೇಖಕರಿಗೆ, ಶಿಕ್ಷಕರಿಗೆ, ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವೆಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net