ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಉತ್ಸವ ನಿಮಿತ್ತ ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನಗೊಂಡಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಟ್ಟಣದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ
ಜನರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ
ರಾಯಚೂರು: ಪಟ್ಟಣದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಉತ್ಸವದ ನಿಮಿತ್ತ ಆಯೋಜಿಸಿದ್ದ ನಾಡಿನ ಮೂಲ ಸಾಂಸ್ಕೃತಿಕ ಕಲೆಗಳ ಪ್ರದರ್ಶನಗಳಿಗೆ ಜನರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ.
ಮೂರು ದಿನಗಳ ಕಾಲ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಪ್ರೇಕ್ಷಕರಿಲ್ಲದೆ ಭಣಗುಟ್ಟಿದವು. ಸ್ಥಳೀಯ ರಂಗಭೂಮಿ ಕಲಾವಿದರು, ಹಗಲುವೇಷಧಾರಿಗಳು, ಸಂಘ-ಸಂಸ್ಥೆಗಳು, ಸಮುದಾಯ ಸಂಘಟನೆ ನಡೆಸಿಕೊಟ್ಟ ಪೌರಾಣಿಕ ಮತ್ತು ಸಾಮಾಜಿಕ ನಾಟಕ, ಬಯಲಾಟ ಉತ್ತಮವಾಗಿದ್ದವು.
ಸಿಂಧೂರ ಲಕ್ಷ್ಮಣ, ಕಿತ್ತೂರುರಾಣಿ ಚನ್ನಮ್ಮ ಸೇರಿ ಪುರಾಣ-ಪ್ರವಚನ ಆಧಾರಿತ ಹಲವು ನಾಟಕಗಳು, ಬಯಲಾಟ, ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಲೆಗಳು ಪ್ರದರ್ಶನಗೊಂಡವು. ಆದರೆ, ಮೂರು ದಿನವೂ ರಂಗಭೂಮಿ ಕಲೆ ನೋಡುಗರ ಕೊರತೆ ಎದುರಿಸಿತು. ಉದ್ಘಾಟನೆ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು,
ಶಾಲಾ ಮಕ್ಕಳ ಹಾಜರಿ ಬಿಟ್ಟರೆ ರಾತ್ರಿ ಜನರಿಲ್ಲದೆ ಸಭಾಂಗಣ ಬಿಕೋ ಎನ್ನುತ್ತಿತ್ತು. ಇನ್ನು ಕಲಾವಿದರ ಸ್ನೇಹಿತರು, ಸಂಬಂಧಿಕರು, ಆಯೋಜಕರು, ಪೊಲೀಸರು, ಮುಂದಿನ ಪ್ರದರ್ಶನ ನೀಡುವ ಕಲಾವಿದರಷ್ಟೇ ಪ್ರೇಕ್ಷಕರಾಗಿದ್ದು ವಿಪರ್ಯಾಸ.