ಅನ್ನದಾತನಿಗೂ ತಟ್ಟಿದ ಇಂಧನ ಬಿಸಿ

ಬಸವನಬಾಗೇವಾಡಿ ಪಟ್ಟಣದಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ರೈತರು.
ಬಸವನಬಾಗೇವಾಡಿ ಪಟ್ಟಣದಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ರೈತರು.
Published on

ಪ್ರಮುಖ ಮುಖ್ಯಾಂಶಗಳು

  • ಡೀಸೆಲ್ ಸಿಗದೆ ರೈತರ ಪರದಾಟ
  • ಕೃಷಿ ಚಟುವಟಿಕೆಗೆ ಹಿನ್ನಡೆ ಭೀತಿ
ಬಸವನಬಾಗೇವಾಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ವಿದ್ಯ ಮಾನಗಳ ಬಿಸಿ ರೈತರ ಪಂಪ್‌ಸೆಟ್‌ಗೂ ತಟ್ಟಿದ್ದು, ಇಂಧನ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೂ ಹಿನ್ನಡೆಯುಂಟಾಗುತ್ತಿದೆ. ಮುಂಗಾರು ಆಗಮಿಸುತ್ತಿದ್ದು ಇನ್ನೇನು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ.
ಹೀಗಾಗಿ ನೆಲ ಹದಗೊಳಿಸಲು ರೈತರು ಸಜ್ಜಾಗಿದ್ದಾರೆ. ಟ್ರಾೃಕ್ಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಡೀಸೆಲ್, ಪೆಟ್ರೋಲ್ ಅಭಾವ ಕಾಡುತ್ತಿದೆ. ತಾಲೂಕಿನಾದ್ಯಂತ ಪೆಟ್ರೋಲ್ ಬಂಕ್‌ಗಳ ಮುಂದೆ ಹೆಚ್ಚಿನ ಪಾಳಿ ಕಂಡು ಬರುತ್ತಿದೆ.
ಸಣ್ಣ ರೈತರಲ್ಲಿ ಮಾತ್ರ ತಮ್ಮ ಕೃಷಿ ಚಟುವಟಿಕೆಗಳಿಗೆ ಎತ್ತುಗಳನ್ನು ಬಳಸುತ್ತಾರೆ. ಜತೆಗೆ ದೊಡ್ಡ ರೈತರು ಯಂತ್ರೋಪಕರಣಗಳನ್ನೇ ಅವಲಂಬಿಸಿದ್ದಾರೆ. ಮುಂಗಾರು ಮಳೆ ಉತ್ತಮವಾಗಿದ್ದರು, ಇಂಧನ ಸಮಸ್ಯೆಯಾದರೆ ಇನ್ನೊಂದೆಡೆ ರಸಗೊಬ್ಬರದ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ.
ತಾಲೂಕಿನಾದ್ಯಂತ ಹತ್ತಾರು ಪೆಟ್ರೋಲ್ ಬಂಕ್‌ಗಳಿದ್ದರೂ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಕಳೆದ
ಹತ್ತು ದಿನಗಳಿಂದ ಅಭಾವ ಸೃಷ್ಟಿ ಯಾಗಿದೆ. ಹೀಗಾಗಿ ರೈತರ ಗೋಳು ಹೇಳುತ್ತಿರದಂತಾಗಿದೆ. ಹಗಲು ರಾತ್ರಿ ಎನ್ನದೆ ಪೆಟ್ರೋಲ್ ಡೀಸೆಲ್‌ಗಾಗಿ ಬಂಕ್ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಸನ್ನಿವೇಶ ಎದುರಾಗಿದೆ.
"

ರೈತರು ಟ್ರ್ಯಾಕ್ಟರ್ ಉಪಕರಣಗಳ ಸಹಾಯದಿಂದ ಕೃಷಿ ಚಟುವಟಿಕೆ ಮಾಡುತ್ತಾರೆ. ಹೀಗಾಗಿ ಇಂಧನ ಅವಶ್ಯಕತೆ ಇದೆ. ಯುದ್ಧದ ನೆಪ ಹೇಳಿಕೊಂಡು ದರ ಹೆಚ್ಚಳ ಮಾಡುವುದರಿಂದ ರೈತರಿಗೆ ಭಾರಿ ಹೊಡೆತ ಬಿದ್ದಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೋಸ್ಕರ ಇಂಧನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು.

ಅರವಿಂದ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net