ಕಾಂಗ್ರೆಸ್‌ನಿಂದಷ್ಟೇ ದೇಶಕ್ಕೆ ಸ್ವಾತಂತ್ರ ಸಿಕ್ಕಿಲ್ಲ

ಹೂವಿನಹಡಗಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬಳ್ಳಾರಿ ಜಿಲ್ಲೆಯ ಸ್ವಾತಂತ್ರೃ ಹೋರಾಟಗಾರರು ಮತ್ತು ಏಕೀಕರಣ ಚಳವಳಿ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ, ಪ್ರಾಚಾರ್ಯ ಎಂ.ವಿಜಯಕುಮಾರ, ಪ್ರಾಧ್ಯಾಪಕ ಡಾ.ಭೀಮಪ್ಪ ಇತರರಿದ್ದರು.

Published on
ಹೂವಿನಹಡಗಲಿ: ಸತ್ಯ ಮತ್ತು ಅಹಿಂಸೆ ಮಾರ್ಗದಿಂದ ಮಾತ್ರ ದೇಶಕ್ಕೆ independence ಸಿಕ್ಕಿಲ್ಲ. ಕೆಲವು ಕ್ರಾಂತಿಕಾರರ ಹೋರಾಟವೂ ಪ್ರಮುಖ ಪಾತ್ರ ವಹಿಸಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಹೇಳಿದರು. 
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ, ರಾಜ್ಯ ಪತ್ರಗಾರ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ, ‘ಬಳ್ಳಾರಿ ಜಿಲ್ಲೆಯ ಸ್ವಾತಂತ್ರೃ ಹೋರಾಟಗಾರರು ಮತ್ತು ಏಕೀಕರಣ ಚಳವಳಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 
ದೇಶದಲ್ಲಿ ಧರ್ಮ, ಜಾತಿ, ಲಿಂಗ ಭೇದದ ಹಂಗು ತೊರೆದು ಮಾತನಾಡಬೇಕಿದೆ. ಸ್ವಾತಂತ್ರೃ ಹೋರಾಟದಲ್ಲಿ ಗಾಂಧೀಜಿ ಅನುಯಾಯಿಗಳೊಂದಿಗೆ ಕ್ರಾಂತಿಕಾರಿಗಳ ಹೋರಾಟದ ಪಾಲೂ ಅಷ್ಟೇ ಇತ್ತು.
 ಬ್ರಿಟಿಷ್‌ರನ್ನು ದೇಶದಿಂದ ಹೊರ ಹಾಕಲು ಅನೇಕ ಚಳವಳಿಗಳು ನಡೆದಿವೆ. ಗಾಂಧೀಜಿ ಹುಟ್ಟು ಹಾಕಿದ ಕಾಂಗ್ರೆಸ್‌ನಿಂದ ದೇಶಕ್ಕೆ ಸ್ವಾತಂತ್ರೃ ಸಿಕ್ಕಿಲ್ಲ, ಇದಕ್ಕಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಕ್ರಾಂತಿಕಾರಿ ಹೋರಾಟ ಹೆಚ್ಚು ಬಲ ತುಂಬಿದೆ ಎಂದರು.
ಶಾಸಕ ಕೃಷ್ಣನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದ ಇತಿಹಾಸ ತಿಳಿದುಕೊಂಡು, ಮಕ್ಕಳಿಗೆ ಇತಿಹಾಸದ ಮಹತ್ವ ಸಾರಬೇಕು ಎಂದರು. 
ಪ್ರಾಚಾರ್ಯ ಎಂ.ವಿಜಯಕುಮಾರ, ಪ್ರಾಧ್ಯಾಪಕರಾದ  ಡಾ.ಭೀಮಪ್ಪ, ಡಾ.ಬೂದನೂರು ಸುರೇಶ, ಉಮಾದೇವಿ, ಸುನಿತಾ, ಡಾ.ಸತೀಶ ಪಾಟೀಲ್, ಡಾ.ವೆಂಕಟೇಶ, ಶಂಕರ ಬೆಟಗೇರಿ, ಎಂ.ಪಿ.ಎಂ.ದಯಾನಂದ ಸ್ವಾಮಿ, ಡಾ.ಕೆ.ಸತೀಶ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net