ಬೀಳಗಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಬ್ಲಾಕ್, ಬೂತ್‌ಮಟ್ಟದ ಬಿಎಲ್‌ಎಗಳ ಕಾರ್ಯಾಗಾರವನ್ನು ಶಾಸಕ ಜೆ.ಟಿ. ಪಾಟೀಲ ಉದ್ಘಾಟಿಸಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಹಣಮಂತ ಕಾಖಂಡಕಿ, ಮಲ್ಲಯ್ಯ ಕಂಬಿ, ಮಲ್ಲಪ್ಪ ಕಾಳಗಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಜೆ.ಟಿ. ಪಾಟೀಲ ಹೇಳಿಕೆ
ಬೂತ್‌ಮಟ್ಟದ ಬಿಎಲ್‌ಎಗಳ ಕಾರ್ಯಾಗಾರ
ಬೀಳಗಿ: ವಾಮ ಮಾರ್ಗದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ತಂತ್ರವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮತದಾನ ಬಹಳ ಪವಿತ್ರವಾಗಿದ್ದು, ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕುತಂತ್ರ ನಡೆಸುತ್ತಿದೆ. ಮತಪಟ್ಟಿಯಲ್ಲಿನ ಯಾವುದೇ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಬೂತ್‌ಮಟ್ಟದ ಬಿಎಲ್‌ಎಗಳ ಜವಾಬ್ದಾರಿ ಎಂದು ಶಾಸಕ ಜೆ.ಟಿ. ಪಾಟೀಲ
ಹೇಳಿದರು.
ತಾಲೂಕಿನ ಕೋರ್ತಿ ಪುನರ್ವಸತಿ ಕೇಂದ್ರದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಬೀಳಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬ್ಲಾಕ್, ಬೂತ್‌ಮಟ್ಟದ ಬಿಎಲ್‌ಎಗಳ ಕಾರ್ಯಾಗಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರೀಕ್ಕರಣೆ (ಎಸ್‌ಐಅರ್) ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೂತ್‌ಮಟ್ಟದ ಕಾರ್ಯಕರ್ತರು ಪ್ರತಿಯೊಂದು ಗ್ರಾಮದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿ, ಬಿಜೆಪಿಯವರು ಕುತಂತ್ರದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಬೇಕು ಎನ್ನುವ ದಿಸೆಯಲ್ಲಿ ಎಸ್‌ಐಅರ್ ಮೂಲಕ ಮತದಾರರ ಸಂಖ್ಯೆ ಕಡಿಮೆ ಮಾಡುವ ಉದ್ದೇಶ ಅವರದ್ದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಪ್ರತಿಯೊಂದು ಮನೆಗೆ ಸರ್ಕಾರದ ಯೋಜನೆಗಳ ಲಾಭವನ್ನು ತಿಳಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಹಣಮಂತ ಕಾಖಂಡಕಿ, ಎಂ.ಎಲ್. ಕೆಂಪಲಿಂಗನ್ನವರ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ, ಮಲ್ಲಪ್ಪ ಕಾಳಗಿ, ರಾಮನಗೌಡ ಪಾಟೀಲ, ಅಣವೀರಯ್ಯ ಪ್ಯಾಟಿಮಠ, ಜಿ.ಆರ್. ಪಾಟೀಲ, ಮಹಾದೇವ ಹಾದಿಮನಿ, ಲಚ್ಚಪ್ಪ ಒಂಟಗೋಡಿ, ಮಹಿಳಾ ಅಧ್ಯಕ್ಷೆ ಆಶಾ ಬೀಳಗಿ ಇತರರಿದ್ದರು.