ಗುರ್ಲಾಪುರ: ಗುರ್ಲಾಪುರ ಕ್ರಾಸ್ನಲ್ಲಿ ರಾಜ್ಯ ರೆತಸಂ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಕಬ್ಬಿಗೆ ವೈಜ್ಞಾನಿಕ ದರ ನಿಗದಿಪಡಿಸುವಂತೆ ಹೋರಾಟ ನಡೆಸಿದ ಎಲ್ಲ ರೆತರಿಗೆ ಊಟದ ವ್ಯವಸ್ಥೆ ಮಾಡಿದ ಗ್ರಾಮಸ್ಥರ ಸೇವೆ ಮರೆಯಲಾಗದು. ಹೋರಾಟದ ಹತ್ತು ದಿನ ಲ ಲ ರೈತರಿಗೆ ಕಡಿಮೆಯಾಗದಂತೆ ಬುತ್ತಿ ಹೊತ್ತು ತಂದ ತಾಯಂದಿರೇ ಹೋರಾಟದ ಪ್ರೇರಣೆ ಎಂದು ರಾಜ್ಯ ರೆತಸಂ ಹಾಗೂ ಹಸಿರುಸೇನೆ ಅಧ್ಯ ಚೂನಪ್ಪ ಪೂಜೇರಿ ಹೇಳಿದರು. ಗ್ರಾಮದ ಮಲ್ಲಿಕಾರ್ಜುನ ರಂಗ ಮಂಟಪದಲ್ಲಿ ಕಬ್ಬು ಬೆಳೆಗಾರರ ಹೋರಾಟದ ರೂವಾರಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರೆತರ ಹಲವಾರು ಜಲ್ವಂತ ಸಮಸ್ಯೆ ಬಗ್ಗೆ ಹೋರಾಟದ ಮೂಲಕ ಬೆಳಕು ಚೆಲ್ಲಲಿದ್ದೇವೆ ಎಂದರು. ರೆತಸಂದ ಗೌರವಾಧ್ಯ ಶಶಿಕಾಂತ ಗುರೂಜಿ ಮಾತನಾಡಿ, ಮುಂಬರುವ ದಿನಗಳಲ್ಲಿ ಗುರ್ಲಾಪುರದಿಂದಲೇ ಹೋರಾಟದ ಮೂಲಕ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ಪಡದೇ ಪಡೆಯುತ್ತೇವೆ ಎಂದರು. ವೀರೇಶ್ವರ ಸ್ವಾಮೀಜಿ, ಶ್ರೀಶೆಲ ಅಂಗಡಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪಕ್ಕಾಂಡಿ, ಮಲ್ಲಪ್ಪ ಅಂಗಡಿ, ಈರಣ್ಣ ಸಸಾಲಟ್ಟಿ, ಈರಯ್ಯ ಹಿರೇಮಠ, ಶಿವರುದ್ರಯ್ಯ ಹಿರೇಮಠ, ಎಸ್.ಡಿ. ಹೀರೇಮಠ, ಪತ್ರಯ್ಯ ಹಿರೇಮಠ, ಕೆ.ಆರ್.ದೇವರಮನಿ, ಎಂ.ಎಂ.ಮುಗಳಖೋಡ, ಶ್ರೀಶೆಲ ಮುಗಳಖೋಡ, ಮಹಾದೇವ ಕುಲಗೋಡ, ಯಲ್ಲಪ್ಪ ಸುಳ್ಳನ್ನವರ, ಮಲ್ಲಪ್ಪ ಮುಗಳಖೋಡ, ದುಂಡಪ್ಪ ಮುಗಳಖೋಡ ಇತರರಿದ್ದರು.