ಕಬ್ಬು ದರ ನಿಗದಿ ಮಾಡೋದು ಕೇಂದ್ರ ಸರ್ಕಾರ sugarcane

ಕಬ್ಬು ದರ ನಿಗದಿ ಮಾಡೋದು ಕೇಂದ್ರ ಸರ್ಕಾರ sugarcane
ಕಬ್ಬು ದರ ನಿಗದಿ ಮಾಡೋದು ಕೇಂದ್ರ ಸರ್ಕಾರ sugarcane
Published on

ಪ್ರಮುಖ ಮುಖ್ಯಾಂಶಗಳು

  • ಕಬ್ಬಿಗೆ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ, ರಾಜ್ಯ ಅಲ್ಲ
  • ಸಿದ್ದರಾಮಯ್ಯ ಹೇಳಿಕೆ
ಬಂಗಾರಪೇಟೆ: ಕಬ್ಬಿಗೆ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ, ರಾಜ್ಯ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. sugarcane
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ದರ ನಿಗದಿಗೆ ಬೆಳಗಾವಿ, ಬಾಗಲಕೋಟೆಯಲ್ಲಿ ರೈತರು ಹೋರಾಟ ಮಾಡುತ್ತಿದ್ದು, ಸಚಿವರಾದ ಸತೀಶ್​ ಜಾರಕಿಹೊಳಿ, ಶಿವಾನಂದ ಪಾಟಿಲ್​, ತಿಮ್ಮಾಪುರ್​, ಎಂ.ಬಿ ಪಾಟೀಲ್​ ಅವರಿಗೆ ರೈತರೊಂದಿಗೆ ಚರ್ಚಿಸಲು ತಿಳಿಸಿದ್ದೇನೆ ಎಂದು ತಿಳಿಸಿದರು. 
ಇನ್ನು 2 ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು, ಕೋಲಾರ&ಬೆಂಗಳೂರು ಮಧ್ಯೆ ರೈಲ್ವೆ ಯೋಜನೆಗೆ ಭೂಮಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈಲ್ವೆ ಯೋಜನೆ ಜಾರಿಗೊಳಿಸಿ ಅದರ ಲಾಭ ಪಡೆಯುವುದು ಕೇಂದ್ರ ಸರ್ಕಾರ. ಕೇಂದ್ರಕ್ಕೆ ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಕೊಡುತ್ತೇವೆ. ಆದರೆ 1 ರೂ. ನಲ್ಲಿ ನಮಗೆ ವಾಪಾಸ್​ ಬರುತ್ತಿರುವುದು ಕೇವಲ 14 ರಿಂದ 15 ಪೈಸೆ ಅಷ್ಟೇ. 85 ಪೈಸೆ ತೆರಿಗೆ ದುಡನ್ನು ಅವರೇ ಇಟ್ಟುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಕುರಿತು ಜೆಡಿಎಸ್​ ಶಾಸಕ ವೆಂಕಟಶಿವಾರೆಡ್ಡಿ ಕೋರ್ಟ್​ ಮೊರೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಇದ್ದಾಗ ಎಷ್ಟು ಕೋಟಿ ಅನುದಾನ ಕೊಟ್ಟಿದ್ದರು?. ರಮೇಶ್​ ಕುಮಾರ್​ ಶಾಸಕರಾಗಿದ್ದಾಗ ಎಷ್ಟು ಅನುದಾನ ನೀಡಿದ್ದರು. ಕೇಂದ್ರ ಸರ್ಕಾರ ಈಗ ಆಂಧ್ರ ಹಾಗೂ ಬಿಹಾರಕ್ಕೆ ವಿಶೇಷ ಅನುದಾನ ನೀಡಿದೆ. ಆದರೆ ನಮಗೆ ಯಾಕೆ ನೀಡಲಿಲ್ಲ, ಇದು ತಾರತಮ್ಯ ಅಲ್ವಾ? ಎಂದು ಪ್ರಶ್ನಿಸಿದರು.
ಕೋಲಾರ ಕಡೆಗಣಿಸಿಲ್ಲ : ಕೋಲಾರ ಅಭಿವೃದ್ಧಿ ವಿಚಾರ ಕುರಿತು ಮಾತನಾಡಿದ ಸಿಎಂ, ಕೋಲಾರವನ್ನು ಕಡೆಗಣಿಸಿಲ್ಲ. ಹೆಚ್ಚಿನ ಹಣ ನೀಡಿದ್ದೇನೆ ಎಂದಾಗ ಮಧ್ಯ ಪ್ರವೇಶಿಸಿದ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಜಿಲ್ಲೆಗೆ ಮೆಡಿಕಲ್​ ಕಾಲೇಜ್​ ನೀಡಿದ್ದಾರೆ, ಬಾಲಕರ ಕಾಲೇಜ್​ ನೀಡಿದ್ದಾರೆ, ಹಲವು ಯೋಜನೆಗಳನ್ನು ನೀಡಿದ್ದಾರೆ ಎಂದು ಸಮಜಾಯಿಷಿ ನೀಡಿದರು. ಮೆಡಿಕಲ್​ ಕಾಲೇಜ್​ ಯೋಜನೆ ಕೈ ಬಿಟ್ಟಿಲ್ಲ, ಪರಿಗಣಿಸಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net