ಪ್ರಜಾಪ್ರಭುತ್ವದ ಮೂಲಾಧಾರ ಮತಪಟ್ಟಿ

ಶಹಾಪುರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ ಮಾತನಾಡಿದರು. ಆರ್​.ಚನ್ನಬಸ್ಸು, ಮರೆಪ್ಪ ಚಟ್ಟರಕರ್​ ಇತರರಿದ್ದರು.
ಶಹಾಪುರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚಿಂತಕ ಶಿವಸುಂದರ ಮಾತನಾಡಿದರು. ಆರ್​.ಚನ್ನಬಸ್ಸು, ಮರೆಪ್ಪ ಚಟ್ಟರಕರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಶಿವಸುಂದರ ಅಭಿಮತ
  • ಯಾದಗಿರಿಯಲ್ಲಿ ಪ್ರಭುತ್ವದ ಹುನ್ನಾರಗಳ ವಿರುದ್ಧ ಚರ್ಚೆ
ಶಹಾಪುರ : ಒಂದು ಮತ ಒಂದು ಮೌಲ್ಯ ಎಂಬ ಪ್ರಜಾತಾಂತ್ರಿಕ ತತ್ವವನ್ನು ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಪಾದಿಸಿದ್ದು, ಮತಪಟ್ಟಿಯೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂದು ಅಂಕಣಕಾರ, ಚಿಂತಕ ಶಿವಸುಂದರ ಹೇಳಿದರು.
ಪಟ್ಟಣದಲ್ಲಿ ದಲಿತ, ಪ್ರಗತಿಪರ, ರೈತ, ಅಲ್ಪಸಂಖ್ಯಾತ ಹಾಗೂ ಕಾರ್ಮಿಕ ಸಂಟನೆಗಳು ಮತ್ತು ಡಾ.ಅಂಬೇಡ್ಕರ್​ ಅವರ 135ನೇ ಜಯಂತಿ ಸಮಿತಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡ ಎಸ್​ಐಆರ್​ ಸಂಬಂಧಿತ ಪೌರತ್ವ ಪ್ರಶ್ನೆ ಹಾಗೂ ಪ್ರಭುತ್ವದ ಹುನ್ನಾರಗಳ ಕುರಿತು ವಿಸತ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಸ್​ಐಆರ್​ ನಿಶಸ ಜನರ ವಿರುದ್ಧ ನಡೆಯುತ್ತಿರುವ ದಾಳಿಯಂತಾಗಿದೆ. ವ್ಯವಸ್ಥಿತ ಮಿಷನ್​ ಆಗಿದೆ. 1947&49ರ ಸಂವಿಧಾನ ರಚನಾ ಕಾಲಟ್ಟದಲ್ಲಿ ಅಸಮಾನತೆಯ ವಿರುದ್ಧ ನಡೆದ ಮಹತ್ವದ ಕ್ರಾಂತಿಯ ಫಲವೇ ಭಾರತೀಯ ಸಂವಿಧಾನ ಎಂದರು.
ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ, ನಾಗರಿಕತ್ವದ ಪರಿಶೀಲನೆಯಾಗಿದೆ. ಸಾಮಾನ್ಯ ಜನರು ಸಾಬೀತುಪಡಿಸಲು ಕಷ್ಟವಾಗುವ ರೀತಿಯಲ್ಲಿ ದಾಖಲೆಗಳನ್ನು ಕೇಳಲಾಗುತ್ತಿದೆ. ಎನುಮರೇಷನ್​ ಪ್ರಕ್ರಿಯೆಯಲ್ಲಿ 11ವಿವಿಧ ದಾಖಲೆಗಳನ್ನು ಕೇಳಲಾಗುತ್ತಿದ್ದು, ಕೇಂದ್ರ ಸರ್ಕಾರದ ನೌಕರರ ದಾಖಲೆ, 1987ರ ಹಿಂದಿನ ಬ್ಯಾಂಕ್​, ಪೋಸ್ಟ್​ ಆಫೀಸ್​ ವ್ಯವಹಾರ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್​ಪೋರ್ಟ್​, ಆಸ್ತಿ ದಾಖಲೆಗಳು, ಶೈಣಿಕ ಪ್ರಮಾಣಪತ್ರಗಳು, ಎನ್​ಆರ್​ಸಿ, ಅರಣ್ಯ ಹಕ್ಕುಪತ್ರ, ವಾಸ ಹಾಗೂ ಜಾತಿ ಪ್ರಮಾಣಪತ್ರ ಸೇರಿ ಹಲವಾರು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಇವುಗಳನ್ನು ಒದಗಿಸುವುದು ವಿಶೇಷವಾಗಿ ಹಿಂದುಳಿದ ವರ್ಗದವರಿಗೆ ಕಷ್ಟಕರವಾಗಿದೆ ಎಂದರು. ಹೆಸರುಗಳಲ್ಲಿ ಅಲ್ಪ ವ್ಯತ್ಯಾಸಗಳಿದ್ದರೂ ಮತದಾರರನ್ನು ಪರಿಷ್ಕರಣೆಗೆ ಒಳಪಡಿಸುವುದು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಗುರುತಿಸಿ ಮತಪಟ್ಟಿಯಿಂದ ಹೊರಹಾಕುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು. ಇದು ಬದುಕಿರುವ ವ್ಯಕ್ತಿಯನ್ನು ಸಾಮಾಜಿಕವಾಗಿ ಅಳಿಸುವಂತಹ ಕ್ರಮವಾಗಿದೆ ಎಂದು ಅವರು ದೂರಿದರು.
2003ರಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ತಿದ್ದುಪಡಿ ಬಳಿಕ ನಾಗರಿಕತ್ವದ ಪ್ರಶ್ನೆ ಉದ್ಭವಿಸಿದ್ದು, ನೀವು ಈ ದೇಶದ ನಾಗರಿಕರೇ? ಎಂಬ ಪ್ರಶ್ನೆ ಎತ್ತುವ ಪ್ರಕ್ರಿಯೆ ಇದಾಗಿದೆ. ಸಂವಿಧಾನದ ಆರ್ಟಿಕಲ್​ 324 ಪ್ರಕಾರ ಸ್ವತಂತ್ರ ಸಂಸ್ಥೆಯಾಗಬೇಕಾದ ಚುನಾವಣಾ ಆಯೋಗ ಆಡಳಿತದ ಪ್ರಭಾವಕ್ಕೆ ಒಳಗಾಗಿದೆ. ಇದನ್ನು ಸಂಪೂರ್ಣವಾಗಿ ಹೈಜೆಕ್​ ಮಾಡಲಾಗಿದೆ ಆರೋಪಿಸಿದರು.
ಹಿರಿಯ ವಕೀಲ ಆರ್​.ಚನ್ನಬಸಪ್ಪ ವನದುರ್ಗ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ಎಸ್​ಐಆರ್​ ಪ್ರಕ್ರಿಯೆ ಮೂಲಕ ಎಸ್​ಸಿ, ಎಸ್​ಟಿ ಹಾಗೂ ಅಲ್ಪಸಂಖ್ಯಾತರನ್ನು ಮತಪಟ್ಟಿಯಿಂದ ಹೊರಹಾಕುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಅಧ್ಯತೆ ವಹಿಸಿದ್ದ ಮರೆಪ್ಪ ಚಟ್ಟೇಕರ್​ ಮಾತನಾಡಿದರು.ಗೋಷ್ಠಿಯಲ್ಲಿ ಗಿರೆಪ್ಪಗೌಡ ಬಾಣತಿಹಾಳ, ಮಲ್ಲಿಕಾರ್ಜುನ ಪೂಜಾರಿ, ಚನ್ನಪ್ಪ ಆನೇಗುಂದಿ, ನೀಲಕಂಠ ಬಡಿಗೇರ, ಶಿವಣ್ಣ ಇಜೇರಿ, ದವಲಸಾಬ್​ ನದಾಫ್​,ರಾಜು ಅಣಬಿ, ಸಣ್ಣನಿಂಗಣ್ಣ ನಾಯ್ಕೋಡಿ, ಸೈಯ್ಯದ್​ ಉದ್ದಿನ್​ ಖಾದ್ರಿ, ಶರೀಫ್​ ಬಿಳೆಯಲಿ, ನೀಲಮ್ಮ ಮಲ್ಲೆ ಸೇರಿದಂತೆ ಇತರರಿದ್ದರು.ಮಡಿವಾಳಪ್ಪ ಪಾಟೀಲ, ನಿಂಗಣ್ಣ ತಿಪ್ಪನಹಳ್ಳಿ ನಿರೂಪಿಸಿದರು,ಶರಣಬಸವ ಸ್ವಾಗತಿಸಿದರು, ವಿಶ್ವನಾಥ ನಾಟೆಕರ ವಂದಿಸಿದರು.
"

ಪ್ರಧಾನಿ ನರೇಂದ್ರ ಮೋದಿ ಅವರು ಹಿಟ್ಲರ್​ ಶೈಲಿಯ ಆಡಳಿತ ನಡೆಸುತ್ತಿದ್ದಾರೆ. ಸುಮಾರು 15 ಕೋಟಿ ಜನರು ನಾಗರಿಕತ್ವ ಕಳೆದುಕೊಳ್ಳುವ ಅಪಾಯವಿದೆ. ಎಸ್​ಐಆರ್​ ರಾಜಕೀಯ ಉದ್ದೇಶ ಹೊಂದಿದ ಪ್ರಕ್ರಿಯೆಯಾಗಿದೆ.

> ಶಿವಸುಂದರ ಚಿಂತಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net