ಏಕಾಂತದ ಇಷ್ಟಲಿಂಗ ಪೂಜೆ ಭಕ್ತರಿಗಾಗಿ ಲೋಕಾಂತ; ಕಾಶೀ ಜಗದ್ಗುರುಗಳ ಆಶೀರ್ವಚನ

ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದಲ್ಲಿ ಕಾಶೀ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಡಾ.ಸಿ.ಸೋಮಶೇಖರ ಅವರನ್ನು ಸನ್ಮಾನಿಸಿದರು. ಶಿವಗಂಗೆ, ದಹಿವಡಕರ್ ಶ್ರೀಗಳು, ಬಿ.ಎಸ್.ಪರಮಶಿವಯ್ಯ ಇದ್ದರು.
ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭದಲ್ಲಿ ಕಾಶೀ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರು ಡಾ.ಸಿ.ಸೋಮಶೇಖರ ಅವರನ್ನು ಸನ್ಮಾನಿಸಿದರು. ಶಿವಗಂಗೆ, ದಹಿವಡಕರ್ ಶ್ರೀಗಳು, ಬಿ.ಎಸ್.ಪರಮಶಿವಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಏಕಾಂತದ ಇಷ್ಟಲಿಂಗ ಪೂಜೆ ಭಕ್ತರಿಗಾಗಿ ಲೋಕಾಂತ
  • ಕಾಶೀ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಭಗವತ್ಪಾದರ ಆಶೀರ್ವಚನ
  • ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ

ಬೆಂಗಳೂರು:ವೀರಶೈವ ಲಿಂಗಾಯತಸಮುದಾಯದ ಆರಾಧ್ಯ ದೈವವಾಗಿರುವಇಷ್ಟಲಿಂಗ ಪೂಜೆಯನ್ನು ಸಾಮಾನ್ಯವಾಗಿಏಕಾಂತವಾಗಿ ಕುಳಿತು ಮಾಡುವಂತದ್ದು.ಭಕ್ತರ ಸಂಸ್ಕಾರಕ್ಕಾಗಿಜಗದ್ಗುರು ಪಂಚಾಚಾರ್ಯರು ಇದನ್ನುಲೋಕಾಂತಗೊಳಿಸಿದ್ದಾರೆಎಂದುಕಾಶೀ ಜಗದ್ಗುರು ಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಶಿವಾಚಾರ್ಯಭಗವತ್ಪಾದರು ಹೇಳಿದ್ದಾರೆ.

ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀ ಜಗದ್ಗುರು ವಿಶ್ವಾರಾಧ್ಯಜನಕಲ್ಯಾಣ ಪ್ರತಿಷ್ಠಾನ ಹಮ್ಮಿಕೊಂಡಿದ್ದಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆನೆರವೇರಿಸಿ ಆಶೀರ್ವಚನ ನೀಡಿದರು.

ರಂಭಾಪುರಿಪೀಠದ ಲಿಂಗೈಕ್ಯ ಜಗದ್ಗುರುವೀರಗಂಗಾಧರ ಭಗವತ್ಪಾದರು ಮೊಟ್ಟಮೊದಲಬಾರಿಗೆ ಇಷ್ಟಲಿಂಗ ಪೂಜೆಯನ್ನುಬಹಿರಂಗವಾಗಿ ಆರಂಭಿಸಿದರು.ಭಕ್ತರಿಗೆಇಷ್ಟಲಿಂಗ ಪೂಜೆಯ ಪ್ರಭಾವ ಮತ್ತುಧರ್ಮಸಂಸ್ಕಾರಕ್ಕಾಗಿ ಆರಂಭಿಸಿದಬಹಿರಂಗ ಪೂಜೆಯನ್ನು ಸೊಲ್ಲಾಪುರದಹೊಟಗಿ ಮಠದ ಶ್ರೀಯೋಗಿರಾಜೇಂದ್ರಶಿವಾಚಾರ್ಯ ಸ್ವಾಮಿಗಳು ಜಗದ್ಗುರುಗಳಅಪ್ಪಣೆ ಪಡೆದು ಸಂಗೀತವನ್ನುಸಂಯೋಜಿಸಿ ರೂಢಿಗೆ ತಂದರು.ಅದನ್ನು ಸದ್ಯದಕೇದಾರ ಜಗದ್ಗುರುಗಳು ಹಾಗೂ ಕಾಶೀಜಗದ್ಗುರುಗಳು ಮುಂದುವರೆಸಿದ್ದಾರೆ.ವೀರಶೈವರುಇಷ್ಟಲಿಂಗ ಪೂಜೆಯನ್ನು ನಿತ್ಯದಲ್ಲಿತಪ್ಪದೇ ಮಾಡಬೇಕು.ಇಷ್ಟಲಿಂಗಪೂಜೆಯಿಂದ ವ್ಯಕ್ತಿಯ ಆತ್ಮವಿಶ್ವಾಸವೃದ್ಧಿಯಾಗುವುದರ ಜೊತೆಗೆ ಉತ್ತಮಆರೋಗ್ಯವನ್ನು ಪಡೆದುಕೊಳ್ಳಲುಸಹಕಾರಿಯಾಗುತ್ತದೆ.‘ಇಷ್ಟಲಿಂಗಂಇದಂ ಸಾಕ್ಷಾತ್ ಅನಿಷ್ಟ ಪರಿಹಾರಕಂ’ಎಂದು ಜಗದ್ಗುರುಗಳು ತಿಳಿಸಿದರು.

ಸಂಜೆನಡೆದ ಶ್ರೀಸಿದ್ಧಾಂತ ಶಿಖಾಮಣಿಆಧ್ಯಾತ್ಮಿಕ ಆಶೀರ್ವಚನ ಸಮಾರಂಭದಲ್ಲಿಶಿವಗಂಗೆಯ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳುಪ್ರಾಸ್ತಾವಿಕ ಪ್ರವಚನ ನೀಡಿದರು.

ವಿಭೂತಿಪುರಮಠದ ಡಾ. ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು,ಬಾರ್ಸಿ ದಹಿವಡಕರ್ಮಠದ ಶ್ರೀಗುರುಸಿದ್ದ ಮಣಿಕಂಠಶಿವಾಚಾರ್ಯ ಸ್ವಾಮಿಗಳು,ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಅಧ್ಯಕ್ಷಡಾ.ಸಿ.ಸೋಮಶೇಖರ್,ಕರ್ನಾಟಕ ವೀರಶೈವವಿದ್ಯಾಭಿವೃದ್ಧಿ ಸಂಸ್ಥೆಯಅಧ್ಯಕ್ಷ ಬಿ.ಎಸ್.ಪರಮಶಿವಯ್ಯ,ಪ್ರತಿಷ್ಠಾನದಡಾ.ಸಿ.ಯು.ಉಮಾದೇವಿಉಮಾಶಂಕರ್,ಪ್ರಣವ್ ಜಯಲಿಂಗಪ್ಪಮತ್ತಿತರರಿದ್ದರು.

ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಸಂಜೆ 6 ಗಂಟೆಗೆ ಪ್ರತಿಷ್ಠಿತ ಪಂಚಾಚಾರ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯ ವಹಿಸಲಿದ್ದು, ಪ್ರಶಸ್ತಿ ಪುರಸ್ಕೃತ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net