ಸಂವಿಧಾನದಿಂದಲೇ ದೇಶ ಒಂದಾಗಿರುವುದು

  ಸಕಲೇಶಪುರ ತಾಪಂನಲ್ಲಿ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಸತ್ಯೇಂದ್ರಕುಮಾರ್ ಇತರರು ಇದ್ದರು.
ಸಕಲೇಶಪುರ ತಾಪಂನಲ್ಲಿ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಸತ್ಯೇಂದ್ರಕುಮಾರ್ ಇತರರು ಇದ್ದರು.
Published on
ಸಕಲೇಶಪುರ: ಸಂವಿಧಾನ ಗಟ್ಟಿ ಇದ್ದಷ್ಟೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲವಾಗಿರಲಿದೆ ಎಂದು ಸಿಮೆಂಟ್ ಮಂಜು ಹೇಳಿದರು.

ಮಂಗಳವಾರ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಪಂಚದಲ್ಲೆ ಭಾರತೀಯ ಸಂವಿಧಾನ ಅತ್ಯಂತ ಶ್ರೇಷ್ಠವೆಂದು ಕರೆಸಿಕೊಳ್ಳುತ್ತಿದೆ. ದೇಶದ ಹಲವು ಸಂಸ್ಕೃತಿ, ಆಚಾರ, ವಿಚಾರಗಳನ್ನು ಒಂದುಗೂಡಿಸಿರುವುದು ಡಾ.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಎಂದರು.

ಜಗತ್ತಿನಲ್ಲಿ ಒಂದೇ ಸಂಸ್ಕೃತಿ, ಆಚಾರ ವಿಚಾರ ಹೊಂದಿರುವ ರಾಷ್ಟ್ರಗಳು ಇಂದಿಗೂ ಪ್ರಜಾಪ್ರಭುತ್ವ ಆಳವಡಿಸಿಕೊಳ್ಳಲಾಗದೆ ತೊಳಲಾಡುತ್ತಿವೆ. ಆದರೆ ಭಾರತದಲ್ಲಿ ಮಾತ್ರ ಪ್ರಜಾತಂತ್ರ ಗಟ್ಟಿಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಪ್ರಾಂಶುಪಾಲ್ ಸತ್ಯೇಂದ್ರಕುಮಾರ್, ವಿಶ್ವಪ್ರಜಾಪ್ರಭುತ್ವ ದಿನವನ್ನು ಪ್ರಪಂಚದಾದ್ಯಂತ. 2007ರಿಂದ ಆಚರಿಸಲಾಗುತ್ತಿದೆ. ಬಾರತದಲ್ಲಿ 2021ರಿಂದ ಆಚರಿಸಲಾಗುತ್ತಿದೆ. ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಕೆಲಸ ಮಾಡುವ ವಿಧಾನ ತಿಳಿಸುವುದು ಆಚರಣೆಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಆವರಣದಲ್ಲಿ ಇರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಶಾಸಕರು ಮಾಲಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net