ಕೃಷ್ಣಮೃಗ ಬೇಟೆಯಾಡಿದ್ದವ ಶರಣು

surrendered
surrendered
Published on
ಮಧುಗಿರಿ: ತಾಲೂಕಿನಲ್ಲಿ ಇತ್ತೀಚೆಗೆ ಕೃಷ್ಣಮೃಗವನ್ನು ಬೇಟೆಯಾಡಿ ಸಾಗಿಸಲು ಯತ್ನಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ಕಂಡು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ ಆರೋಪಿ ಬುಧವಾರ ಅರಣ್ಯ ಇಲಾಖೆಯ ಕಚೇರಿಗೆ ಬಂದು ಶರಣಾಗತನಾಗಿದ್ದಾನೆ. surrendered
ಬೆಂಗಳೂರು ಉತ್ತರ ಸಾದರಹಳ್ಳಿ ಅಂಚೆ ನವರತ್ನ ಅಗ್ರಹಾರದ ನಿವಾಸಿ ಸಂದೀಪ್​ ಬಂಧಿತ.
ಮಧುಗಿರಿ ಅರಣ್ಯ ವಲಯದ ಕೊಡಿಗೆನಹಳ್ಳಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿಗಳು ಶ್ರಾವಂಡನಹಳ್ಳಿ ಹೊರವಲಯದಲ್ಲಿ ರಾತ್ರಿ ಗಸ್ತ್ತಿನಲ್ಲಿದ್ದಾಗ ಗೌರಿಬಿದನೂರು- &ಶ್ರಾವಂಡನಹಳ್ಳಿ ರಸ್ತೆಯಲ್ಲಿ ಒಂದು ವಾಹನವು ವೇಗವಾಗಿ ಬರುತ್ತಿರುವುದನ್ನು ಕಂಡು ಬ್ಯಾಟರಿ ಬೆಳಕಿನ ಸಹಾಯದಿಂದ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆಗ ಆರೋಪಿ ವಾಹನವನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಸಾಗಿದ್ದಾನೆ. ಶ್ರಾವಂಡನಹಳ್ಳಿ ರಸ್ತೆ ತಿರುವಿನಲ್ಲಿ ರಸ್ತೆಬದಿಯ ನಾಮಫಲಕಕ್ಕೆ ಡಿಕ್ಕಿ ಹೊಡೆದಾಗ ವಾಹನ ಬಿಟ್ಟು ಪರಾರಿಯಾಗಿದ್ದ.
ಸದರಿ ವಾಹನ ಪರಿಶೀಲಿಸಿದಾಗ ಪ್ಲಾಸ್ಟಿಕ್​ ಚೀಲಗಳಲ್ಲಿ ಅಡಗಿಸಿಟ್ಟಿದ್ದ ಒಂದು ಗಂಡು ಕಪ್ಪು ಜಿಂಕೆ (ಕೃಷ್ಣಮೃಗ) ಹಾಗೂ ಮೊಲದ ಮೃತದೇಹ ಪತ್ತೆಯಾಗಿದ್ದವು. ಇದಲ್ಲದೆ, ಬೇಟೆಗೆ ಬಳಸಲಾಗಿದ್ದ ಎಂ3 ಇಂಪ್ಯಾಕ್ಟ್​ ಪವರ್​ ಪ್ಲೆನಂ 720 ಏರ್​ ರೈಫಲ್​, ಎಫ್​ಎಕ್ಸ್​ ಏರ್​ಗನ್​, ವಿವಿಧ ಗಾತ್ರದ ಪೆಲ್ಲೆಟ್ಸ್​, ಮ್ಯಾಗಜಿನ್​, ಹೈ ಪ್ರೆಶರ್​ ಪೋರ್ಟ್​ಬಲ್​ ಕಂಪ್ರೆಸರ್​, ಪವರ್​ ಸಪ್ಲೆ ಇನ್ವರ್ಟರ್​, ಶೋಧಕ್ಕಾಗಿ ಬಳಸುವ ಹೆಡ್​ ಟಾರ್ಚ್​ ಸೇರಿ ಇತರೆ ಅಪರಾಧ ಸಂಬಂಧಿತ ವಸ್ತುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net