ಕೇಂದ್ರ ಸರ್ಕಾರ ಬಂಡವಾಳಶಾಹಿ ಪರ

The central government is pro-capitalist.
The central government is pro-capitalist.
Published on
ಗುಬ್ಬಿ: ಅಖಿಲ ಭಾರತ ಸರ್ವಾತ್ರಿಕ ಮುಷ್ಕರಕ್ಕೆ ತಾಲೂಕಿನಲ್ಲಿ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು.
ಪಟ್ಟಣದಲ್ಲಿ ಜಮಾಯಿಸಿದ ಕಾರ್ಮಿಕ ಸಂಘಟನೆ, ರೈತ ಸಂಘ, ಅಂಗನವಾಡಿ ನೌಕರರ ಸಂಘ, ಬಿಸಿಯೂಟ ತಯಾರಕ ಸಂಘ, ಪ್ರಾಂತ ರೈತ ಸಂಘ ಸೇರಿ ಅನೇಕ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ಮನವಿ ಮಾಡಿದ್ದರು. ಶಾಲಾ& ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್​ಗಳು, ಬಸ್​ಗಳು ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸಿದವು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಎಲ್ಲ ಸಂಘಟನೆಯ ಕಾರ್ಯಕರ್ತರು ಮೆರವಣಿಗೆ ಮೂಲಕ ಗುಬ್ಬಿ ವೀರಣ್ಣ ಸರ್ಕಲ್​ ಬಳಸಿ ಬಸ್​ ನಿಲ್ದಾಣ ತಲುಪಿ ಮಾನವ ಸರಪಳಿ ರಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಲೋಕೇಶ್​ ಮಾತನಾಡಿ, ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ. ಬಂಡವಾಳಶಾಹಿಯ ಪರ ಕೇಂದ್ರ ಸರ್ಕಾರ ನಿಂತಿದೆ. ಅವರಿಂದ ಆಗುವ ಕಾರ್ಮಿಕ ಶೋಷಣೆ ಕಾಳಜಿ ತೋರುತ್ತಿಲ್ಲ ಎಂದು ಕಿಡಿಕಾರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೇಂದ್ರ ಸರ್ಕಾರ ರೈತ ಪರ ಯಾವ ನಿಲುವು ತಾಳಿಲ್ಲ. ಕೇವಲ ಬಂಡವಾಳಗಾರರ ಪರ ಕಾನೂನು ಕಾಯ್ದೆ ಮಾಡುತ್ತಾ ರೈತರನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ದೂರಿದರು.
ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಾ ಮಾತನಾಡಿದರು. ಬೆಸ್ಕಾಂ ಎಇಇ ಜಲದೇಶ್​ ಅವರಿಗೆ ಮನವಿ ಸಲ್ಲಿಸಿ, ಬೇಸಿಗೆಯಲ್ಲಿ ಕರೆಂಟ್​ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್​&2 ತಹಸೀಲ್ದಾರ್​ ಶಶಿಕಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್​, ರೈತಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಮಹದೇವಣ್ಣ, ಸತ್ತಿಗಪ್ಪ, ನರಸಿಂಹಮೂರ್ತಿ, ದೇವೇಗೌಡ, ಕನ್ನಿಗಪ್ಪ, ಗಂಗರೇವಣ್ಣ, ಕುಮಾರಸ್ವಾಮಿ, ಬಸವರಾಜು, ಯತೀಶ್​, ಚನ್ನಬಸವಣ್ಣ, ಪ್ರಾಂತ ರೈತ ಸಂಘದ ಅಧ್ಯಕ್ಷ ದೊಡ್ಡನಂಜಯ್ಯ ಸೇರಿ ಬಿಸಿಯೂಟ ತಯಾರಕ ಸಂಘ, ಮುನಿಸಿಪಲ್​ ಕಾರ್ಮಿಕರ ಸಂಘ, ಅಂಗನವಾಡಿ ನೌಕರರ ಸಂಘ, ರೈತಸಂಘದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net