ಡಾಬಾದಲ್ಲಿ ಕುಳಿತು ಕಡತ ಪರಿಶೀಲಿಸಿದ ಬೆಸ್ಕಾಂ ಸಿಬ್ಬಂದಿ?

The BESCOM staff who sat in the dabba and checked the file?
The BESCOM staff who sat in the dabba and checked the file?
Published on
ಗುಡಿಬಂಡೆ: ಬೆಸ್ಕಾಂ ಸಿಬ್ಬಂದಿ ಡಾಬಾದಲ್ಲಿ ಕುಳಿತುಕೊಂಡು ಕಚೇರಿ ಕಡತಗಳನ್ನು ಪರಿಶೀಲಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.
ಟೇಬಲ್​ ಮೇಲೆ ಮದ್ಯದ ಬಾಟಲಿಗಳು, ಊಟದ ಪೊಟ್ಟಣಗಳನ್ನಿಟ್ಟುಕೊಂಡು ಸಿಬ್ಬಂದಿ ದಾಖಲೆ ಪರಿಶೀಲಿಸುತ್ತ ಇಲಾಖೆ ವಿಚಾರವಾಗಿ ಮಾಹಿತಿ ಸಂಗ್ರಹಿಸುತ್ತಿರುವುದು ವಿಡಿಯೋದಲ್ಲಿದೆ. ಕಚೇರಿ ಬಿಟ್ಟು ಬಾರ್​, ಡಾಬಾಗಳಲ್ಲಿ ಕರ್ತವ್ಯ ನಿರ್ವಹಣೆಗೆ ಆಕ್ರೋಶ ವ್ಯಕ್ತವಾಗಿದೆ.
ಪ್ರಕರಣದ ಹಿನ್ನೆಲೆ: ಮೊದಲು ಗುಡಿಬಂಡೆ ಉಪ ವಿಭಾಗ ವ್ಯಾಪ್ತಿಯ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯ ಹೋಬಳಿಯ ಗುಟ್ಟೇನಹಳ್ಳಿಯ ಹೊಸಕೆರೆಗೆ ಹೋಗುವ ರಸ್ತೆ ಪಕ್ಕದಲ್ಲಿ 60 ಕೆ.ವಿ. ಸಾಮರ್ಥ್ಯದ ಎರಡು ಟಿಸಿ ಇದ್ದವು. ಈ ಪೈಕಿ ಒಂದು ನಾಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರಾದ ಗಂಗಪ್ಪ ಮತ್ತು ನರೇಂದ್ರ ಬೆಸ್ಕಾಂಗೆ ದೂರು ನೀಡಿದ್ದರು.
ಈ ಸಂಬಂಧ ಪರಿಶೀಲನೆ ಪ್ರಕ್ರಿಯೆಯನ್ನು ಡಾಬಾದಲ್ಲಿ ಕುಳಿತುಕೊಂಡು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬೆಸ್ಕಾಂ ಅಧಿಕಾರಿಗಳೇ, ಟಿಸಿಯನ್ನು ಬೇರೆ ಕಡೆಗೆ ವರ್ಗಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲೋಪ ತಿಳಿದುಕೊಳ್ಳಲು ಸೂಕ್ತ ತನಿಖೆ ನಡೆಸಬೇಕು. ಹಾಗೆಯೇ ಡಾಬಾದಲ್ಲಿ ಕುಳಿತು ಮದ್ಯಪಾನ ಮಾಡುತ್ತ ಕಡತ ಪರಿಶೀಲಿಸಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net