ಎಲ್ಲಮ್ಮದೇವಿ ಜಾತ್ರೆ ಪ್ರಯುಕ್ತ ಬೆಳಗ್ಗೆ ಬ್ಯಾಲದಕೆರೆ ಕೆಂಪಮ್ಮ, ದೂತರಾ ಹಾಗೂ ಶ್ರೀದುರ್ಗಪರಮೇಶ್ವರಿ ದೇವರ ಆಗಮನದೊಂದಿಗೆ ಜಾತ್ರೆ ಆರಂಭವಾಯಿತು, ರಾತ್ರಿ 9ಕ್ಕೆ ಬನ್ನಿಮರದ ಬಳಿ ಕೊನೆಕಾರರ ಸಂಘದವರಿಂದ ನಡೆದ ಪಾನಕ ಫಲಹಾರ ಸೇವೆಯೊಂದಿಗೆ ಹಾಗಲವಾಡಿ ಗೇಟ್ಬಳಿ ಗಂಗಸ್ನಾನ ನೆರವೇರಿತು. ಎಲ್ಲಮ್ಮದೇವಿಯ ಕಳಸವು ನಡೆಮುಡಿಯೊಂದಿಗೆ ಅಡ್ಲಿಕೆ, ಕೀಲಿನಮ್ಮ, ಪರಶುರಾಮ, ಶ್ರೀ ಮಾವುರದ ಎಲ್ಲಮ್ಮ, ಕೆಂಪಮ್ಮ, ದುರ್ಗಮ್ಮ ದೇವರು ದೂತರಾಯನ ಕುಣಿತದೊಂದಿಗೆ ದೇವರನ್ನು ಹೊತ್ತ ಭಕ್ತರು ಕೆಂಡ ಹಾಯುವ ಮೂಲಕ ತಮ್ಮ ಹರಕೆ ತೀರಿಸಿದರು.