ಮೌಢ್ಯಗಳನ್ನು ಕಿತ್ತೆಸೆದ ಮೊದಲ ಕವಯಿತ್ರಿ

ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜೇಶ್ವರಿ ಮೋಪಗಾರ, ಜಗದೀಶ ಪಟ್ಟಣಶೆಟ್ಟಿ  ಮತ್ತಿತರರಿದ್ದಾರೆ.
ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದತ್ತಿಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜೇಶ್ವರಿ ಮೋಪಗಾರ, ಜಗದೀಶ ಪಟ್ಟಣಶೆಟ್ಟಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಇಡಿ. ಕಾಲೇಜಿನ ಪ್ರಾಚಾರ್ಯೆ ಸುಧಾ ಸುಣಗಾರ ಅಭಿಪ್ರಾಯ
  • ದತ್ತಿಗೋಷ್ಠಿ ಉದ್ಘಾಟನೆ
ವಿಜಯಪುರ: ಹನ್ನೇರಡನೇ ಶತಮಾನದ ವಚನಗಾರ್ತಿ, ಸಮಾಜದ ಮೌಢ್ಯಗಳನ್ನು ಕಿತ್ತೆಸೆದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಹಾಗೂ ಕಷ್ಟದಲ್ಲೂ ಎಲ್ಲರಿಗೂ ಒಳಿತನ್ನೇ ಬಯಸಿದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಈರ್ವ ಮಹನೀಯ ಅಧ್ಯಾತ್ಮದ ಮಹಾನ್ ರತ್ನಗಳು ಎಂದು ಇಂಡಿಯ ಕರ್ನಾಟಕ ಟೀಚರ್ಸ್ ಬಿ.ಇಡಿ. ಕಾಲೇಜಿನ ಪ್ರಾಚಾರ್ಯೆ ಸುಧಾ ಸುಣಗಾರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ವಿವಿಧ ಮಹನೀಯರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಲಕ್ಷ್ಮೀ ಮೋರೆ ಮಾತನಾಡಿ, ಇಲ್ಲಿನ ಕಸಾಪ ಜಿಲ್ಲಾ ಘಟಕವು ಅತ್ಯಂತ ಅರ್ಥಪೂರ್ಣವಾಗಿ ದತ್ತಿಗೋಷ್ಠಿ ಹಮ್ಮಿಕೊಳ್ಳುತ್ತಿರುವ ಕಾರ್ಯ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಶಾಂತಲಾ ಪಾಟೀಲ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮಳ ಕುರಿತು ವಿಶೇಷ ಉಪನ್ಯಾಸ ನೀಡಿ, ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತೆಯಾಗಿ ಹಲವಾರು ಪವಾಡ ಮಾಡಿ ನಮ್ಮ ರಡ್ಡಿ ಕುಲಕ್ಕೆ ಎಂದಿಗೂ ಬಡತನ ಬಾರದಿರಲಿ ಎಂದು ಕೇಳಿಕೊಂಡ ಆಧ್ಯಾತ್ಮ ರತ್ನವಾಗಿ ಹೊರಹೊಮ್ಮಿದ್ದಾಳೆ ಎಂದರು.
ಶಿಕ್ಷಕಿ ಸುಖದೇವಿ ಅಲಬಾಳಮಠ ಶಿವಶರಣೆ ಅಕ್ಕಮಹಾದೇವಿಯ ಆಧ್ಯಾತ್ಮಿಕ ಜೀವನದ ಕುರಿತು ಉಪನ್ಯಾಸ ನೀಡಿ, ಅಕ್ಕಮಹಾದೇವಿ ಕೇವಲ ಒಬ್ಬ ಕವಯಿತ್ರಿಯಾಗದೇ ಮಹಿಳಾ ಸ್ವಾತಂತ್ರೃ ಮತ್ತು ಭಕ್ತಿಯ ಸಂಕೇತವಾಗಿ ಹೊರಹೊಮ್ಮಿದ ವೈರಾಗ್ಯದ ನಿಧಿ ಅಕ್ಕಮಹಾದೇವಿಯ ಆಧ್ಯಾತ್ಮಿಕ ಜೀವನದ ಅನೇಕ ನಿದರ್ಶನಗಳು ನಮ್ಮೆಲ್ಲರ ಬದುಕಿಗೆ ಪ್ರೇರಣೆ ನೀಡುವಲ್ಲಿ ಸಹಾಯಕವಾಗಿವೆ ಎಂದು ತಿಳಿಸಿದರು.
ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಶಿಕಲಾ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ರಾ.ಶಿ. ವಾಡೇದ ಅವರ ಮಿಂಚು ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ರಾಜೇಶ್ವರಿ ಮೋಪಗಾರ, ಜಗದೀಶ ಪಟ್ಟಣಶೆಟ್ಟಿ, ಶೈಲಶ್ರೀ ಪಟ್ಟಣಶೆಟ್ಟಿ, ರಾ.ಶಿ. ವಾಡೇದ, ಲತಾ ವಾಲಿಕಾರ, ಗಂಗಮ್ಮ ರಡ್ಡಿ, ಡಿ.ಬಿ. ಬಿರಾದಾರ, ಕೃಷ್ಣಾಜಿ ಕುಲಕರ್ಣಿ, ಯುವರಾಜ ಚೋಳಕೆ, ರವಿ ಕಿತ್ತೂರ, ಕೆ.ಎಸ್. ಹಣಮಾಣಿ, ವೈ.ಸಿ. ಮಯೂರ, ಶಾಂತು ರಾಣಾಗೋಳ, ಕಲ್ಪನಾ ಬಾಬಕರ, ಪ್ರಕಾಶ ಬಡಿಗೇರ, ಬಿ.ಎಂ. ಹೂಗಾರ, ಶಂಕ್ರಮ್ಮ ಹೂಗಾರ, ಅನಸೂಯಾ ಬಡಿಗೇರ, ಮತ್ತಿತರರಿದ್ದರು.
ಅನಸೂಯಾ ಬಡಿಗೇರ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net