ರೈತರ ಸಮಗ್ರ ಕಲ್ಯಾಣಕ್ಕೆ ಸರ್ಕಾರ ಬದ್ಧ

ಮಳಖೇಡದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳ ಶೆಡ್​ ನಿರ್ಮಾಣ ಕಾಮಗಾರಿಗೆ ಕೆಡಿಪಿ ಸದಸ್ಯ ಅಲಿಆಗಾ ಜಾಗಿರದಾರ ಚಾಲನೆ ನೀಡಿದರು. ಬಸವರಾಜ ಪಾಟೀಲ್​, ರಾಜಶೇಖರ ಪುರಾಣಿಕ, ದಿನೇಶ ಸಣ್ಣೂರ, ನಾಗರಾಜ ನಂದೂರ ಇತರರಿದ್ದರು.
ಮಳಖೇಡದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರುಗಳ ಶೆಡ್​ ನಿರ್ಮಾಣ ಕಾಮಗಾರಿಗೆ ಕೆಡಿಪಿ ಸದಸ್ಯ ಅಲಿಆಗಾ ಜಾಗಿರದಾರ ಚಾಲನೆ ನೀಡಿದರು. ಬಸವರಾಜ ಪಾಟೀಲ್​, ರಾಜಶೇಖರ ಪುರಾಣಿಕ, ದಿನೇಶ ಸಣ್ಣೂರ, ನಾಗರಾಜ ನಂದೂರ ಇತರರಿದ್ದರು.
Published on
ಮಳಖೇಡ: ರೈತರ ಸಮಗ್ರ ಕಲ್ಯಾಣ ಹಾಗೂ ಜಾನುವಾರುಗಳ ಹಿತರಕ್ಷಣೆಗೆ ಕಾಂಗ್ರೆಸ್​ ಸರ್ಕಾರ ಬದ್ಧವಾಗಿದೆ ಎಂದು ಕೃಷಿಕ ಸಮಾಜದ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಹೇಳಿದರು. ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಾನುವಾರುಗಳ ಶೆಡ್​ ನಿರ್ಮಾಣ ಕಾಮಗಾರಿಗೆ ಚಾಲನೆ ಸಮಾರಂಭದಲ್ಲಿ ಮಾತನಾಡಿ, ರೈತರ ಧೀರ್ಕಾಲದ ಸಮಸ್ಯೆಗೆ ಸ್ಪಂದಿಸಿ ಸರ್ಕಾರ ಸುಸಜ್ಜಿತ ಶೆಡ್​ ನಿರ್ಮಾಣ ಮಾಡಲು ಮುಂದಾಗಿದೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಕೆಡಿಪಿ ಸದಸ್ಯ ಅಲಿಆಗಾ ಜಾಗಿರದಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ಕೌಡಲ್​, ಎಇಇ ರಾಕೇಶ ಡಿಗ್ಗಿಕರ್​, ಪ್ರಮುಖರಾದ ವೀರಭದ್ರಯ್ಯ, ರಾಜಶೇಖರ ಪುರಾಣಿಕ, ದಿನೇಶ ಸಣ್ಣೂರ, ನಾಗರಾಜ ನಂದೂರ, ದೇವೇಂದ್ರಪ್ಪ ಹಳಿಜೋಳ, ವೀರಣ್ಣ ಸಜ್ಜನಶೆಟ್ಟಿ, ಸುಂದರ ಮಂಗಾ, ಶರಣಯ್ಯ ಸ್ಥಾವರಮಠ, ಮಲ್ಲಪ್ಪ ಆರಬೋಳ, ಅಂಬರೀಷ ಗುಡಿ, ಅಮ್ಜದ್​ ಹುಸೇನ್​ ಖಾನ್​, ಶರಣಪ್ಪ ಗುಡಿ, ಫಯಾಜ್​ ಇನಾಮದಾರ, ಮಹ್ಮದ್​ ಸಾಧಿಕ್​, ಹನ್ನಾನ್​ಖಾನ್​, ಕೀರ್ತಿಕುಮಾರ ಮಾಳಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net