

ನಾಪೋಕ್ಲು: ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಇದೀಗ ಅರಳಿ ಪೇರೂರು ಬೆಟ್ಟಶ್ರೇಣಿಗಳ ಉದ್ದಕ್ಕೂ ವ್ಯಾಪಿಸಿದೆ.
ನೀಲಕುರುಂಜಿಯ ಸಸ್ಯ ಶಾಸ್ತ್ರೀಯ ಹೆಸರು ಸ್ಟ್ರೊಬಿಲಾಂಥಸ್ ಕುಂತಿಯಾನ. ಈಗಾಗಲೇ ಸಾಕಷ್ಟು ಹೂಗಳು ಅರಳಿದ್ದು, ಇದು ಅಕ್ಟೋಬರ್ ತಿಂಗಳವರೆಗೆ ಅರಳುತ್ತಿರುತ್ತವೆ. ಮತ್ತೆ ಹೂಗಳನ್ನು ಕಾಣಬೇಕಾದರೆ ಹನ್ನೆರಡು ವರ್ಷ ಕಾಯಬೇಕು. ಬೆಟ್ಟದ ಮೇಲ್ಭಾಗ ಬೇಸಿಗೆಯಲ್ಲಿ ಒಣಗಿರುತ್ತದೆ. ಮಳೆಗಾಲದಲ್ಲಿ ನೆಲತಂಪಾಗಿ ಗಿಡಗಳು ಬಲಿತು ಹೂಗಳು ಅರಳುತ್ತವೆ. ಹೂಗಳು ನೋಡಲು ಬಲು ಸುಂದರ.ಅಪರೂಪಕ್ಕೆ ಕಾಣಸಿಗುತ್ತವೆ. ಬೇಸಿಗೆಯಲ್ಲಿ ಬೆಂಕಿ ಬಿದ್ದರೂ ಗಿಡಗಳು ನಾಶವಾಗುವುದಿಲ್ಲ. ಈ ಗಿಡಗಳನ್ನು ಹಸುಗಳು ಸೇವನೆ ಮಾಡುವುದಿಲ್ಲ. ಮಣ್ಣಿನ ಸವಕಳಿಯನ್ನು ತಡೆಯಲು ಗಿಡಗಳು ಸಹಕಾರಿಯಾಗಿದೆ.
ಆದರೆ ವಿವಿಧ ಕಾರಣಗಳಿಂದಾಗಿ ಈ ಪ್ರದೇಶಗಳಿಗೆ ಪ್ರವಾಸಿಗರು ಸೇರಿದಂತೆ ಇನ್ನಿತರರು ತೆರಳದಂತೆ ಅರಣ್ಯ ಇಲಾಖೆ ನಿರ್ಬಂಧ ಏರಿದೆ.