ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ

ಸವದತ್ತಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಶಾಸಕ ವಿಶ್ವಾಸ ವೈದ್ಯ ಪೊಲೀಸ್​ ಇಲಾಖೆ, ಎನ್​ಸಿಸಿ ಹಾಗೂ ಗೃಹರಕ್ಷ ದಳದಿಂದ ಧ್ವಜ ವಂದನೆ ಸ್ವೀಕರಿಸಿದರು.
ಸವದತ್ತಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಶಾಸಕ ವಿಶ್ವಾಸ ವೈದ್ಯ ಪೊಲೀಸ್​ ಇಲಾಖೆ, ಎನ್​ಸಿಸಿ ಹಾಗೂ ಗೃಹರಕ್ಷ ದಳದಿಂದ ಧ್ವಜ ವಂದನೆ ಸ್ವೀಕರಿಸಿದರು.
Published on
ಸವದತ್ತಿ: ಡಾ.ಬಿ.ಆರ್​.ಅಂಬೇಡ್ಕರ್​ ರಚಿಸಿದ ಭಾರತ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಪ್ರಯತ್ನದಿಂದ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸವದತ್ತಿಯಲ್ಲಿ ಒಳಚರಂಡಿ, ರಸ್ತೆ, ಮೂಲ ಸೌಕರ್ಯ ಹಾಗೂ ನಗರ ಸೌಂದಯೀರ್ಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ಅಲ್ಲದೆ, ಬಹು ವರ್ಷಗಳಿಂದ ಸಾಧ್ಯವಾಗದ ಸ್ಥಳಿಯ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ತಾಲೂಕಿನಲ್ಲಿ ಶಿಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
ವಿವಿಧ ರೂಪಕಗಳು, ಸ್ಕೌಟ್ಸ್​ ಮತ್ತು ಗೆಡ್ಸ್​, ಪೊಲೀಸ್​, ಗೃಹರಕ ದಳ, ಎನ್​ಸಿಸಿ ಹಾಗೂ ಭಾರತ ಸೇವಾದಳ ವಿದ್ಯಾರ್ಥಿಗಳೊಂದಿಗೆ ಭಾರತಮಾತೆಯ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಾಧಕರಾದ ಭೀಮಪ್ಪ ಜೈನರ, ನಜೀರ್​ ಗೋರಿನಾಯ್ಕ, ಪ್ರವಿಣ ಹೆಬ್ಬಳ್ಳಿ, ನಿಂಗಪ್ಪ ಗುರ್ಲಹೊಸೂರ, ಅರಾತ ನಾಶಿಪುಡಿ ಹಾಗೂ ಬಾಳು ಹೊಸಮನಿ ಅವರನ್ನು ಸನ್ಮಾನಿಸಲಾಯಿತು.
ಎಪಿಎಂಸಿ ಅಧ್ಯ ಚಂದ್ರಶೇಖರ ಪೂಜೇರ, ಉಪಾಧ್ಯ ಮಾರುತಿ ಬಸಲಿಗುಂದಿ, ತಾಪಂ ಇಒ ಆನಂದ ಬಡಕುಂದ್ರಿ, ಸಿಪಿಐ ಸುರೇಶ ಬೆಂಡೆಗುಂಬಳ, ಗ್ರೇಡ&2 ತಹಸೀಲ್ದಾರ್​ ಎಂ.ಎನ್​.ಮಠದ, ಸೋಷಿಯಲ್​ ವಲಯ ಅರಣ್ಯಾಧಿಕಾರಿ ನೀಹಾ ತೊರಗಲ್ಲ, ಮೈತ್ರಾದೇವಿ ವಸ್ತ್ರದ, ರತ್ನಾ ಕದಂ, ಶಶಿಧರ ವನಕಿ, ಶಿವಾನಂದ ಪಟ್ಟಣಶೆಟ್ಟಿ, ಕಿರಣ ಕುರಿ, ಅಶೋಕ ಮುರಗೋಡ, ಬಸವರಾಜ ಬ್ಯಾಳಿ, ಶಿವಕುಮಾರ ರಾಠೋಡ, ಜಗದೀಶ ಶಿರಸಂಗಿ, ಕಲ್ಲಪ್ಪ ಪೂಜೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net