ಶೈಕ್ಷಣಿಕ ಚಿಂತನೆಗೆ ಮಠಗಳ ಕೊಡುಗೆ ಅಪಾರ

ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ  ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ೧೧೧ನೇ ಜಯಂತಿ ಮಹೋತ್ಸವದಲ್ಲಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಚನ್ನಾರೆಡ್ಡಿ ಪಾಟೀಲ್, ಮಹೇಶರೆಡ್ಡಿ ಮುದ್ನಾಳ, ಪ್ರಕಾಶ ಅಂಗಡಿ ಇತರರಿದ್ದರು.
ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ೧೧೧ನೇ ಜಯಂತಿ ಮಹೋತ್ಸವದಲ್ಲಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಚನ್ನಾರೆಡ್ಡಿ ಪಾಟೀಲ್, ಮಹೇಶರೆಡ್ಡಿ ಮುದ್ನಾಳ, ಪ್ರಕಾಶ ಅಂಗಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಮಠಕಲ್ ಖಾಸಾಮಠ ಶ್ರೀಗಳ ಅಭಿಮತ
  • ಶರಣ ಸಾಹಿತ್ಯ ಪರಿಷತ್ ಕೃತಿಗಳ ಬಿಡುಗಡೆ
ಯಾದಗಿರಿ :

ಮೈಸೂರಿನ ಸುತ್ತೂರು ಮಠದ ೨೩ನೇ ಪೀಠಾಧಿಕಾರಿಯಾಗಿದ್ದ ಲಿಂ.ಪೂಜ್ಯಶ್ರೀ ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಅಕ್ಷರ, ಅನ್ನ ಮತ್ತು ಆರೋಗ್ಯ ದಾಸೋಹ ಮಾಡುವ ಮೂಲಕ ಕೋಟ್ಯಂತರ ವಿದ್ಯಾರ್ಥಿಗಳ ಹಾಗೂ ಜನರ ಬದುಕಿಗೆ ದಾರಿದೀಪವಾಗಿದೆ ಎಂದು ಗುರುಮಠಕಲï ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಹೇಳಿ

ನಗರದ ಕಸಾಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ೧೧೧ನೇ ಜಯಂತಿ ಮಹೋತ್ಸವ ಹಾಗೂ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಕಟಿಸಿದ ಕೃತಿಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಶೈಕ್ಷಣಿಕ ಚಿಂತನೆಗಳಿಗೆ ಮಠ ಮಾನ್ಯಗಳ ಕೊಡುಗೆ ಅಪಾರ ಎಂದರು.
ಅಶೋಕ ಮಳಗಲಿ ಅವರ `ಕಾಲಾತೀತ' ಕೃತಿ ಬಿಡುಗಡೆ ಮಾಡಿದ ಸಾಹಿತಿ ಶಿವಣ್ಣ ಇಜೇರಿ, ಇನ್ನೊಬ್ಬರ ನೋವಿಗೆ ಸ್ಪಂದಿಸುವ, ಮತ್ತೊಬ್ಬರ ಕಣ್ಣೀರು ಒರೆಸುವವರೆ ನಿಜವಾದ ಶರಣರು. ಸತ್ಯಕ್ಕ, ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಶರಣರು ಪ್ರಾಮಾಣಿಕತೆ ಪ್ರತಿನಿಽಯಂತಿದ್ದರು. ಆದರೆ, ಇಂದು ನಮ್ಮಲ್ಲಿ ಕನಿಷ್ಠ ಪ್ರಾಮಾಣಿಕತೆಯೂ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಶರಣಗೌಡ ಪಾಟೀಲ ಕೃತಿ ಪರಿಚಯ ಮಾಡಿದರು.
ಡಾ.ಪ್ರದೀಪ ಹೆಬ್ರಿ ಅವರ `ಅತ್ಯುನ್ನತ ಅಮರತ್ವ' ಕೃತಿ ಬಿಡುಗಡೆ ಮಾಡಿದ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಬಸವಾದಿ ಶರಣರ ವಿಚಾರಗಳನ್ನು ಕೇವಲ ಆಚರಿಸದೆ ಅವುಗಳನ್ನು ಅನುಸರಿಸಬೇಕು ಎಂದು ತಿಳಿಸಿದರು. ಕೃತಿ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಲಬುರಗಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿದರು.
ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಉದ್ಘಾಟಿಸಿ, ೧೨ನೇ ಶತಮಾನದ ಶರಣರ ಆನುಭಾವಿಕ ವಚನಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶರಣ ಸಾಹಿತ್ಯ ಪರಿಷತ್ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಹಾಪುರ ತಾಲ್ಲೂಕು ಘಟಕ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ವೇದಿಕೆಯಲ್ಲಿದ್ದರು. ಡಾ.ಭೀಮರಾಯ ಲಿಂಗೇರಿ ನಿರೂಪಿಸಿದರು. ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಡಾ.ಎಸ್.ಎಸ್.ನಾಯಕ ವಂದಿಸಿದರು.ವಚನಕAಠ ಪಾಠ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
"

ವಿಶ್ವದ ಅತಿ ವಿರಳ ಮಹಾ ಮಾನವತಾವಾದಿ ಬಸವಣ್ಣನವರ ಕುರಿತ ಆತ್ಮೋನ್ನತಿಯ ಅಮರತ್ವ ಕೃತಿ ಅವರ ವಚನಗಳ ಆಧಾರದ ಮೇಲೆ ನಿರ್ಮಾಣಗೊಂಡಿದೆ. ಬಸವಣ್ಣನವರಂಥ ಮೇರು ಪುರುಷರ ವ್ಯಕ್ತಿತ್ವಕ್ಕೆ ಎಲ್ಲಿಯೂ ಚ್ಯುತಿ ತರದೆ ಜೀವನ ಇತಿಹಾಸದ ಕುರಿತು ಇನ್ನಷ್ಟು ಬೆಳಕು ಚೆಲ್ಲುವಂತಿದೆ.| ಶಿವರಂಜನ ಸತ್ಯಂಪೇಟೆಲೇಖಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net