ವೈಭವದ ದೇವರ ಸ್ತಂಭಾರೋಹಣ

ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆ ನಿಮಿತ್ತ ಶನಿವಾರ ಸಂಜೆ ನಡೆದ ದೇವರ ಸ್ತಂಭಾರೋಹಣದಲ್ಲಿ ಭಾಗಿಯಾದ ಅಪಾರ ಭಕ್ತರು.
ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆ ನಿಮಿತ್ತ ಶನಿವಾರ ಸಂಜೆ ನಡೆದ ದೇವರ ಸ್ತಂಭಾರೋಹಣದಲ್ಲಿ ಭಾಗಿಯಾದ ಅಪಾರ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಸುರಪುರದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೋತ್ಸವ
  • ಉತ್ಸವ ಮೂರ್ತಿ ಗರುಡನ ಪಲ್ಲಕ್ಕಿ ಮೆರವಣಿಗೆ
ಸುರಪುರ: ಐತಿಹಾಸಿಕ ಸುಪ್ರಸಿದ್ಧ ಶ್ರೀ ವೇಣುಗೋಪಾಲ ಸ್ವಾಮಿ ಹಾಲೋಕುಳಿ ಜಾತ್ರೋತ್ಸವ ಅಸಂಖ್ಯ ಭಕ್ತರ ಜೈಘೋಷಗಳ ಮಧ್ಯೆ ಶನಿವಾರ ಅದ್ದೂರಿಯಾಗಿ ಜರುಗಿತು. ಜಾತ್ರೆಯ ಮುಖ್ಯ ಅಕರ್ಷಣೆಯಾದ ದೇವರ ಸ್ತಂಭಾರೋಹಣ ಸಂಭ್ರಮದಿಂದ ನಡೆಯಿತು. ಈ ಕ್ಷಣ ಕಣ್ತುಂಬಿಕೊಳ್ಳಲು ಜನಸಾಗರವೇ ಸೇರಿತ್ತು.
ದೇವಸ್ಥಾನದ ಕೆಳಗಿನ ಮೈದಾನದಲ್ಲಿ ಐದು ಕಂಬಗಳನ್ನು ಹಾಕಲಾಗಿತ್ತು. ಬಾಜಾ-ಭಜಂತ್ರಿಯೊಂದಿಗೆ ಆಗಮಿಸಿದ ಸಂಸ್ಥಾನದ ವತನದಾರರು ದೇವಸ್ಥಾನದ ಮೇಲ್ಗಡೆಯಿಂದ ನಾಣ್ಯ ಚಿಮ್ಮುವ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು. ನಿರ್ದಿಷ್ಟಪಡಿಸಿದ ಗ್ರಾಮಸ್ಥರು ಕಂಬ ಹತ್ತಿದರು. ಕಂಬಕ್ಕೆ ಜಾರುವ ಲೋಳೆ ಪದಾರ್ಥ ಲೇಪಿಸಿದ್ದರಿಂದ ಸ್ತಂಭಾರೋಹಿಗಳು ಜಾರಿ ಜಾರಿ ಕೆಳಗೆ ಬೀಳುವ ದೃಶ್ಯ ನೋಡುಗರಿಗೆ ಮನರಂಜನೆ ನೀಡಿತು. ಕೊನೆಗೆ ಛಲ ಬಿಡದ ಯುವಕರು ಒಬ್ಬರ ಮೇಲೊಬ್ಬರು ಕಂಬ ಹತ್ತಿದರು. ನೆರೆದವರು ಸ್ತಂಭಾರೋಹಿಗಳನ್ನು ಹುರಿದುಂಬಿಸಿದರು. ಅಂತಿಮವಾಗಿ ಕಂಬ ಹತ್ತಿ ಕಂಬದ ತುದಿಯಲ್ಲಿ ಕಟ್ಟಿದ್ದ ಹಣ್ಣುಗಳ ಓಳುಗಳನ್ನು ಹರಿದಾಗ ನೆರದಿದ್ದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ನAತರ ಗೋಪಾಲಸ್ವಾಮಿ ಉತ್ಸವ ಮೂರ್ತಿ ಗರುಡನ ಪಲ್ಲಕ್ಕಿ ಮೆರವಣಿಗೆ ನಡೆಯಿತು. ವತನದಾರರಾದ ಗಣೇಶ ಜಾಹಾಗೀರದಾರ, ವೇಣುಮಾಧವ ನಾಯಕ, ರಾಜಾ ಚಿರಂಜೀವಿ ನಾಯಕ, ಪ್ರಮುಖರಾದ ಉಸ್ತಾದ್ ವಜಾಹತ್ ಹುಸೇನ್, ಅಜೀಂ ಬೆಳ್ಳಿಬೆತ್ತ, ಕೃಷ್ಣಾ ದರಬಾರಿ, ವೀರೇಶ ನಿಷ್ಠಿ ದೇಶಮುಖ, ಸೈಯದ್ ಐಮದ್ ಪಾಶಾ ಪಾಲ್ಕಿ ಗುರು, ನಿಂಗಣ್ಣ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net