ವಿಶ್ವದಲ್ಲಿ ಫೆಡರಲ್, ಯೂನಿಟರಿ, ರಿಟರ್ನ್ ಮತ್ತು ಅನ್ ರಿಟರ್ನ್ ಸಂವಿಧಾನಗಳಿವೆ. ನಮ್ಮದು ಲಿಖಿತ ಸಂವಿಧಾನ. ಸಂವಿಧಾನ ಅಂಗೀಕಾರಕ್ಕೆ 285 ಸದಸ್ಯರ ಪೈಕಿ 284 ಮಂದಿ ಸಹಿ ಹಾಕಿದರು. ಓರ್ವ ಮಾತ್ರ ಹಾಕಲಿಲ್ಲ. ಹೀಗಾಗಿ, ಎಲ್ಲರಿಗೂ ಒಪ್ಪಿಗೆವಾಗುವಂಥ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದರು. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮ ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ, ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು ಎಂದು ಸಿದ್ದರಾಮಯ್ಯ ತಿಳಿಸಿದರು.