ನಾಗರಿಕ ಹಕ್ಕು ಪ್ರಶ್ನಿಸುವ ಅಧಿಕಾರ ಚುನಾವಣೆ ಆಯೋಗಕ್ಕೆ ಇಲ್ಲ Election Commission

ನಾಗರಿಕ ಹಕ್ಕು ಪ್ರಶ್ನಿಸುವ ಅಧಿಕಾರ ಚುನಾವಣೆ ಆಯೋಗಕ್ಕೆ ಇಲ್ಲ Election Commission
ನಾಗರಿಕ ಹಕ್ಕು ಪ್ರಶ್ನಿಸುವ ಅಧಿಕಾರ ಚುನಾವಣೆ ಆಯೋಗಕ್ಕೆ ಇಲ್ಲ Election Commission
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ಅಳಿವು, ಉಳಿವು ಸಂರಕ್ಷಣೆ ಕಾರ್ಯಾಗಾರದಲ್ಲಿ ಸಾಹಿತಿ,ಹಿರಿಯ ಪತ್ರಕರ್ತ ಶಿವಸುಂದರ್​ ಅಭಿಮತ
ಗುಡಿಬಂಡೆ: ಪ್ರಜೆಗಳ ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವಂತಹ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಶಿವಸುಂದರ್​ ಅಭಿಪ್ರಾಯ ವ್ಯಕ್ತಪಡಿಸಿದರು. Election Commission
ತಾಲೂಕಿನ ಬೀಚಗಾನಹಳ್ಳಿ ಸಮುದಾಯ ಭವನದಲ್ಲಿ ಶುಕ್ರವಾರ ಸಂವಿಧಾನ ಸಂರಕ್ಷಣಾ ಪಡೆ- ಆಯೋಜಿಸಿದ್ದ ಸಂವಿಧಾನ ಅಳಿವು, ಉಳಿವು ಸಂರಕ್ಷಣೆ ಕಾರ್ಯಾಗಾರ, ಚಿಂತನ ಮಂಥನದಲ್ಲಿ ಮಾತನಾಡಿ, ಭಾರತದ ಮತದಾರರ ಪಟ್ಟಿಯನ್ನು ಇಂದಿನ ಚುನಾವಣಾ ಆಯೋಗ ಪರಿಷ್ಕರಣೆಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಎಂದರು.
ಚುನಾವಣಾ ಆಯೋಗ ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಸಾಮಾನ್ಯ. ಆದರೆ, ಜನರಿಗೆ ಅರ್ಥವಾಗದ ರೀತಿಯಲ್ಲಿ ಪರಿಷ್ಕರಣೆ ಮಾಡುವುದನ್ನು ದೇಶದ ಜನ ಮನವರಿಕೆ ಮಾಡಿಕೊಳ್ಳಬೇಕು. ದೇಶದ ಪ್ರವಾಸಿಗರ ಮೇಲೆ ಕೇಂದ್ರ ಸರ್ಕಾರ ಅನುಮಾನದಿಂದ ನೋಡುತ್ತಿದೆ. ಇವರು ದೇಶ ವಾಸಿಗಳೇ ಅಲ್ಲ ಎನ್ನುವುದಾದರೆದೇಶದ 140 ಕೋಟಿ ಜನರ ವಿದೇಶಿಗರು ಎಂದು ಅವರ ಮೇಲೆ ಎಫ್​ಐಆರ್​ಅನ್ನು ಹಾಕಿಲ್ಲ, ದೇಶ ವಾಸಿಗಳು ಎಂದು ಒಪ್ಪಿಕೊಳ್ಳಿ ಎಂದರು.
ಹಿಂದಿನ ಕಾಲದಲ್ಲಿ ರಾಜರು ರಾಣಿಯ ಹೊಟ್ಟೆಯಲ್ಲಿ ಹುಟ್ಟುತ್ತಿದ್ದರು. ಈಗ ರಾಜ ಮತದಾರರ ಪಟ್ಟಿಯಲ್ಲಿ ಹುಟ್ಚುತ್ತಿದ್ದಾನೆ. ಇದು ಈ ದೇಶಕ್ಕೆ ಸಂವಿಧಾನ ಜಾರಿಯಾದಾಗಿನಿಂದ ಮಾತ್ರ. ಈ ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕನು ಸಹ ಘನತೆಯಿಂದ ಬದುಕುವಂತಹ ಹಕ್ಕನ್ನು ನೀಡದೇ,18 ವರ್ಷ ತುಂಬಿದಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ನೀಡುವುದು ಚುನಾವಣೆ ಆಯೋಗದ ಕರ್ತವ್ಯವೂ ಆಗಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಹ ಮತದಾನದ ಹಕ್ಕನ್ನು ನೀಡಲು ಪ್ರತಿಪಾದಿಸಿದ್ದು ಡಾ .ಬಿ ಅಂಬೇಡ್ಕರ್​ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಮತದಾರರ ಪಟ್ಚಿ ಪರಿಫ್ಕಿರಣೆಗೆ ಮನೆಗಳಿಗೆ ಬಿಎಲ್​ಒಬಂದು ಅರ್ಜಿನೀಡುತ್ತಾರೆ.ಆ ಅರ್ಜಿಯನ್ನು ಭರ್ತಿ ಮಾಡಿ ಚುನಾವಣೆ ಕಚೇರಿಗೆ ತಲುಪಿಸಬೇಕು, ಇಲ್ಲವಾದರೆ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ.ಈ ಮೊದಲು ಬಿಎಲ್​ಒಗಳು ಮನೆ ಬಅಗಿಲಿಗೆ ಬಂದು ಹೆಸರನ್ನು ಸೇರ್ಪಡೆ ಮಾಡುವುದು, ತೆಗೆದು ಹಾಕುವುದನ್ನು ಅವರೇ ಮಾಡುತ್ತಿದ್ದರು. ಇದು ತುಂಬಾ ಅಪಾಯದ ಹೆಜ್ಜೆಯಾಗಿದ್ದು. ಜನರು ಎಚ್ಚರಿಕೆ ವಹಿಸಬೇಕು ಎಂದರು.
ಈ ವೇಳೆ ಕೆಡಿಪಿ ಸದಸ್ಯ ಎಚ್​.ಪಿ.ಲಕ್ಷ್ಮೀನಾರಾಯಣ , ಮಂಜುನಾಥ್​ ರೆಡ್ಡಿ, ಸೌಭಾಗ್ಯಮ್ಮ, ಸೈಯದ್​ ಬಾಷಾ,ರಿಜ್ವಾನ್​, ಜೀವಿಕಾ ನಾರಾಯಣಸ್ವಾಮಿ, ಚನ್ನರಾಯಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net