ಶ್ರೀ ಮಧ್ವಾಚಾರ್ಯರು ಶ್ರೀ ಪಲಿಮಾರು ಮಠದ ಮೂಲಯತಿ ಶ್ರೀ ಹೃಷಿಕೇಶ ತೀರ್ಥರಿಗೆ ಲಕ್ಷ್ಮಣಸೀತಾ ಸಮೇತ ಕೋದಂಡರಾಮ ದೇವರನ್ನು ನೀಡಿದರು. ಅದಮಾರು ಮಠದ ನರಸಿಂಹ ತೀರ್ಥರಿಗೆ ಚತುರ್ಭಜ ಕಾಳಿಯಮರ್ದನಕೃಷ್ಣ, ಕೃಷ್ಣಾಪುರ ಮಠದ ಜನಾರ್ದನ ತೀರ್ಥರಿಗೆ ದ್ವಿಭುಜ ಕಾಳಿಯಮರ್ದನಕೃಷ್ಣ, ಪುತ್ತಿಗೆ ಮಠದ ಶ್ರೀ ಉಪೇಂದ್ರ ತೀರ್ಥರಿಗೆ ರುಕ್ಮಿಣಿ ಸತ್ಯಭಾಮಾ ಸಮೇತ ವಿಠ್ಠಲದೇವರು, ಶೀರೂರು ಮಠದ ಶ್ರೀ ವಾಮನ ತೀರ್ಥರಿಗೆ ಶ್ರೀಭೂ ಸಹಿತ ವಿಠ್ಠಲದೇವರು, ಸೋದೆ ಮಠದ ಶ್ರೀ ವಿಷ್ಣು ತೀರ್ಥರಿಗೆ ಭೂವರಾಹದೇವರು, ಕಾಣಿಯೂರು ಮಠದ ಶ್ರೀರಾಮ ತೀರ್ಥರಿಗೆ ಯೋಗನರಸಿಂಹ ದೇವರು, ಪೇಜಾವರ ಮಠದ ಅಧೋಕ್ಷಜ ತೀರ್ಥರಿಗೆ ಶ್ರೀಭೂಸಹಿತ ವಿಠ್ಠಲದೇವರನ್ನು ನೀಡಿದ್ದಾರೆ.