ಶಿಣದಿಂದ ದೇಶ ಅಭಿವೃದ್ಧಿ ಸಾಧ್ಯ

The country can develop through education.
The country can develop through education.
Published on
ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರ ಹಾಗೂ ದಾನಿಗಳ ನೆರವನಿಂದ ಸಿಗುವ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಣವಂತರಾಗಬೇಕು. ಶಿಣದಿಂದಲೇ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದು ಗ್ರಾಪಂ ಮಾಜಿ ಅಧ್ಯ ಜಿ.ಎನ್​ ಕೋದಂಡರಾಮಯ್ಯ ತಿಳಿಸಿದರು.
ತಾಲೂಕಿನ ಯಲ್ದೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆಯ ಮಗುವು ಉತ್ತಮ ಶಿಣ ಪಡೆಯಬೇಕು. ಸರ್ಕಾರದ ಜತೆಗೆ ದಾನಿಗಳು ಕೈಜೋಡಿಸಬೇಕು. ಇದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲದಂತೆ ಉತ್ತಮ ಶಿಣ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ ಎನ್​.ಹರಿಕುಮಾರ್​ ಮಾತನಾಡಿ, ಮಕ್ಕಳೇ ಈ ದೇಶದ ನಿಜವಾದ ಸಂಪತ್ತು. ಯಾವುದೇ ಜಾತಿ, ಧರ್ಮ, ಭಾಷೆಯ ಬೇದಭಾವವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನವಾದ ಕಲಿಕೆಯ ಅವಕಾಶಗಳನ್ನು ಒದಗಿಸಿಕೊಡಬೇಕು ಎಂದರು.
ನ್ಯಾಷನಲ್​ ಹೈಸ್ಕೂಲ್​ ಶಾಲೆಯ ಮೇಲುಸ್ವಾರಿ ಸಮಿತಿ ಸದಸ್ಯ ಎಂ.ಪಿ ರಮೇಶ್​ ಬಾಬು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ದಾಖಲು ಮಾಡಿಕೊಂಡು ಉತ್ತಮ ವಿದ್ಯಾವಂತರನ್ನಾಗಿ ಮಾಡಲಾಗುತ್ತದೆ. ಜತೆಗೆ ಅಂತಹ ವಿದ್ಯಾರ್ಥಿಗಳು ತಮ್ಮ ಮುಂದಿನ ದಿನಗಳಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಮರ್ಥರಾಗಿರುತ್ತಾರೆ ಎಂದು ಹೇಳಿದರು.
ಪ್ರಥಮ ದರ್ಜೆಯ ಗುತ್ತಿಗೆದಾರ ಪ್ರಶಾಂತ್​ ವಿ ರೆಡ್ಡಿ ತಮ್ಮ ತಂದೆ ಅವರ ನೆನಪಿನಲ್ಲಿ ಶಾಲಾ ಮಕ್ಕಳಿಗೆ ನೋಟ್​ ಪುಸ್ತಕ ವಿತರಿಸಿದರು.
ಮುಖ್ಯ ಶಿಕಿ ಎಂ.ಮುನಿರತ್ನಮ್ಮ, ಸಹ ಶಿಕರಾದ ಎನ್​.ನಳಿನಿ, ಆದಿಲ್​ ಪಾಷಾ, ಲಕ್ಷಿ$್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net