ಸಿದ್ದಯ್ಯ ದೇವರ ಉತ್ಸವ ಸಂಪನ್ನ

The festival of Siddhaiah God is complete.
The festival of Siddhaiah God is complete.
Published on
ಬರಗೂರು: ಸಿದ್ದನಕುಂಟೆ ಸಿದ್ದಯ್ಯ ದೇವರಿಗೆ ದೊಡ್ಡಬಾಣಗೆರೆ ಕಾಡುಗೊಲ್ಲರ ಹಟ್ಟಿಯ ಅಣ್ಣತಮ್ಮಂದಿರು ಮತ್ತು ನೆಂಟರು ವಿಶೇಷ ಪೂಜಾ ಉತ್ಸವ ನಡೆಸಿದರು.
ದೊಡ್ಡಬಾಣಗೆರೆಯಿಂದ ರಂಗಪ್ಪಸ್ವಾಮಿ, ಮಾರಮ್ಮದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಂದು ಸಿದ್ದನಕುಂಟೆ ಸಿದ್ದಯ್ಯನ ಪೌಳಿಯ ಬಳಿ ಉತ್ಸವ ನಡೆಸಿದರು. ಸಾಮೂಹಿಕವಾಗಿ ಅನ್ನಸಂತರ್ಪಣೆ ನಡೆಯಿತು. ಮಣೇವು ಹಾಕಿದರು. ದಾಸಯ್ಯ ಮೋಟೀರಣ್ಣನವರ ಈರಣ್ಣ ಪಂಜಿನ ಸೇವೆ ಸಲ್ಲಿಸಿದರು.
ಕಾಡುಗೊಲ್ಲರ ಹಟ್ಟಿ ರಂಗಪ್ಪದೇವಾಲಯದ ಗುಡಿ ಪೂಜಾರಪ್ಪ, ದಾಸಯ್ಯ ಮೋಟೀರಣ್ಣನ ಮೊಮ್ಮಗ ಕುಮಾರ, ಈರಣ್ಣ, ಮಂಗಜ್ಜನವರ ಈರಣ್ಣ, ಕರಡಪ್ಪನವರ ರಂಗಣ್ಣ, ಚಿತ್ತಜ್ಜನವರ ಪೂಜಾರಪ್ಪ, ಕೋರಪ್ಪನವರ ಪೂಜಾರಪ್ಪ, ಕಾಳಜ್ಜನ ಮೊಮ್ಮಗ ಮಾಲಿಂಗಪ್ಪ,ಪುಟ್ಟರಂಗಮ್ಮಈರಣ್ಣ, ಹಾಗೂ ಕಾಡುಗೊಲ್ಲರ ಹಟ್ಟಿಯ ಸಮಸ್ತರು ಇದ್ದರು. ಸಿದ್ದಯ್ಯದೇವರ ಪೂಜಾರಿ ಮಂಜುನಾಥ್​, ಈರಣ್ಣ ಪೂಜಾದಿಗಳನ್ನು ನೆರವೇರಿಸಿದರು. ಉತ್ಸವ ಮೂರ್ತಿಯ ಕುಣಿತ ನಡೆಯಿತು. ಕೈವಾಡಸ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net