ಕೇಂದ್ರ ಸರ್ಕಾರದ ಬೆಲೆ ಏರಿಕೆ ತೀರ್ಮಾನ ಖಂಡನೀಯ. ನಾವು ಇದರ ಹೋರಾಟ ಮುಂದುವರಿಸುತ್ತೇವೆ. ರಾಜ್ಯ ಬಿಜೆಪಿ ನಾಯಕರಾದ ವಿಜಯೇಂದ್ರ, ಅಶೋಕ್ ಎಲ್ಲರೂ ಬೊಗಳೆ ದಾಸರು. ಕೇವಲ ಖಾಲಿ ಮಾತು, ಟೀಕೆಗೆ ಮಾತ್ರ ಸೀಮಿತ. ಅವರಿಗೆ ಬಡವರು, ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ, ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಹೋರಾಟ ಆರಂಭಿಸಲಿ. ಬೇರೆ ಎಲ್ಲಾ ವಿಚಾರದ ಬಗ್ಗೆ ಮಾತನಾಡುವವರು, ಈ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ.