ಪ್ರಧಾನಿ ರಾಜೀನಾಮೆ ನೀಡುವ ದಿನ ಸನಿಹ

ಸಕಲೇಶಪುರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ತಮಿಳುನಾಡು ಮೈಲದುತ್ತೂರಿ ಕ್ಷೇತ್ರದ ಸಂಸದೆ ಆರ್. ಸುಧಾ ಮಾತನಾಡಿದರು. ಮುರುಳಿಮೋಹನ್, ಲಕ್ಷ್ಮಣ್,  ವಿಜಯಕುಮಾರ್, ಬೈರಮುಡಿಚಂದ್ರು,ಅನ್ನಪೂರ್ಣ ಇದ್ದರು.
ಸಕಲೇಶಪುರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ತಮಿಳುನಾಡು ಮೈಲದುತ್ತೂರಿ ಕ್ಷೇತ್ರದ ಸಂಸದೆ ಆರ್. ಸುಧಾ ಮಾತನಾಡಿದರು. ಮುರುಳಿಮೋಹನ್, ಲಕ್ಷ್ಮಣ್, ವಿಜಯಕುಮಾರ್, ಬೈರಮುಡಿಚಂದ್ರು,ಅನ್ನಪೂರ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಮೈಲದುತ್ತೂರಿ ಕ್ಷೇತ್ರದ ಸಂಸದೆ ಆರ್.ಸುಧಾ
  • ರೈತ ಭವನ

ಸಕಲೇಶಪುರ:

ಕೇಂದ್ರ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಿಜ ಬಣ್ಣ ಈಗ ಬಯಲಾಗುತ್ತಿದೆ ಎಂದು ತಮಿಳುನಾಡಿನ ಮೈಲದುತ್ತೂರಿ ಕ್ಷೇತ್ರದ ಸಂಸದೆ ಆರ್.ಸುಧಾ ಹೇಳಿದರು.

ಪಟ್ಟಣದ ರೈತ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂಘಟನ್ ಸೃಜನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀಟ್ ಆಕ್ರಮಕ್ಕೆ ಈಗಾಗಲೇ ಒಂದು ತಲೆದಂಡವಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮತ್ತಷ್ಟು ಅಕ್ರಮಗಳನ್ನು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬಯಲಿಗೆ ಎಳೆಯಲಿದೆ. ಆ ಮೂಲಕ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ದಿನಗಳು ಸನಿಹದಲ್ಲಿವೆ ಎಂದರು.
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಎಐಸಿಸಿ ಸೂಚಿಸಿದೆ. ಇದರ ಅಂಗವಾಗಿ ಪಕ್ಷದ ಪಧಾಧಿಕಾರಿಗಳು ಹಾಗೂ ಪಕ್ಷದಿಂದ ರಾಜಕೀಯ ಸ್ಥಾನಮಾನ ಪಡೆದಿರುವ ವ್ಯಕ್ತಿಗಳಿಂದ ಮೊದಲಿಗೆ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಹೆಸರು ಸೂಚನೆಗೆ ಈ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯಿಂದ ಆರು ಜನರ ಹೆಸರನ್ನು ಹೈಕಮಾಂಡಗೆ ಕಳುಹಿಸಿಕೊಡುವ ಹೊಣೆ ನಮ್ಮ ಮೇಲಿದ್ದು ಈ ಅಭಿಯಾನದಲ್ಲಿ ಎಲ್ಲರೂ ಬಾಗವಹಿಸುವ ಮೂಲಕ ಪಕ್ಷ ಸಂಘಟನೆಗೆ ಸಹಕರಿಸ ಬೇಕು ಎಂದರು.
ಪಕ್ಷದ ಮುಖಂಡ ಮುರುಳಿಮೋಹನ್ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಮನಸ್ತಾಪ ಸಹಜ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡುವ ಮೂಲಕ ಹೆಚ್ಚಿನ ಜನರು ಆಯ್ಕೆಯಾಗುವಂತೆ ಕೆಲಸ ಮಾಡಬೇಕಿದೆ ಎಂದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿಚಂದ್ರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನ್ನಪೂರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net