ಝಗಮಗಿಸಿದ ಜಾಮೀಯಾ ಮಸೀದಿ

 ಯಳಂದೂರು ಪಟ್ಟಣದಲ್ಲಿರುವ ಜಾಮೀಯಾ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.
ಯಳಂದೂರು ಪಟ್ಟಣದಲ್ಲಿರುವ ಜಾಮೀಯಾ ಮಸೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಈದ್ ಮಿಲಾದ್
  • ಜಾಮೀಯಾ ಮಸೀದಿ

ಯಳಂದೂರು:

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ಈದ್ ಮಿಲಾದ್

ನ್ನು ಬುಧವಾರ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಜಾಮೀಯಾ ಮಸೀದಿಯನ್ನು ಹಬ್ಬದ ನಿಮಿತ್ತ ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಸೀದಿ ಯಲ್ಲಿ ಚಿಕ್ಕಮಕ್ಕಳ ಗಾಯನ ಗಮನ ಸೆಳೆಯಿತು. ಪ್ರವಾದಿ ಮಹಮ್ಮದ್ ಪೈಗಂಬರರ 1501ರ ಜನುಮ ದಿನದ ಬಗ್ಗೆ ಧರ್ಮಗುರು ಅಬ್ರಾರ್ ಅಹಮ್ಮದ್ ಪ್ರವಚನ ನೀಡಿದರು.

ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲೂ ಸಡಗರದಿಂದ ಆಚರಿಸಲಾಯಿತು. ಮುಸ್ಲಿಮರ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಸೀದಿಯಲ್ಲಿ ವಿಶೇಷ ಧಾರ್ಮಿಕ ಪ್ರವಚನ ನೀಡಲಾಯಿತು. ಇದಲ್ಲದೆ ತಾಲೂಕಿನ ಯರಿಯೂರು, ಗುಂಬಳ್ಳಿ, ಯರಗಂಬಳ್ಳಿ, ನೆರೆದ ಇರಸವಾಡಿ, ಚಾಟೀಪುರ ಗ್ರಾಮಗಳಲ್ಲೂ ಈದ್ ಮಿಲಾದ್ ಆಚರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net