ಕೋಳಿಸಾಕಣೆದಾರರ ಸಂಕಷ್ಟಕ್ಕೆ ಸರ್ಕಾರ ನೆರವಾಗಲಿ / NANDAGUDI

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಕೆ.ಸತ್ಯವಾರ ಗೇಟ್​ ಬಳಿ ಲಕ್ಷ$್ಮಣ್​ ಕೋಳಿಾಮ್​ರ್ನಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಕೋಳಿಸಾಕಣೆ ರೈತರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಗೌರವಾಧ್ಯಕ್ಷ ಕಣ್ಣೂರಹಳ್ಳಿ ಮಾರಪ್ಪ, ರಾಜ್ಯ ಪದಾಧಿಕಾರಿ ಶ್ರೀನಿವಾಸಪ್ಪ, ಹಲವು ಕೋಳಿ ಸಾಕಣೆದಾರರು ಇದ್ದರು.
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಕೆ.ಸತ್ಯವಾರ ಗೇಟ್​ ಬಳಿ ಲಕ್ಷ$್ಮಣ್​ ಕೋಳಿಾಮ್​ರ್ನಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ಕೋಳಿಸಾಕಣೆ ರೈತರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ ಗೌರವಾಧ್ಯಕ್ಷ ಕಣ್ಣೂರಹಳ್ಳಿ ಮಾರಪ್ಪ, ರಾಜ್ಯ ಪದಾಧಿಕಾರಿ ಶ್ರೀನಿವಾಸಪ್ಪ, ಹಲವು ಕೋಳಿ ಸಾಕಣೆದಾರರು ಇದ್ದರು.
Published on
ನಂದಗುಡಿ : ಕುಕ್ಕುಟೋದ್ಯಮ(ಕೋಳಿ ಸಾಕಣೆ) ಹಲವು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಶ್ರೀ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳತ್ತೇವೆ ಎಂದು ಅಖಿಲ ಕರ್ನಾಟಕ ಕೋಳಿಸಾಕಣೆ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಶೇಖರ್​ ಎಚ್ಚರಿಸಿದರು.
ಹೋಬಳಿಯ ಕೆ.ಸತ್ಯವಾರ ಗೇಟ್​ ಬಳಿ ಲಕ್ಷ$್ಮಣ್​ ಕೋಳಿಾಮ್​ರ್ನಲ್ಲಿ ಹಮ್ಮಿಕೊಂಡಿದ್ದ ಸಂಘದ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮಾತನಾಡಿದ ಅವರು, ದಿನೇದಿನೆ ಏರಿಕೆಯಾಗಿತ್ತಿರುವ ಕಚ್ಚಾಸರುಕುಗಳ ಬೆಲೆ, ವಾಣಿಜ್ಯ ವಿದ್ಯುತ್​ ದರ, ದುಬಾರಿ ಔಷಧ, ಇವೆಲ್ಲದರ ಮಧ್ಯೆ ಕಂಪನಿಗಳಿಂದ ಕೋಳಿ ಸಾಕಣೆಗೆ ಕಡಿಮೆ ದರ ನೀಡುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೋಳಿ ಪಾಲನೆಗೆ ಕೆ.ಜಿ 6.20 10 ರೂ. ನೀಡಲು ಸರ್ಕಾರ ಆದೇಶಿಸಿದ್ದು, 15 ದಿನಗಳೊಳಗೆ ಜಾರಿಮಾಡದಿದ್ದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್​ ರೆಡ್ಡಿ ಮಾತನಾಡಿ, ರೈತರು ಮತ್ತು ಕಂಪನಿಗಳ ಮಧ್ಯೆ ಒಪ್ಪಂದದ ಆಧಾರದ ಮೇಲೆ ರೈತರು ಕೋಳಿ ಸಾಕಣೆ ಮಾಡುತ್ತಿದ್ದು, 2021ರಲ್ಲಿ 6.20 ರೂ. ಅನ್ನು ಪ್ರತಿ ಕೆಜಿಗೆ ನೀಡುತ್ತಿದ್ದು, ಕಚ್ಚಾ ಸರಕುಗಳ ಬೆಲೆ ದುಪ್ಪಟ್ಟಾಗಿದ್ದರೂ 2026ರಲ್ಲಿ ಅದೇ ದರ ನೀಡುತ್ತಿವೆ. ಸರ್ಕಾರ ಮಧ್ಯ ಪ್ರವೇಶಿಸಿ ದರ ಹೆಚ್ಚಿಸಬೇಕು. ಅಲ್ಲದೆ ಸರ್ಕಾರ ರೈತರಿಗೆ ಹೈನುಗಾರಿಕೆ ಸೇರಿ ಇತರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್​ ಹಾಗೂ ಶೂನ್ಯಬಡ್ಡಿದರಲ್ಲಿ ಸಾಲ ಮತ್ತು ಹೊಸ ಕೋಳಿಾಮ್​ರ್ ನಿಮಾರ್ಣಕ್ಕೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಹೊಸಕೋಟೆ ತಾಲೂಕು ಅಧ್ಯಕ್ಷರಾಗಿ ನಂಜುಂಡಪ್ಪ, ಗೌರವಾಧ್ಯಕ್ಷರಾಗಿ ದಿವಾಕರ್​ ಮಂಜಣ್ಣ, ಉಪಾಧ್ಯಕ್ಷರಾಗಿ ಕೃಷ್ಣಪ್ಪ, ರಾಮೂರ್ತಿ, ಸೋಮಣ್ಣ, ಕಿಜರ್​ ಅಹಮದ್​, ಪ್ರಧಾನ ಕಾರ್ಯದರ್ಶಿ ಸೂರಿ ಯಾದವ್​, ಕಾರ್ಯದರ್ಶಿ ರಮೇಶ್​, ಚೇತನ್​, ಖಜಾಂಚಿ ನಾರಾಯಸ್ವಾಮಿ, ಸಲಹೆಗಾರರಾಗಿ ಮಾರಣ್ಣ, ಲೋಕೇಶ್​, ಲಕ್ಷ$್ಮಣ್​ ಸೇರಿ 5 ಹೋಬಳಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net